ಗುಬ್ಬಿ ಗುಬ್ಬಿ
ಚಿಂವ್ ಚಿಂವ್
ಎಂದು ಕರೆಯುವೆ ಯಾರನ್ನು?
ಆಚೆ ಈಚೆ
ಹೊರಳಿಸಿ ಕಣ್ಣು
ನೋಡುವೆ ಏನನ್ನು ?
ಕವಿವರ್ಯರ ಈ ಸಾಲುಗಳ ಕವಿತೆ ಗುಬ್ಬಚ್ಚಿ ಮತ್ತು ಮನುಷ್ಯರ ನಡುವಿನ ಹತ್ತಿರದ ನಂಟನ್ನು ತೋರುತ್ತದೆ. ನಾವೆಲ್ಲ ಚಿಕ್ಕವರಿದ್ದಾಗ ಮನೆಯಂಗಳದಲ್ಲಿ ಆಡುವ ಗುಬ್ಬಿಗಳ ನೋಡಿ,ಆಡಿ ಸಂತಸ ಪಟ್ಟ ಕ್ಷಣಗಳನೇಕ.ಚಿಕ್ಕ ಮಕ್ಕಳಿಗಂತೂ ಗುಬ್ಬಚ್ಚಿ ತುಂಬಾ ಅಚ್ಚು_ಮೆಚ್ಚು. ಗುಬ್ಬಿ ತನ್ನ ಕುಲದೊಂದಿಗೆ ಅಲ್ಲದೆ ಮನುಷ್ಯ ಮತ್ತು ಕೆಲ ಬೇರೇ ಹಕ್ಕಿಗಳೊಂದಿಗೆ ಸಾಮಾಜಿಕವಾಗಿ ಬೆರೆಯುವ ಹಕ್ಕಿಯಾಗಿದೆ.ಪೂರ್ಣಚಂದ್ರ ತೇಜಶ್ವಿಯವರು ಒಂದೆಡೆ ಹೇಳುತ್ತಾರೆ “ಗುಬ್ಬಚ್ಚಿಗಳು ಮನುಷ್ಯರಿಗೆ ಎಷ್ಟು ಹೊಂದಾಣಿಕೆಯಾಗಿವೆ ಎಂದರೆ ಮನುಷ್ಯರಿಲ್ಲದ್ದರಿಂದ ಅವು ಕಾಡಿನ ವಾತಾವರಣದಲ್ಲಿ ಬೆಳೆಯಲಾರವು” ಎಂದು. ಹಳೆಯ ಕಾಲದಲ್ಲಿ ನಮ್ಮ ಮನೆಗಳ ಗೋಡೆಗಳಲ್ಲಿ ಗೂಡು ಕಟ್ಟಲಿ ಅಂತ ಜಾಗ ಬಿಡುತ್ತಿದ್ದರು. ಮನೆಯ ಮುಂದೆ ಸೂರಿನಡಿಯಲ್ಲಿ ಗೂಡು ಕಟ್ಟಿದರು ಸುಮ್ಮನಿರುತ್ತಿದ್ದರು, ಮನೆಯ ಮುಂಭಾಗದ ಬಂಕದಲ್ಲಿ ದೇವರು_ಹಿರಿಯರ ಫೋಟೋಗಳ ಹಿಂದೆ ಗೂಡು ಕಟ್ಟಲಿಕ್ಕೆ ಅವಕಾಶ ಮಾಡಿಕೊಡುತ್ತಿದ್ದರು.ಮಾತ್ರವಲ್ಲ ನೀರು ಕುಡಿಯಲು ಅನುವಾಗುವಂತೆ ಮಣ್ಣಿನ ಪಾತ್ರೆಯಲ್ಲಿ ನೀರು ಹಾಕಿ ನೇತಾಡಲು ಬಿಡುತ್ತಿದ್ದರು.ಮತ್ತೆ ಕೆಲವರು ತಮ್ಮ ಹೊಲದ ಧಾನ್ಯಗಳ ಅತ್ಯುತ್ತಮವಾದ ಮೊದಲ (ಜೋಳದ) ತೆನೆಯನ್ನು ದೇವಸ್ಥಾನಗಳಲ್ಲಿ ದೇವರ ಹೆಸರಲ್ಲಿ ಗುಬ್ಬಚ್ಚಿಗಳಿಗಾಗಿ ತೂಗು ಬಿಡುತ್ತಿದ್ದರು. ಇದು ಗುಬ್ಬಿಗೂ ಮನುಷ್ಯನಿಗೂ ಇರುವ ಉತ್ತಮ ಸಂಬAಧವನ್ನು ತೋರಿಸುತ್ತದೆ.
