Ad image

ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಹಸಿರೋತ್ಸವ ಕಾರ್ಯಕ್ರಮದಲ್ಲಿ ಸಚಿವರ ಜನ್ಮದಿನೋತ್ಸವ* ಅಭಿಮಾನಿಗಳಿಂದ ಗೌರವ ಸನ್ಮಾನ* *ಕ್ಷೇತ್ರದ ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಒಂದು ಗಿಡವನ್ನು ನೆಡಿ: ಶಿವರಾಜ್ ತಂಗಡಗಿ

Vijayanagara Vani
ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಹಸಿರೋತ್ಸವ ಕಾರ್ಯಕ್ರಮದಲ್ಲಿ ಸಚಿವರ ಜನ್ಮದಿನೋತ್ಸವ* ಅಭಿಮಾನಿಗಳಿಂದ ಗೌರವ ಸನ್ಮಾನ* *ಕ್ಷೇತ್ರದ ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಒಂದು ಗಿಡವನ್ನು ನೆಡಿ: ಶಿವರಾಜ್ ತಂಗಡಗಿ
ಕಾರಟಗಿ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪುರಸಭೆ ವತಿಯಿಂದ  ಹಸಿರೋತ್ಸವ ಕಾರ್ಯಕ್ರಮವನ್ನು ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಚಿವರಾದ ಶಿವರಾಜ್ ತಂಗಡಿಗಿ ಯವರು ಮೊದಲು ಕರ್ನಾಟಕ ಪಬ್ಲಿಕ್  ಶಾಲೆಯಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಸೈನ್ಸ್ ಹೊಸ ಕೋರ್ಸ್ ಅನ್ನು ಸಚಿವರು ಉದ್ಘಾಟಿಸಿದರು. ನಂತರ ಹಸಿರೋತ್ಸವ ಕಾರ್ಯಕ್ರಮವನ್ನು ಸಸಿಗಳಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಪುರಸಭೆ  ವತಿಯಿಂದ ಭೂಮಿಗೆ ಹಸಿರು ಮನುಕುಲಕ್ಕೆ ಉಸಿರು ಎನ್ನುವ ಧೇಯದೊಂದಿಗೆ ಹಸಿರು ಉತ್ಸವ 2024 ಕಾರ್ಯಕ್ರಮ ಕುರಿತು  ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ನನ್ನ ಈ 53ನೇ ಹುಟ್ಟುಹಬ್ಬಕ್ಕೆ ನನ್ನ ಕಾರ್ಯಕರ್ತರಿಗೆ ನನ್ನ ಅಭಿಮಾನಿಗಳಿಗೆ ಹೇಳುವುದು ಇಷ್ಟೇ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಮುಂದೆ ಒಂದು ಗಿಡವನ್ನು ನೆಡಬೇಕು, ಅದು ಮುಂದಿನ ದಿನಮಾನಗಳಲ್ಲಿ ಮರವಾಗಿ ಪರಿಸರವನ್ನು ಬಿಸಿಲಿನ ತಾಪಮಾನವನ್ನು ಕಡಿಮೆಗೊಳಿಸುತ್ತದೆ. ಪರಿಶುದ್ಧ ಗಾಳಿಯನ್ನು ನೀಡುತ್ತದೆ, ಗಿಡಮರಗಳನ್ನು ಬೆಳೆಸಿದರೆ ನೆರಳು ಗಾಳಿ ಮಳೆಯಂತಹ ನಿಸರ್ಗದ ಕೊಡುಗೆಗಳನ್ನು ನೀಡುತ್ತವೆ ಎಂದರು. ನನ್ನ ಆಡಳಿತ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇನೆ. ತಾಲೂಕಿನ ಸೋಮನಾಳ ಗ್ರಾಮದ ಸರ್ಕಾರಿ ಶಾಲೆ ಕಂಪ್ಯೂಟರಿಕರಣ  ಜೊತೆಗೆ ಹಸಿರು ಪರಿಸರೀಕರಣ ಮಾಡಿದ್ದು ಮಾದರಿಯಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ರಾಘವೇಂದ್ರ ಕಂಠಿ ಬಗ್ಗೆ  ಪ್ರಶಂಸೆ ವ್ಯಕ್ತಪಡಿಸಿದರು, ಕಾರಟಗಿ ತಾಲೂಕಿಗೆ ನೂತನ (ಮಹಿಳಾ ಹಾಸ್ಟೆಲ್) ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯವನ್ನು ಶೀಘ್ರದಲ್ಲಿ ಆರಂಭಿಸುತ್ತಿದ್ದೇನೆ, ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತೇನೆ, ಈಗಾಗಲೇ ಶಾಲಾ ಕಂಪ್ಯೂಟರಿಕರಣ ಮಾಡುವುದಕ್ಕೆ  ಶಿಕ್ಷಣಕ್ಕಾಗಿ, ಮತ್ತು ತಾಲೂಕ ಕ್ರೀಡಾಂಗಣ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಕ್ರಿಯಾಯೋಜನೆ ಸುಮಾರು 25 ಕೋಟಿಗಳ ಕ್ರಿಯಾಯೋಜನೆ ತಯಾರಿಸಲಾಗಿದೆ, ಮತ್ತು ಕಾರಟಗಿ ತಾಲೂಕಿಗೆ ಡಿಗ್ರಿ ಕಾಲೇಜ್ ಅವಶ್ಯಕತೆ ಇದೆ, ಶೀಘ್ರ ಅನುಮೋದನೆ ನೀಡಲಾಗುವುದು, ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಈಗಿನ ವಿದ್ಯಾರ್ಥಿಗಳು ನಾಳಿನ ಪ್ರಜೆಗಳು, ವಿದ್ಯಾರ್ಥಿನಿಯರು ಎಲ್ಲಾ ಕ್ಷೇತ್ರಗಳಲ್ಲಿ ಸಬಲರಾಗಬೇಕು, ಮಹಿಳೆಯರಿಗಾಗಿ ನಮ್ಮ ಸರ್ಕಾರ ರಾಜಕೀಯ ವಲಯದಲ್ಲಿ ಶೇಕಡ 50 ಪರ್ಸೆಂಟ್ ಮೀಸಲಾತಿ ನೀಡಲು ನಿರ್ಧರಿಸಿದೆ, ಆ ಮೂಲಕ ಮಹಿಳೆಯರನ್ನು ರಾಜಕೀಯವಾಗಿ ಸಬಲರಾಗಲು ಮುಂದೆ ಬರಬೇಕಾಗಿದೆ. ವರ್ಷಕ್ಕೆ 1 ಲಕ್ಷ ಸಸಿಗಳನ್ನು ನೆಡುವ ಸಂಕಲ್ಪವನ್ನು ಪ್ರತಿಯೊಬ್ಬರು ಮಾಡಬೇಕು ಯಾಕೆಂದರೆ ಚರಿತ್ರೆಯೊಳಗೆ ಹಿಂದೆಂದೂ ಕಾಣದಂತಹ 45ಡಿಗ್ರಿ ತಾಪಮಾನ ಈ ವರ್ಷ ನಾವು ಕಂಡಿದ್ದೇವೆ ಅದಕ್ಕೆ ಮೂಲ ಕಾರಣ ಪರಿಸರವನ್ನು ನಾಶ ಮಾಡುವುದು ಹೀಗಾಗಿ ಪ್ರತಿಯೊಬ್ಬರು ಮರ ಗಿಡಗಳನ್ನು ಬೆಳೆಸಬೇಕು ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ  ಶರಣೆಗೌಡ ಮಾಲಿಪಾಟೀಲ್ ಪುರಸಭಾ ಸದಸ್ಯ ಇಟ್ಟಂಗಿ ಈಶಪ್ಪ, ಪುರಸಭಾ ಮುಖ್ಯ ಅಧಿಕಾರಿ ಸುರೇಶ್ ಶೆಟ್ಟಿ, ಅನಿಲ್ ಕುಮಾರ್ ಪ್ರಾಂಶುಪಾಲರು, ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು, ಪುರಸಭಾ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಮತ್ತಿತರರು ಇದ್ದರು,

Share This Article
error: Content is protected !!
";