Ad image

ಸಿಡಿಲಿನಿಂದ ಸಾವು ತಪ್ಪಿಸಲು ಸುರಕ್ಷತಾ ಕ್ರಮ ಅನುಸರಿಸಿ – ಅಮರೇಶ್ ಜಿ.ಕೆ.

Vijayanagara Vani
ಸಿಡಿಲಿನಿಂದ ಸಾವು ತಪ್ಪಿಸಲು ಸುರಕ್ಷತಾ ಕ್ರಮ ಅನುಸರಿಸಿ – ಅಮರೇಶ್ ಜಿ.ಕೆ.
ಕೊಟ್ಟೂರು : ಬುಧವಾರ  ಸಂಜೆ ಗುಡುಗು-ಸಿಡಿಲು ಸಮೇತ ಸುರಿದ ಮಳೆಗೆ  ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಬಳಿ ಸಿಡಿಲು ಬಡಿದು ಕುರಿಗಾಯಿ   ಮದ್ದಾನಕುಮಾರ  ಯುವಕ ಮೃತಪಟ್ಟಿರುವ ಘಟನೆ ಜರುಗಿದೆ . ಮೃತ ಯುವಕ ದೂಪದಹಳ್ಳಿ ಗ್ರಾಮದವರಾಗಿದ್ದು, ಕುರುಬ ಜನಾಂಗ, 16ವರ್ಷ. ಕೊಟ್ರೇಶ ಇವರಿಗೆ ಇಬ್ಬರು ಗಂಡುಮಕ್ಕಳಿದ್ದು, ಮೃತ ಮದ್ದಾನಕುಮಾರ ಮೊದಲನೆಯವನಾಗಿರುತ್ತಾನೆ. ತಹಶೀಲ್ದಾರರಾದ ಅಮರೇಶ ಜಿ ಕೆ ಇವರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮರಣೋತ್ತದ ಪರೀಕ್ಷೆಯ ಮುನ್ನ ಪರಿಶೀಲನೆ ಮಾಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುತ್ತಾ, ಸರ್ಕಾರದಿಂದ ಸಿಗುವ ಪರಿಹಾರ ಸೌಲಭ್ಯವನ್ನು ಜರೂರು ಸಿಗುವಂತೆ ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
 ಮುಂಗಾರು ಮಳೆ ಪ್ರಾರಂಭವಾಗುವ ಮುನ್ನ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ಬರುವ ಮಳೆಯ ಸಮಯದಲ್ಲಿ ಗುಡುಗು-ಸಿಡಿಲ ಅಬ್ಬರ ಜಾಸ್ತಿ ಇದ್ದು, ನೈಸರ್ಗಿಕ ವಿಪತ್ತಿನಲ್ಲಿ ಸಿಡಿಲಿನಿಂದ ಬಹಳಷ್ಟು ಮೃತಪಡುತ್ತಾರೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ರೈತರು, ಕೂಲಿ ಕಾರ್ಮಿಕರು, ಕುರಿಗಾಯಿಗಳು ಇರುತ್ತಾರೆ. ಈ ಸಿಡಿಲಿನಿಂದ ಸಂಭವಿಸುವ ಆಪತ್ತಿನಿಂದ ಪಾರಾಗಲು ಕೆಲವು ಮುಂಜಾಗ್ರತಾ ಕ್ರಮವನ್ನು ವಹಿಸಬೇಕಿದೆ.
1. ಗುಡುಗು-ಸಿಡಿಲು ಸಮೇತ ಮಳೆ ಬರುವ ಸಮಯದಲ್ಲಿ ಮರದ ಕೆಳಗೆ ಆಶ್ರಯ ಪಡೆಯಲು ನಿಲ್ಲಬಾರದು.
2. ಹಳ್ಳ, ಕೆರೆ, ನದಿ ಮುಂತಾದ ನೀರು ಇರುವ ಸ್ಥಳದ ಸಮೀಪ ನಿಲ್ಲಬಾರದು. ಬಯಲು ಸ್ಥಳದಲ್ಲಿದ್ದರೆ ನಿಂತುಕೊಳ್ಳದೇ ಕುಕ್ಕರುಗಾಲಿನಲ್ಲಿ ಎರಡೂ ಕೈಗಳಿಂದ ಕಿವಿಗಳನ್ನು ಮುಚ್ಚಿಕೊಂಡು ಕುಳಿತುಕೊಳ್ಳಬೇಕು.
3. ವಾಹನಗಳಲ್ಲಿ ಸಂಚರಿಸುತ್ತಿದ್ದಲ್ಲ ಗ್ಲಾಸ್ಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು.
4. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದಲ್ಲಿ ಕೂಡಲೇ ಸುರಕ್ಷಿತ ಸ್ಥಳಕ್ಕೆ ಹೋಗಬೇಕು.
5. ಮನೆಗಳಲ್ಲಿದ್ದಲ್ಲಿ ಕಿಟಕಿ-ಬಾಗಿಲುಗಳನ್ನು ಮುಚ್ಚಬೇಕು. ವಿದ್ಯುತ್ ಸಂಪರ್ಕಗಳನ್ನು ತಕ್ಷಣ ಕಡಿತಗೊಳಿಸಬೇಕು. ಹೀಗೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ವಹಿಸಿದಲ್ಲಿ ಗುಡುಗು-ಸಿಡಿಲಿನಿಂದ ಆಗುವ ಸಾವು-ನೋವುಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

Share This Article
error: Content is protected !!
";