ಸಾಮಾಜಿಕ ಜೀವಿ ಗುಬ್ಬಚ್ಚಿ: ಹತ್ತು ಸಾವಿರ ವರ್ಷಗಳಿಂದ ಮನೆ ಗುಬ್ಬಚ್ಚಿ ಮನುಷ್ಯರೊಂದಿಗೆ ನಿಖಟ ಸಂಬAಧ ಹೊಂದಿದೆ ಎಂದು ದಾಖಲೆಗಳು ಸಾರುತ್ತಿವೆ.ಅಧಿಕ ಸಂಖ್ಯೆಯಲ್ಲಿ ವ್ಯಾಪಕವಾಗಿ ಹರಡಿರುವ ಇವು ಮನುಷ್ಯರೊಂದಿಗೆ ಅನ್ಯೋನ್ಯ ಸಂಬAಧ ಹೊಂದಿವೆ.ಹೀಗಾಗಿ ಸಾಂಸ್ಕೃತಿಕ ಪ್ರಾಮುಖ್ಯತೆ ಪಡೆದಿವೆ.ಕೆಲವು ಕಾಲದ ಹಿಂದೆ ಗುಬ್ಬಿಗಳು ಹೊಲದಲ್ಲಿರುವ ಫಸಲನ್ನು ಅಧಿಕ ಸಂಖ್ಯೆಯಲ್ಲಿ ಬಂದು ತಿನ್ನುತ್ತವೆ ಎಂಬ ಕಾರಣಕ್ಕಾಗಿ ನಿರ್ಮೂಲನೆ ಮಾಡಲು ಪ್ರಯತ್ನಿಸಿದಾಗ ಫಸಲಿನ ಇಳುವರಿಯೇ ಕಡಿಮೆಯಾದಾಗ ಇವುಗಳ ಹರಣ ನಿಂತಿತು ಎನ್ನುತ್ತಾರೆ ಕೆಲವರು.ಇವು ಸಂಘ ಜೀವಿಗಳು, ಆಹಾರ ಸಂಪಾದಿಸುವಾಗ ಎಲ್ಲಾ ಋತುವಿನಲ್ಲಿಯೂ ತಮ್ಮದೇ ಆದ ಗುಂಪಿನಲ್ಲಿರುತ್ತವೆ ಕೆಲವೊಮ್ಮೆ ಇತರೆ ಹಕ್ಕಿಗಳೊಡನೆ ಸೇರಿಯೂ ಆಹಾರ ಸಂಗ್ರಹಿಸುತ್ತವೆ. ಮನುಷ್ಯರು ಪಕ್ಕ_ ಪಕ್ಕದಲ್ಲೇ ಮನೆ ಕಟ್ಟಿಕೊಳ್ಳುವಂತೆ ಗುಬ್ಬಿಗಳೂ ಕೂಡ ಆದಷ್ಟು ಪಕ್ಕ_ಪಕ್ಕದಲ್ಲೇ ಗೂಡು ಕಟ್ಟಿಕೊಳ್ಳುತ್ತವೆ.ಒಂದೇ ಗೂಡಿನಲ್ಲಿ ಹೆಣ್ಣು_ಗಂಡು ಗುಬ್ಬಿಗಳು ವಾಸ ಮಾಡುತ್ತವೆ.ಆದಷ್ಟು ಇವು ಏಕಸಂಗಾತಿ (ಏಕಪತ್ನಿ ವ್ರತಸ್ಥರಂತೆ)ಬದುಕುತ್ತವೆ.
