ಮೇ 9ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ

Vijayanagara Vani
ಮೇ 9ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ

ಬಹುನಿರೀಕ್ಷಿತ ಎಸ್ಸೆಸ್ಸೆಲ್ಸಿ ‘ಪರೀಕ್ಷೆ 1 ‘ರ ಫಲಿತಾಂಶವನ್ನು ಮೇ 9 ರಂದು ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸಿದ್ಧತೆ ಮಾಡಿಕೊಳ್ಳುತ್ತಿದೆ. ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಬಹುತೇಕ ಪೂರ್ಣಗೊಂಡಿದ್ದು ವಿದ್ಯಾರ್ಥಿಗಳ ಅಂಕಗಳ ಗಣಕೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಹಾಗಾಗಿ ಮೇ 9ರ ಗುರುವಾರ ಫಲಿತಾಂಶ ಪ್ರಕಟಿಸಲು  ಮಂಡಳಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ದಾಖಲೆ ಬರೆಯುತ್ತಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಈ ಬಾರಿ ಕುಸಿತ ಕಾಣುವ ಸಾಧ್ಯತೆ ಹೆಚ್ಚು ಇದೆ.

ಏಕೆಂದರೆ, ಎಲ್ಲ ಪರೀಕ್ಷಾ ಕೇಂದ್ರಗಳು, ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಸುವ ಜೊತೆಗೆ ವೆಬ್ ಕ್ಯಾಸ್ಟಿಂಗ್ ಕೂಡ ಮಾಡಿರುವುದರಿಂದ ರಾಜ್ಯದ ಎಲ್ಲೆಡೆ ಪರೀಕ್ಷೆ ಕಟ್ಟು ನಿಟ್ಟಾಗಿ ನಡೆದಿದೆ. ‘ಕೈಚಳಕ ಮತ್ತು ಕಣ್ಚಳಕ’ಕ್ಕೆ ಅವಕಾಶ ಸಿಗದ ಕಾರಣ ಫಲಿತಾಂಶ ಕುಸಿತವಾದರು, ಆಶ್ಚರ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಹಿಂದಿನ ಎರಡು ವರ್ಷಗಳಲ್ಲಿ ಉತ್ತೀರ್ಣ ಪ್ರಮಾಣ ಕ್ರಮವಾಗಿ ಶೇ.85 ಮತ್ತು ಶೇ.83ರಷ್ಟು ದಾಖಲಾಗಿತ್ತು.

ಶೈಕ್ಷಣಿಕವಾಗಿ ಮುಂದಿರುವ ಕರಾವಳಿ ಜಿಲ್ಲೆಗಳು ಈ ಬಾರಿ ಫಲಿತಾಂಶದಲ್ಲಿ ಮುಂಚೂಣಿಯಲ್ಲಿ ಇರಲಿವೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳ ಫಲಿತಾಂಶ ಎಂದಿನಂತೆ ಕಡಿಮೆ ಇರಲಿದೆ ಎಂದು ಹೇಳಲಾಗಿದೆ. ಮಾರ್ಚ್ ಕೊನೆಯ ವಾರದಲ್ಲಿ ನಡೆದ ಪರೀಕ್ಷೆಗೆ 8.9 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದರು.

ಮೌಲ್ಯಮಾಪನ ಸುವ್ಯವಸ್ಥಿತವಾಗಿ ಮುಗಿದಿದೆ. ಫಲಿತಾಂಶ ಮೇ 9 ಕ್ಕೆ ಹೊರಬಿಳಲಿದೆ, ಉತ್ತೀರ್ಣ ಪ್ರಮಾಣ ಶೇ.60ರ ಆಸುಪಾಸು ಇದ್ದರೂ ಆಶ್ಚರ್ಯವಿಲ್ಲ.

ಕಳೆದ ತಿಂಗಳು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ದಾಖಲೆಯ ಶೇ.81ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.

WhatsApp Group Join Now
Telegram Group Join Now
Share This Article
error: Content is protected !!