ಮುಖ್ಯಮಂತ್ರಿಗಳ ಪದಕ ಪ್ರಧಾನ ಸ್ವೀಕರಿಸಿದ ಅಗ್ನಿಶಾಮಕ ಶ್ರೀ ಮಂಜುನಾಥ್ ಹಾಗೂ ಅಗ್ನಿಶಾಮಕ ಅಧಿಕಾರಿಯಾಗಿ ಪದೋನ್ನತಿ ಪಡೆದ ನರಸಪ್ಪ ಕೆ ಅವರಿಗೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗದಿಂದ ಅಭಿನಂದನೆಗಳೊಂದಿಗೆ ಸನ್ಮಾನ

Vijayanagara Vani
ಮುಖ್ಯಮಂತ್ರಿಗಳ ಪದಕ ಪ್ರಧಾನ ಸ್ವೀಕರಿಸಿದ ಅಗ್ನಿಶಾಮಕ ಶ್ರೀ ಮಂಜುನಾಥ್ ಹಾಗೂ ಅಗ್ನಿಶಾಮಕ ಅಧಿಕಾರಿಯಾಗಿ ಪದೋನ್ನತಿ ಪಡೆದ ನರಸಪ್ಪ ಕೆ ಅವರಿಗೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗದಿಂದ ಅಭಿನಂದನೆಗಳೊಂದಿಗೆ ಸನ್ಮಾನ
ಬೆಂಗಳೂರಿನ ಕೋರಮಂಗಲ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಅಕಾಡೆಮಿ ಮೈದಾನದಲ್ಲಿ  ನಡೆದ ಮುಖ್ಯಮಂತ್ರಿಗಳ  ಪದಕ ಪ್ರಧಾನ ಸಮಾರಂಭದಲ್ಲಿ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಅಗ್ನಿಶಾಮಕ ಇಲಾಖೆಯ ಪ್ರಮುಖ ಅಗ್ನಿಶಾಮಕ ರಾದ ಮಂಜುನಾಥ್ ರವರಿಗೆ ಮುಖ್ಯಮಂತ್ರಿಗಳ ಪದಕ ಪ್ರಧಾನ ಸಮಾರಂಭದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ರವರು  ಪ್ರಶಸ್ತಿ ನೀಡಿ ಗೌರವಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗ, ಅವರನ್ನು ಬರಮಾಡಿಕೊಂಡು ಪುಷ್ಪಮಾಲೆಗಳನ್ನು ಹಾಕಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು 
ತರುವಾಯ  ಅಗ್ನಿಶಾಮಕ ಪ್ರಭಾರ ಅಧಿಕಾರಿ ಕೆ ನರಸಪ್ಪ ಅವರು ಮಾತನಾಡಿ ನಮ್ಮ ಇಲಾಖೆಯಲ್ಲಿ ಮಂಜುನಾಥ್ ರವರು ಅಗ್ನಿಶಾಮಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ,ಅವರು ಕಾರಟಗಿ ತಾಲೂಕಿನ ಸುತ್ತಮುತ್ತ ಗ್ರಾಮಗಳ ಜನರಿಗೆ ಹಾಗೂ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ಮತ್ತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ  ಶಾಲಾ  ಆವರಣದಲ್ಲಿ  ಅವರು ಬೆಂಕಿಯಿಂದಾಗುವ ಅನಾಹುತಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯ ಜೊತೆಗೆ ಬಹಿರಂಗ ಪ್ರದರ್ಶನ ನೀಡುವ ಅಗ್ನಿಶಾಮಕರಾಗಿದ್ದಾರೆ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ  ಮಂಜುನಾಥ್ ರವರಿಗೆ ಅವರ ಈ ಕಾರ್ಯ ವೈಖರಿಗೆ ಬೆಂಗಳೂರಿನ ಕೋರಮಂಗಲ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಅಕಾಡೆಮಿ ಮೈದಾನದಲ್ಲಿ   ಏರ್ಪಡಿಸಿದ್ದ ಮುಖ್ಯಮಂತ್ರಿಗಳ ಪದಕ ಪ್ರಧಾನ ಸಮಾರಂಭದಲ್ಲಿ ಅವರಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಸನ್ಮಾನಿಸಿರುವುದು. ನಮ್ಮ ಕೊಪ್ಪಳ ಜಿಲ್ಲೆಯ ಏಕೈಕ ವ್ಯಕ್ತಿ ಎಂದು ಹೇಳಲು ಗರ್ವಮತ್ತು ಹೆಮ್ಮೆಎನ್ನಿಸುತ್ತದೆ, ಕಾರಣ ಇಂದು ನಮ್ಮ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗ ಅವರಿಗೆ  ಹೃದಯ ಪೂರಕ ಅಭಿನಂದನೇ ಸಲ್ಲಿಸಿ ಗೌರವಿಸಿ ಸನ್ಮಾನಿಸಿದ್ದೇವೆ, ಅವರು ತಮ್ಮ ಈ ಕಾರ್ಯವೈಖರಿಯಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಪ್ರಗತಿ ಯತ್ತ ಸಾಗಲಿ ಅವರಿಗೆ ಭಗವಂತ ಆಯುರ್ ಆರೋಗ್ಯ ಐಶ್ವರ್ಯ ಸಂಪತ್ತು ನೀಡಲಿ ಎಂದು ಹಾರೈಸಿದರು.
ಇದೆ ವೇಳೆ ಕಾರಟಗಿಯ ಅಗ್ನಿಶಾಮಕ ಇಲಾಖೆಯಲ್ಲಿ  2017 ರಿಂದ ಸುಮಾರು ಏಳು ವರ್ಷಗಳ ಕಾಲ   ಸೇವೆ ಸಲ್ಲಿಸಿದ ಅಗ್ನಿಶಾಮಕರು ಶ್ರೀ ಕೆ ನರಸಪ್ಪ ರವರು ಕಾರಟಗಿಯ ಅಗ್ನಿಶಾಮಕ ರಾಣೆ ಯಿಂದ ಅಗ್ನಿಶಾಮಕ ಅಧಿಕಾರಿಯಾಗಿ ಪದೋನ್ನತಿ ಹೊಂದಿ   ಬೆಂಗಳೂರು ಅಕಾಡೆಮಿಗೆ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ  ಅವರನ್ನು ಅವರ ಕಾರ್ಯವೈಖರಿ ಮತ್ತು ಪ್ರಾಮಾಣಿಕ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿ ಠಾಣಾ ಅಧಿಕಾರಿಗಳು  ಸಿಬ್ಬಂದಿ ವರ್ಗ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸುವುದರ ಮುಖಾಂತರ ಬಿಳ್ಕೊಟ್ಟರು,
 ಈ ಸಂದರ್ಭದಲ್ಲಿ ಪ್ರಭಾರ ಠಾಣಾಧಿಕಾರಿ ಕೆ ನರಸಪ್ಪ,  ಸಿಬ್ಬಂದಿ ಗಳಾದ ರಾಘವೇಂದ್ರ ಈಳಿಗೇರ, ಹಾಗೂ ಅಕ್ಬರ್ ಸಾಬ್ ಸೇರಿದಂತೆ ವಾಹನ ಚಾಲಕರು ಠಾಣಾ ಸಿಬ್ಬಂದಿ ವರ್ಗ ಮತ್ತಿತರರು ಇದ್ದು ಅಭಿನಂದನೆ ಸಲ್ಲಿದರು,
WhatsApp Group Join Now
Telegram Group Join Now
Share This Article
error: Content is protected !!