ಸಾಮೂಹಿಕ ಸ್ನಾನ: ಸಾಮಾಜಿಕ ಜೀವಿಗಳಾದ ಹೆಚ್ಚು ಗುಬ್ಬಿಗಳು ಸೇರಿ ಒಂದೇ ಬಾರಿ ನೀರಿನಲ್ಲಿ ಸ್ನಾನ ಮಾಡುತ್ತವೆ,ಮತ್ತೊಂದು ವಿಶೇಷವೆಂದರೆ ಧೂಳಿನ ಸ್ನಾನ, ಕೆಲವು ಜಾತಿಯ ಪಕ್ಷಿಗಳು ಧೂಳಿನ ಸ್ನಾನ ಮಾಡುತ್ತವೆ, ಅದರಲ್ಲಿ ಗುಬ್ಬಚ್ಚಿಗಳು ಹೆಚ್ಚು ಸಂಖ್ಯೆಯಲ್ಲಿ ಸೇರಿ ಧೂಳಿನಲ್ಲಿ ಸ್ನಾನ ಮಾಡುತ್ತವೆ, ಆ ಧೂಳು ಗುಬ್ಬಚ್ಚಿಗಳ ರೆಕ್ಕೆಯಲ್ಲಿ ಸೇರುತ್ತದೆ ಆ ಧೂಳಿನಲ್ಲಿರುವ ಇರುವೆ ಎಂತಹ ಚಿಕ್ಕ ಕೀಟಗಳು ಗುಬ್ಬಿಯ ದೇಹದಲ್ಲಿರುವ ಅತಿಚಿಕ್ಕ ಕೀಟಗಳನ್ನು ತಿನ್ನುತ್ತವೆ.ಹಾರುವಾಗ ಗುಬ್ಬಿಗಳ ದೇಹದ ಗ್ರಂಥಿ (ಗ್ಲಾಂಡ್) ಯಿಂದ ಬಿಡುಗಡೆಯಾದ ಎಣ್ಣೆಯ ಅಂಶವನ್ನು ಪುಕ್ಕಗಳ ಎಲ್ಲಾ ಭಾಗಕ್ಕೆ ಹರಡುವಂತೆ ಮಾಡುತ್ತದೆ, ಈ ಎಣ್ಣೆ ರೆಕ್ಕೆಗಳನ್ನು ಸುಲಭವಾಗಿ ಬಾಗುವಂತೆ ಮಾಡುತ್ತವೆ.ವಾತಾವರಣದಿಂದ (ಮಳೆ/ಬಿಸಿಲು) ರಕ್ಷಣೆ ಮಾಡಿಕೊಳ್ಳಲು ಸಹಕರಿಸುತ್ತದೆ ಜೊತೆಗೆ ಹಾರಲು ಸಿದ್ಧ ಗೊಳಿಸುತ್ತದೆ.ಮಾತ್ರವಲ್ಲ ಈ ಎಣ್ಣೆಯು ರೆಕ್ಕೆಗಳಿಗೆ ಗ್ರೀಸ್ ಆಗಿ ಕೆಲಸ ಮಾಡುತ್ತದೆ. ಈ ಎಣ್ಣೆಯಂತಹ ವಸ್ತು ಪುಕ್ಕಗಳಲ್ಲಿ ಸೇರಿರುತ್ತದೆ, ಅದನ್ನು ಹೋಗಲಾಡಿಸಲು ಗುಬ್ಬಚ್ಚಿಗಳು ಧೂಳಿನಲ್ಲಿ ಸ್ನಾನ ಮಾಡುತ್ತವೆ. ಹಾಗೆ ಮಾಡುವಾಗ ಧೂಳಿನ ಕಣಗಳು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತವೆ.