ಸಿರಿಗೇರಿ : ಇಲ್ಲಿನ ಸಮೀಪದ ಮುದ್ದಟ್ಟನೂರು ಗ್ರಾಮದ ಲಕ್ಷ್ಮಿ ನಗರ ಕ್ಯಾಂಪಿನ ನಿವಾಸಿಯಾದ ರೈತ ಕಾಶಿನಾಥ್ ರಾವ್ (42) ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಂಗಳವಾರ ಮದ್ಯಾಹ್ನ ಬೆಳೆಕ್ರಿಮಿನಾಶಕ ಸೇವಿಸಿದ್ದಾನೆ. ಈ ಬಗ್ಗೆ ತಿಳಿದು ಕೂಡಲೇ ಕುಟುಂಬಸ್ಥರು ಬಳ್ಳಾರಿ ಬಿಮ್ಸ್ ಗೆ ಕರದೊಯ್ದಿದ್ದಾರೆ. ಚಿಕಿತ್ಸೆ ಫಲಕಾರಿಯಾಗಿದೆ ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸತತ ಮೂರು ವರ್ಷದಿಂದ ಬೆಳೆಯು ಸರಿಯಾಗಿ ಕೈಗೆ ಬಾರದೇ ಇರುವುದರಿಂದ ಸಾಲ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸ್ವಂತ 1.95 ಎಕರೆ ಮತ್ತು 12 ಎಕರೆ ಸಾಗುವಳಿಯಾಗಿ ಜಮೀನುನಲ್ಲಿ ಸುಮಾರು 14 ಲಕ್ಷ ಕ್ಕೂ ಹೆಚ್ಚು ಸಾಲ ಮಾಡಿ ಬೆಳೆಗೆ ಹಾಕಿದ್ದರಿಂದ ಈ ಬಗ್ಗೆ ಅವರ ತಾಯಿ ಸಿರಿಗೇರಿ ಪೊಲೀಸ್ ಠಾಣೆಲ್ಲಿ ದೂರು ನೀಡಿದ್ದಾರೆ. ಸಿರಿಗೇರಿ ಠಾಣೆಯಲ್ಲಿ ಕಲಂ 194 ರ ಬಿಎನ್ ಎನ್ ಎಸ್ ರಿತ್ಯ ಅಡಿಯಲ್ಲಿ ಪ್ರಕರಣ ದಾಖಲೆಯಾಗಿದೆ.