Ad image

ಸೆ. 2ರಂದು: ಮಂಟೇಸ್ವಾಮಿ ಕಥಾ ಪ್ರಸಂಗದ ರೂವಾರಿ ಡಾ. ಹೆಚ್. ಎಸ್. ಶಿವಪ್ರಕಾಶ್ ಅವರಿಗೆ ಅಭಿನಂದನಾ ಸಮಾರಂಭ

Vijayanagara Vani
ಸೆ. 2ರಂದು: ಮಂಟೇಸ್ವಾಮಿ ಕಥಾ ಪ್ರಸಂಗದ ರೂವಾರಿ ಡಾ. ಹೆಚ್. ಎಸ್. ಶಿವಪ್ರಕಾಶ್ ಅವರಿಗೆ ಅಭಿನಂದನಾ ಸಮಾರಂಭ

ಬೆಂಗಳೂರು: ಸೆ,1: ಸಿರಿವರ ಕಲ್ಟರ್ ಅಕಾಡೆಮಿ ಹಾಗೂ ಅನನ್ಯ ಕ್ರಿಯೇಷನ್ಸ್ ಅರ್ಪಿಸುವ ಹೆಸರಾಂತ ಲೇಖಕರು ಮತ್ತು ನಾಟಕಕಾರರೂ ಆದ ಡಾ. ಹೆಚ್. ಎಸ್. ಶಿವಪ್ರಕಾಶ್ ಅವರಿಗೆ ಅಭಿನಂದನಾ ಸಮಾರಂಭವನ್ನು ಇದೇ ಸೆಪ್ಟೆಂಬರ್ 2ರಂದು
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದೆಂದು ಅನನ್ಯ ಕ್ರಿಯೇಷನ್ಸ್ ನ ಕಾರ್ಯದರ್ಶಿ ರಾಜೇಶ್ ರಾಂಪುರ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
Ad imageAd image

ಇದೇ ಸಂದರ್ಭದಲ್ಲಿ ಡಾ. ಹೆಚ್. ಎಸ್. ಶಿವಪ್ರಕಾಶ್ ಅವರಿಗೆ ಅಭಿನಂದನಾದಲ್ಲಿ ನಾಡಿನ ಖ್ಯಾತ ಹಿರಿಯ ಕವಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹಾಗೂ ಹೆಸರಾಂತ ಸಂಗೀತ ನಿರ್ದೇಶಕರು, ಚಿತ್ರ ಸಾಹಿತಿ ಡಾ.ಹಂಸಲೇಖ ರವರು, ರವೀಂದ್ರನಾಥ ಸಿರಿವರ ಮತ್ತಿತರರು ಭಾಗವಹಿಸುವವರು.

ನಗರದ ರವೀಂದ್ರ ಕಲಾಕ್ಷೇತ್ರ, ಜೆಸಿ ರಸ್ತೆಯ ಸೋಮವಾರ ಸಂಜೆ 5.30ಕ್ಕೆ ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕವನ್ನು ಪ್ರಸ್ತುತಪಡಿಸಲಾಗುತ್ತದೆ. ರಚನೆ: ಡಾ. ಹೆಚ್.ಎಸ್.ಶಿವಪ್ರಕಾಶ್ ನಿರ್ದೇಶನ: ಮೈಮ್ ರಮೇಶ್, ಸಂಗೀತ: ದೇವಾನಂದ ವರಪ್ರಸಾದ್, ಈ ನಾಟಕವು ಉಚಿತ ಪ್ರವೇಶವಾಗಿರುತ್ತದೆ.

Share This Article
error: Content is protected !!
";