ಹೀಗೆ ಧೂಳಿನ ಸ್ನಾನದ ನಂತರ ಒಂದು ಸುತ್ತು ದೇಹ ಸ್ವಚ್ಚವಾಗುತ್ತದೆ,ಇದರಿಂದ ರೆಕ್ಕೆಗಳು ಹಾರಲು ಸುಲಭವಾಗುತ್ತವೆ.ಈಗ ಗುಬ್ಬಚ್ಚಿಗಳು ರೆಕ್ಕೆ ಬಲವಾಗಿಸಿಕೊಂಡು ಕ್ರೀಡಾಳುವಂತೆ ಸಿದ್ಧವಾಗಿ ಹೆಚ್ಚು_ಹೆಚ್ಚು ಹಾರ ಬಲ್ಲವು
ಸಂತಾನಾಭಿವೃದ್ಧಿ:
ಗಂಡು ಗುಬ್ಬಿ ಹೆಣ್ಣು ಗುಬ್ಬಿಯನ್ನು ಲೈಂಗಿಕ ಕ್ರಿಯೆಗೆ ಆಕರ್ಷಿಸಲು ಗೂಡು ಕಟ್ಟಿ ಸಿದ್ಧಪಡಿಸುತ್ತದೆ.ಮತ್ತೆ ಕೆಲವು ಹೆಣ್ಣು ಗುಬ್ಬಿ ಗೂಡು ಕಟ್ಟಲು ಸಿದ್ಧವಾದಾಗ ಗಂಡು ಗುಬ್ಬಿ ಸಹಕರಿಸುತ್ತದೆ, ಮತ್ತೆ ಕೆಲವೆಡೆ ಗಂಡು ಗುಬ್ಬಿ ಏನನ್ನೂ ಮಾಡುವುದಿಲ್ಲ ಎನ್ನುತ್ತಿವೆ ವರದಿಗಳು. ಗುಬ್ಬಚ್ಚಿಯ ಧ್ವನಿ ತುಂಬಾ ಚಿಕ್ಕದು, ಆಗಾಗ ಚಿಲಿಪಿಲಿ ಮಾಡುವ ಈ ಧ್ವನಿಯಲ್ಲಿ ಏರಿಳಿತ ಇರುತ್ತದೆ.ಗಂಡು ಗುಬ್ಬಿ ಸಂತಾನ ಸಮಯದಲ್ಲಿ ಹೆಣ್ಣು ಗುಬ್ಬಿಯನ್ನು ಆಕರ್ಷಿಸಲು ಲಯವಿಲ್ಲದೇ ಪದೇ ಪದೇ ವೇಗವಾಗಿ ಧ್ವನಿ ಮಾಡುತ್ತದೆ-ಇದನ್ನು ಮೋಹಕ ಕರೆ ಎನ್ನಬಹುದು. ಹೆಣ್ಣು ಗುಬ್ಬಿಗಳು ಸಂತಾನಾಭಿವೃದ್ಧಿಯ ಸಮಯದಲ್ಲಿ ಮೊಟ್ಟೆಗಳಿಗೆ ಕಾವು ಕೊಡಲು ಮತ್ತು ಮರಿಗಳಿಗೆ ಆಹಾರ ಕೊಡಿಸಲು ವಿಶಿಷ್ಟ ಶಬ್ಧ ಬಳೆಸುತ್ತವೆ. ಆ ಎರಡು ಜೋಡಿ ಗುಬ್ಬಿಗಳು ಒಪ್ಪಿಗೆಯಿಂದ ಇದ್ದಾಗ ಮೃಧುವಾದ ಧನಿಯಲ್ಲಿ ಚಿಲಿಪಿಲಿಗುಟ್ಟುತ್ತವೆ.