Ad image

ಅಗ್ನಿಶಾಮಕರ ನಿರ್ಗಮನ ಪಥಸಂಚಲನ ಹಾಗೂ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ, ಕಾರಟಗಿ ಅಗ್ನಿಶಾಮಕ ಇಲಾಖೆಯ ಮಂಜುನಾಥ ರವರಿಗೆ ಜಿ. ಪರಮೇಶ್ವರ್ ರಿಂದ ಮು, ಮಂತ್ರಿಗಳ ಪದಕ ಪ್ರದಾನ* *ಪ್ರತಿ ಜಿಲ್ಲೆಯಲ್ಲಿ ಅಗ್ನಿಶಾಮಕ ದಳದ ಕಚೇರಿ, ಮತ್ತು ಬೆಂಕಿ ನಂದಿಸಲು ಏರಿಯಲ್ ಲ್ಯಾಡರ್ ಆಳವಡಿಕೆ : ಜಿ, ಪರಮೇಶ್ವರ್

Vijayanagara Vani
ಅಗ್ನಿಶಾಮಕರ ನಿರ್ಗಮನ ಪಥಸಂಚಲನ ಹಾಗೂ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ, ಕಾರಟಗಿ ಅಗ್ನಿಶಾಮಕ ಇಲಾಖೆಯ ಮಂಜುನಾಥ ರವರಿಗೆ ಜಿ. ಪರಮೇಶ್ವರ್ ರಿಂದ ಮು, ಮಂತ್ರಿಗಳ ಪದಕ ಪ್ರದಾನ* *ಪ್ರತಿ ಜಿಲ್ಲೆಯಲ್ಲಿ ಅಗ್ನಿಶಾಮಕ ದಳದ ಕಚೇರಿ, ಮತ್ತು ಬೆಂಕಿ ನಂದಿಸಲು ಏರಿಯಲ್ ಲ್ಯಾಡರ್ ಆಳವಡಿಕೆ : ಜಿ, ಪರಮೇಶ್ವರ್
 ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ ಹಾಗೂ ಅಗ್ನಿಶಾಮಕರ ನಿರ್ಗಮನ ಪಥಸಂಚಲನ ಕಾರ್ಯಕ್ರಮವು ಕೋರಮಂಗಲ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಅಕಾಡೆಮಿ ಮೈದಾನದಲ್ಲಿ ಮಂಗಳವಾರ  ನಡೆಯಿತು,
 ಈ ಕಾರ್ಯಕ್ರಮದಲ್ಲಿ ಕೊಪ್ಪಳ ರಾಯಚೂರು, ಬಳ್ಳಾರಿ, ಜಿಲ್ಲೆ  ಸೇರಿದಂತೆ ವಿವಿದೆಡೆಯಿಂದ ಆಗಮಿಸಿದ್ದರು, ಈ ಸಮಾರಂಭದಲ್ಲಿ   ಕೊಪ್ಪಳ ಜಿಲ್ಲೆಯ  ಕಾರಟಗಿ ತಾಲೂಕಿನ ಅಗ್ನಿ ಶಾಮಕ ಇಲಾಖೆಯ (ಸರ್ಕಾರಿ ನೌಕರ) ಸಿಬ್ಬಂದಿ ಮಂಜುನಾಥ್ ರವರಿಗೆ ಗೃಹ ಸಚಿವ ಜಿ ಪರಮೇಶ್ವರ್ ಅವರಿಂದ *ಮುಖ್ಯ ಮಂತ್ರಿಗಳ ಪ್ರಶಸ್ತಿ ಪ್ರಧಾನ* ಮಾಡಲಾಯಿತು,
ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರು ಮಾತನಾಡಿ  ಪ್ರತಿ ಜಿಲ್ಲೆಯಲ್ಲಿ ಅಗ್ನಿಶಾಮಕದ ದಳದ ಕಚೇರಿ ಇರಬೇಕು ಎಂಬ ಆದೇಶವಾಗಿದೆ ರಾಜ್ಯ ಸರ್ಕಾರ ಪ್ರತಿ ತಾಲ್ಲೂಕಿನ ಕಚೇರಿಯಲ್ಲಿ ತೆರೆದಿದೆ. , ಅಗ್ನಿಶಾಮಕ ಮತ್ತು ತುರ್ತುಸೇವೆ, ಗೃಹ ರಕ್ಷಕ ದಳ, ರಾಜ್ಯ ವಿಪತ್ತು ನಿರ್ವಹಣ ದಳ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ  ರಾಜ್ಯದ ಜನ ಸಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದೀರಿ. ಸರ್ಕಾರಿ ಕೆಲಸ ದೇವರ ಕೆಲಸ ಎಂದು ಕಾರ್ಯನಿರ್ವಹಿಸುತ್ತೀರಿ, ನಿಮ್ಮ ಭವಿಷ್ಯ ಯಶಸ್ಸಿನತ್ತ ಸಾಗಲಿ ಎಂದರು, 
ಯಾವುದೇ ಬೆಂಕಿಯಿಂದ ಆಘಾತಗಳು ಸಂಭವಿಸಿದಲ್ಲಿ ಬೆಂಕಿ ನಂದಿಸಲು ಏರಿಯಲ್ ಲ್ಯಾಡರ್ ಅಳವಡಿಸಿಕೊಳ್ಳಲಾಗಿದೆ.ಈ ವ್ಯವಸ್ಥೆ ಬೇರೆ ರಾಜ್ಯಗಳಲ್ಲಿ ಇಲ್ಲದ ಏರಿಯಲ್ ಲ್ಯಾಡರ್ ಪ್ರಪ್ರಥಮ ವಾಗಿ ನಮ್ಮ ರಾಜ್ಯದಲ್ಲಿ ಅಳವಡಿಸಲಾಗಿದೆ, ಸುಮಾರು 90 ಮೀಟರ್‌ವರೆಗೆ ನೀರು ತಲುಪಿಸಬಹುದಾಗಿದೆ   ಅಲ್ಲದೇ, ಮೊದಲ ಬಾರಿಗೆ ಇಲಾಖೆಯ ವಾಹನಗಳಿಗೆ ಪೆಟ್ರೋಲ್ ಕಾರ್ಡ್ ಸವಲತ್ತು ನೀಡಲಾಗಿದೆ,
 ರಾಷ್ಟ್ರ ಮಟ್ಟದಲ್ಲಿ ಅಗ್ನಿಶಾಮಕ ಇಲಾಖೆ  ಮೆಚ್ಚುಗೆ ಪಡೆದಿದೆ.  ಹೊಸದಾಗಿ ಇಲಾಖೆಗೆ ನೇಮಕ ಗೊಂಡ ಸಿಬ್ಬಂದಿಗಳಿಗೆ ತಮಗೆ ತರಬೇತಿ ನೀಡಲಾಗಿದೆ.  ಕರ್ತವ್ಯದಲ್ಲಿ ಶಿಸ್ತು ಪಾಲನೆ ಮೂಲಕ ಇಲಾಖೆಯ  ಕೀರ್ತಿ ಹೆಚ್ಚಿಸಬೇಕು ಎಂದು ತಿಳಿಸಿದರು.
