Ad image

ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ಪಾತ್ರವಹಿಸಬೇಕು: ಪ್ರೊ. ಜೆ.ತಿಪ್ಪೇರುದ್ರಪ್ಪ

Vijayanagara Vani
ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರೂ ಪಾತ್ರವಹಿಸಬೇಕು: ಪ್ರೊ. ಜೆ.ತಿಪ್ಪೇರುದ್ರಪ್ಪ
ಬಳ್ಳಾರಿ,ಆ.15
ಪ್ರತಿಯೊಬ್ಬ ಭಾರತೀಯನು ಉತ್ತಮ ಕಾರ್ಯಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು, ದೇಶದ ಅಭಿವೃದ್ಧಿಯಲ್ಲಿ ಪಾತ್ರವಹಿಸಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳಾದ ಪ್ರೊ. ಜೆ.ತಿಪ್ಪೇರುದ್ರಪ್ಪ ಅವರು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ 78ನೇ ಸ್ವಾತಂತ್ರö್ಯ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ವಿಕಸಿತ ಭಾರತ 2047’ ಭಾರತವನ್ನು ಅಭಿವೃದ್ಧಿ ರಾಷ್ಟçವನ್ನಾಗಿ ಮಾಡುವದಾಗಿದೆ. ಭಾರತದ ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ, ಪರಿಸರ ಸುಸ್ಥಿರತೆ ಹಾಗೂ ಉತ್ತಮ ಆಡಳಿತ ಸೇರಿದಂತೆ ಹಲವಾರು ಅಂಶಗಳು ಸೇರಿವೆ. ಅಭಿವೃದ್ಧಿ ಸಾಧಿಸಲು ಜನರ ಸಂಕಲ್ಪ ಮುಖ್ಯವಾಗಿದೆ ಎಂದು ಹೇಳಿದರು.
ವಿವಿಯ ಕುಲಸಚಿವರಾದ ರುದ್ರೇಶ ಎಸ್.ಎನ್ ಮಾತನಾಡಿ, ಸ್ವಾತಂತ್ರö್ಯಕ್ಕಾಗಿ ಹಲವಾರು ರಾಷ್ಟçಗಳು ಹಿಂಸೆಯ ಮಾರ್ಗ ಅನುಸರಿಸಿವೆ. ಭಾರತ ಮಾತ್ರ ಅಹಿಂಸೆ ಮೂಲಕ ಸ್ವಾತಂತ್ರö್ಯö ಪಡೆದಿದೆ. ನಾಗರಿಕರು ಭವ್ಯ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಮತ್ತು ದೇಶ ಪ್ರೇಮ ಬೆಳೆಸಿಕೊಳ್ಳಬೇಕೆಂದು ಎಂದರು.
ಸ್ವಾತಂತ್ರö್ಯ ದಿನಾಚರಣೆಯ ಪ್ರಯುಕ್ತ ಅಂತರ ವಿಭಾಗೀಯ ಕ್ರೀಡಾಕೂಟ-2024 ಆಯೋಜಿಸಲಾಗಿತ್ತು. ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪದಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಮೇಶ್ ಓಲೇಕಾರ್, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥರಾದ ಡಾ. ಶಶಿಧರ್ ಕೆಲ್ಲೂರ, ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Share This Article
error: Content is protected !!
";