ತುಂಬಾ ಸ್ವಾರಸ್ಯಕರ ಮಾತೆಂದರೆ ಗಂಡು ಗುಬ್ಬಚ್ಚಿಗಳು ತನ್ನ ಸಂಗಾತಿಯು ದಾಂಪತ್ಯ ದ್ರೋಹ ಮಾಡಿದ್ದರೆ,ಸಂಗಾತಿಯು ವಿಶ್ವಾಸ ದ್ರೋಹವೆಸಗಿದರೆ ಅವರ ಸಂಸಾರಕ್ಕೆ ಕಡಿಮೆ ಆಹಾರವನ್ನು ಒದಗಿಸುತ್ತವೆ ಎಂದು ಹೊಸ ಸಂಶೋಧನೆಗಳು ತಿಳಿಸುತ್ತಿವೆ. ಯಾಕೆಂದರೆ ಗುಬ್ಬಿಗಳು ಏಕ ಸಂಗಾತಿ ವ್ಯವಸ್ಥೆಯನ್ನು ಒಪ್ಪಿಕೊಂಡ ಪಕ್ಷಿಗಳು. ಆದರೆ ಕೆಲವು ಹೆಣ್ಣು ಗುಬ್ಬಿಗಳು ಗಂಡು ಗುಬ್ಬಿಗೆ ವಿಶ್ವಾಸಾರ್ಹವಾಗಿರುವುದಿಲ್ಲ, ಕೆಲವೊಮ್ಮೆ ಬೇರೆ ಗಂಡು ಗುಬ್ಬಿಯಿಂದ ಮರಿಗಳನ್ನು ಪಡೆದಿರುತ್ತವೆ, ಈ ಮರಿಗಳ ಬಗ್ಗೆ ಗಂಡು ಗುಬ್ಬಿಗೆ ತಿಳಿದು ಬರುತ್ತದೆ,ಅದರಿಂದಾಗಿ ಆ ಮರಿಗಳಿಗೆ ಕಡಿಮೆ ಆಹಾರವನ್ನು ನೀಡುತ್ತದೆ. ಅಕ್ರಮ ಸಂಬAಧದ ಬಗ್ಗೆ ಗಂಡು ಗುಬ್ಬಿ ತನ್ನ ಸಂಗಾತಿ ಹೆಣ್ಣು ಗುಬ್ಬಿ ಎಷ್ಟು ಕಾಲ ತನ್ನ ಗೂಡಿನಿಂದ ದೂರವಿತ್ತು ಎನ್ನು ಲೆಕ್ಕಾಚಾರದ ಮೇಲೆ ತಿಳಿದುಕೊಳ್ಳುತ್ತದೆ ಎಂದು ಸಂಶೋಧಕರು ಕಂಡುಕೊAಡಿದ್ದಾರೆ.
ಗುಬ್ಬಚ್ಚಿಯ ಗಾತ್ರ; ನಮ್ಮ ಸುತ್ತಲಿನ ಗುಬ್ಬಚ್ಚಿಯು ಸಾಮಾನ್ಯವಾಗಿ ೧೬ ಸೆಂ.ಮೀ ಉದ್ದವಿರುತ್ತದೆ,ವಿಶಾಲ ಎದೆ,ದುಂಡಗಿನ ತಲೆ,ಬಲವಾದ ಕೊಕ್ಕು, ದ್ರವ್ಯರಾಶಿ (ತೂಕ)ಯಲ್ಲಿ ಅಂದಾಜು ೨೪ ಗ್ರಾಂ.ನಿAದ ೪೦ ಗ್ರಾಂ ಇರುತ್ತದೆ.ಹೆಣ್ಣು ಗುಬ್ಬಿ ಸಹಜವಾಗಿ ಕಡಿಮೆ ತೂಕ ಹೊಂದಿರುತ್ತದೆ.ಗAಡು ಗುಬ್ಬಚ್ಚಿ ಕೆಂಪು ಬೆನ್ನು ಮತ್ತು ಬೂದು ಕೆಳಭಾಗವನ್ನು ಹೊಂದಿರುತ್ತವೆ.ಹೆಣ್ಣು ಗುಬ್ಬಿ ಬಿಳಿ ಮತ್ತು (ತೆಳು) ಬೂದು ಬಣ್ಣದ ಹೊಂದಿರುತ್ತದೆ.
