Ad image

ತೋಟಗಾರಿಕೆ ಬೆಳೆಗೆ ವಿಮಾ ನೊಂದಾಯಿಸಲು ಅವಧಿ ವಿಸ್ತರಣೆ.

Vijayanagara Vani

ವಿಜಯನಗರ(ಹೊಸಪೇಟೆ), ಆ.09 : 2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಬೆಳೆಗಳಿಗೆ ವಿಮೆ ನೊಂದಾಯಿಸಲು ಆ.14 ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಎಂ.ರಮೇಶ್ ತಿಳಿಸಿದ್ದಾರೆ.
ವಿಮಾ ಮೊತ್ತ ಮತ್ತು ರೈತರ ವಿಮಾ ಕಂತಿನ ವಿವರ : ಆರ್‌ಡಬ್ಲೂಬಿಸಿಐಎಸ್ ಯೋಜನೆಯಡಿ ಸಾಮಾನ್ಯ ವಿಮೆಗೆ ಪ್ರತಿ ಹೆಕ್ಟೇರ್‌ಗೆ ದಾಳಿಂಬೆ ಬೆಳೆಗೆ ವಿಮಾ ಮೊತ್ತ ರೂ.1,27,000 ರೈತರ ವಿಮಾ ಕಂತು ಶೇ.5 ರಂತೆ ರೂ.6,350, ಹಸಿ ಮೆಣಸಿನಕಾಯಿ ಬೆಳೆಗೆ ವಿಮಾ ಮೊತ್ತ ರೂ.71,000 ರೈತರ ವಿಮಾ ಕಂತು ರೂ.3,550 ರೂಗಳು ಆಗಿರುತ್ತದೆ. ಸಾಲ ಪಡೆಯದ ರೈತರು ವಿಮೆ ನೊಂದಾಣಿಗೆ ಆ.14 ರಂದು ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ. ಮತ್ತು ಸಾಲ ಪಡೆದ ರೈತರಿಗೆ ಆ.31 ರವರೆಗೆ ಬೆಳೆ ವಿಮೆ ನೊಂದಾಣಿಗಾಗಿ ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತರು ಆಯಾ ಹೋಬಳಿಯ, ರೈತ ಸಂಪರ್ಕ ಕೇಂದ್ರ ಸಹಾಯಕ ತೋಟಗಾರಿಕೆ ಅಧಿಕಾರಿ ಹೊಸಪೇಟೆ ಮೊ.9164297220, ಮರಿಯಮ್ಮನಹಳ್ಳಿ ಮೊ.7204888978, ಕಮಲಾಪುರ ಮೊ.8123465548 ಮತ್ತು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು(ಜಿಪಂ), ಹೊಸಪೇಟೆ ಮೊ.8310291867 ಸಂಖ್ಯೆಗೆ ಸಂಪರ್ಕಿಸಬೇಕೆAದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";