ನನ್ನ ಜೀವನದಲ್ಲಿ ಶಿಸ್ತು ಬರಲು ಕಾಲೇಜು ದಿನಗಳಲ್ಲಿ ಎನ್‌ಸಿಸಿ ತರಬೇತಿ ಪಡೆದಿದ್ದೆ, ನೀವು ಪಡೆದ ತರಬೇತಿ ಸಹ ಕರ್ತವ್ಯದಲ್ಲಿ ಮಾತ್ರವಲ್ಲ, ದೈನಂದಿನ ಜೀವನವು ಶಿಸ್ತಿನಿಂದ ಕೂಡುತ್ತದೆ, ಪ್ರಪಂಚದಲ್ಲೇ ಹೆಚ್ಚು ಪ್ರಖ್ಯಾತಿ ಪಡೆದ. ದೇಶದ ಪ್ರಥಮ ಗ್ರಂಥ ಸಂವಿಧಾನವಾಗಿದೆ ಈ ಗ್ರಂಥವು  148 ಕೋಟಿ ಜನಸಂಖ್ಯೆಗೆ ಅನುಗುಣವಾಗಿದೆ. ಸಂವಿಧಾನವು ಭಗವದ್ಗೀತೆ, ಕುರಾನ್, ಬೈಬಲ್ ಇದ್ದಂತೆ‌ ಎಂದರು.
ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು. ಯಾವುದೇ ಧರ್ಮ, ರಾಜಕೀಯ, ವ್ಯಕ್ತಿಗೆ ಕೆಲಸ ಮಾಡುವುದಿಲ್ಲ. ದೇಶಕ್ಕಾಗಿ ಕೆಲಸ ಮಾಡುತ್ತೇನೆ ಎಂದು ನಿಮಗೆ ಪ್ರಮಾಣ ಬೋದನೆ ಮಾಡಲಾಗಿದೆ‌ ಅದೇ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ ಎಂದು ಹೇಳಿದರು.
 ಅಗ್ನಿ ಶಾಮಕ ದಳ‌ ಮತ್ತು ತುರ್ತುಸೇವೆಯ 50 ವರ್ಷಗಳ ಹಿಂದೆ ಸಿಬ್ಬಂದಿಗಳ ಕಾರ್ಯವೈಖರಿ ಬೇರೆ ಇತ್ತು.ಆಧುನಿಕ ಜಗತ್ತು ತಾಂತ್ರಿಕವಾಗಿ ಸಾಕಷ್ಟು ಬದಲಾವಣೆ ಕಂಡಿದೆ. ನಗರ ಮತ್ತು ತಾಲೂಕು ಗಳಲ್ಲಿ ಬೃಹತ್ ಆಕಾರದ ಕಟ್ಟಡಗಳು ನಿರ್ಮಿಸುತ್ತಿದ್ದಾರೆ, ಬೆಂಕಿಯಿಂದ ಹಾನಿ  ಸಂಭವಿಸಿದಾಗ ಹೇಗೆ ನಿರ್ವಹಿಸಬೇಕು  ಎಂದು ತಾಂತ್ರಿಕ ಉಪಕರಣಗಳನ್ನು ಅಳವಡಿಸಿ ತರಬೇತಿ ಕೊಡಲಾಗುತ್ತಿದೆ.
ಕೊಳವೆಬಾವಿಗೆ ಬಿದ್ದಿದ್ದ    ಬಿಜಾಪುರದ ಇಂಡಿ ತಾ, ಲಚ್ಚಾಣ ಗ್ರಾಮದಲ್ಲಿ  ಸಾತ್ವಿಕ್ ಎಂಬ ಮಗುವನ್ನು  ನಿರಂತರ ಕಾರ್ಯಚರಣೆ ಮೂಲಕ ನಮ್ಮ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.ಎನ್ನುವುದನ್ನು  ಕೇಳಲು ಸುಲಭ. ಆದರೆ ಜೀವದ ಹಂಗು ತೊರೆದು, ತಮ್ಮ ಕುಟುಂಬವನ್ನು ತೊರೆದು ಸತತ 19 ಗಂಟೆ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದಾರೆ. ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ತಿಳಿಸಿ ಪ್ರಶಂಸೆ ವ್ಯಕ್ತಪಡಿಸಿದರು,
 ಈ ಸಂದರ್ಭದಲ್ಲಿ ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ  ರಾಜ್ಯದ ವಿವಿಧಡೆ ಇಂದ ಆಗಮಿಸಿದ ಅಗ್ನಿಶಾಮ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು,
Share This Article
error: Content is protected !!
";