ಗುಬ್ಬಚ್ಚಿಯ ಆಹಾರ:ನಮ್ಮ ಸುತ್ತಲಿನ ಗುಬ್ಬಚ್ಚಿಗಳು ಸಾಮಾನ್ಯವಾಗಿ ಧಾನ್ಯಗಳನ್ನು ಮತ್ತು ಕಳೆ ಬೀಜಗಳನ್ನು ತಿನ್ನುತ್ತವೆ,ಕೆಲವುಕಡೆ ನಗರ ಪ್ರದೇಶಗಳಲ್ಲಿ ಕಸದ ಪಾತ್ರೆಯಲ್ಲಿನ ಉಳಿದ ಆಹಾರ ತುಣುಕುಗಳನ್ನು, ಕ್ರಿಮಿಕೀಟಗಳನ್ನು ತಿನ್ನುತ್ತವೆ.ಕಾಳುಗಳಲ್ಲಿ ಮೊದಲ ಆದ್ಯತೆ ಜೋಳ ನಂತರ ಗೋಧಿ, ಓಟ್ಸ್, ಮೆಕ್ಕೆ ಜೋಳ. ನಗರದ ಭಾಗದಲ್ಲಿ ದ್ರಾಕ್ಷಿ, ಚರ‍್ರಿ ಹಣ್ಣು, ಬ್ರೆಡ್ ಮತ್ತು ಕೆಲವು ಸಸ್ಯ ಪದಾರ್ಥಗಳನ್ನು ತಿನ್ನುತ್ತವೆ.
ಗುಬ್ಬಚ್ಚಿಯ ಆಯುಷ್ಯ:ಇವುಗಳ ವಯಸ್ಸು ಭಾರತದಲ್ಲಿ ೧೦ ವರ್ಷಗಳ ಒಳಗೆ ಎಂದಿದ್ದಾರೆ ಸಂಶೋಧಕರು.ಸರಾಸರಿ ವಯಸ್ಸು ೪_೫ ವರ್ಷಗಳು. ತುಂಬಾ ಹಳೆಯ ಕಾಲದಲ್ಲಿ ಕೆಲವು ಕಡೆ ಸಂಶೋಧಕರು ತಮ್ಮ ಸಂಶೋಧನೆಯಡಿಯಲ್ಲಿ ೨೩ ವರ್ಷಗಳ ಕಾಲ ಗುಬ್ಬಚ್ಚಿ ಬದುಕಿದ್ದೂ ಇದೆ ಎಂದಿದ್ದಾರೆ.ಡೆನ್ಮಾರ್ಕಿನಲ್ಲಿ ರಿಂಗ್ ಮಾಡಿದ (ಸಂಶೋಧನೆಗೆ ಗುರುತಿಸಿದ) ಗುಬ್ಬಚ್ಚಿ ೧೯ ವರ್ಷ ೯ ತಿಂಗಳು ಬದುಕಿತ್ತು ಎಂದು ತಜ್ಞರು ಹೇಳುತ್ತಾರೆ.
ಇಳಿಯುತ್ತಿರುವ ಗುಬ್ಬಚ್ಚಿಗಳ ಸಂಖ್ಯೆ:ಜಾಗತಿಕವಾಗಿ ಗುಬ್ಬಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬುದು ಎಲ್ಲರ ಗಮನಕ್ಕೆ ಬಂದಿದೆ, ಅದಕ್ಕೆ ಹಲವಾರು ಕಾರಣಗಳಿವೆ ಮುಖ್ಯವಾದ ಕಾರಣಗಳು ಗ್ರಾಮೀಣ ಪ್ರದೇಶಗಳಲ್ಲೂ ಕಾಳು ಕೇರುವುದು, ಚೆಲ್ಲುವುದು, ಒಣಗಿ ಹಾಕುವುದು ಕಡಿಮೆಯಾದದ್ದು, ಸೂಪರ್ ಮಾರ್ಕೆಟ್‌ಗಳಿಂದ ಸ್ವಚ್ಚವಾದ ಆಹಾರ ಪದಾರ್ಥಗಳು ನೇರವಾಗಿ ಅಡುಗೆ ಮನೆಗೆ ಬರುತ್ತಿವೆ,ಕಟ್ಟಡ ನಿರ್ಮಾಣದ ವಿನ್ಯಾಸದಲ್ಲಿ ಬದಲಾವಣೆ, ರೈತರು ಕೃಷಿಯಲ್ಲಿ ಬಳೆಸುತ್ತಿರುವ ಕೀಟನಾಶಕಗಳ ಹೆಚ್ಚಳ, ಕೆಲವೊಮ್ಮೆ ಪೆಟ್ರೋಲ್‌ನಲ್ಲಿನ ಸೀಸದ ಅಂಶ, ಮೊಬೈಲ್ ಫೋನ್‌ಗಳಲ್ಲಿ ಬಳೆಸುವ ಎಲೆಕ್ಟೊçÃಮ್ಯಾಗ್ನೆಟಿಕ್ ಅಲೆಗಳು ಗುಬ್ಬಚ್ಚಿಗಳು ಗೂಡು ಸೇರುವಲ್ಲಿ ಅಡ್ಡವಾಗುತ್ತಿವೆ ಎಂಬ ಅನುಮಾನವಿದೆ ಆದರೆ ಈ ಬಗ್ಗೆ ನಿಖರವಾದ ಸಂಶೋಧನಾ ವರಧಿ ಲಭ್ಯವಿಲ್ಲ.ಮತ್ತೊಂದು ವಿಷಯ ಅಂದರೆ ಗುಬ್ಬಚ್ಚಿಗಳನ್ನು ಬೇಟೆಯಾಡುವುದು, ಅದನ್ನು ಆಹಾರವಾಗಿ ಬಳಸಿದರೆ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ ಎಂಬ ನಂಬಿಕೆ ಬೇಟೆಯಾಡುವುದನ್ನು ಹೆಚ್ಚಿಸಿದೆ.
ಜಾಗೃತಿ: ಜಾಗತಿಕವಾಗಿ ಅನೇಕಸಂಘ_ಸAಸ್ಥಗಳು, ಸರ್ಕಾರಗಳು, ವಿಜ್ಞಾನಿಗಳು ಜೀವ ವೈವಿದ್ಯತೆಯಡಿಯಲ್ಲಿ ಗುಬ್ಬಚ್ಚಿಯ ಮಹತ್ವ ತಿಳಿಸಿದ ನಂತರ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ, ಆ ಮೂಲಕ ಗುಬ್ಬಚ್ಚಿಗಳಸಂಖ್ಯೆ ಸ್ಥಿರವಾಗಿದೆ ಎಂದು ಹಲವಾರು ವರದಿಗಳು ಹೇಳುತ್ತಿವೆ. ಆದರೂ ಪರಿಸರ ಸಮತೋಲನದಲ್ಲಿ ಗುಬ್ಬಚ್ಚಿಗಳ ಪಾತ್ರ ಹಿರಿದಾದುದು. ಅದಕ್ಕಾಗಿ ನಾವೆಲ್ಲರೂ ಗುಬ್ಬಚ್ಚಿಗಳ ಸಂಖ್ಯೆ ಹೆಚ್ಚಿಸಲು ಕೈಲಾದಷ್ಟು ಶ್ರಮಿಸೋಣ. ಈ ನಿಟ್ಟಿನಲ್ಲಿ ೨೦೧೦ರಿಂದ ಮಾರ್ಚ೨೦ ರಂದು ವಿಶ್ವ ಗುಬ್ಬಚ್ಚಿಯ ದಿನವನ್ನು ಆಚರಿಸಲಾಗುತ್ತದೆ. ಮನೆಯ ಕಟ್ಟಡದಲ್ಲಿ ಗುಬ್ಬಿಗಾಗಿ ಗೂಡು ಬಿಡೋಣ, ನಿತ್ಯ ಅನುಪಯುಕ್ತ ಕಾಳು ,ಆಹಾರ, ಕುಡಿಯಲು ನೀರು ಮನೆಯಹತ್ತಿರ ಇಡೋಣ ಗುಬ್ಬಚ್ಚಿ ಸಂತತಿ ಹೆಚ್ಚಿಸೋಣ.
ಡಾ.ಯು ಶ್ರೀನಿವಾಸ ಮೂರ್ತಿ, ಬಳ್ಳಾರಿ
ಉಪನ್ಯಾಸಕರು,
“ವಿಚಾರ ಕುಟೀರ”