Ad image

371ಜೆ ಸಮರ್ಪಕ ಅನುಷ್ಠಾನಕ್ಕೆ ಅಧಿವೇಶನದಲ್ಲಿ ಶಾಸಕರರು ದ್ವನಿ ಎತ್ತಬೇಕು- ಶಾಸಕರಿಗೆ ಮ್ಯಾಗಳಮನಿ ಒತ್ತಾಯ. 

Vijayanagara Vani
371ಜೆ ಸಮರ್ಪಕ ಅನುಷ್ಠಾನಕ್ಕೆ ಅಧಿವೇಶನದಲ್ಲಿ ಶಾಸಕರರು ದ್ವನಿ ಎತ್ತಬೇಕು- ಶಾಸಕರಿಗೆ ಮ್ಯಾಗಳಮನಿ ಒತ್ತಾಯ. 
ಗಂಗಾವತಿ :14– ಸೋಮವಾರದಿಂದ ಆರಂಭವಾಗುವ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಭಾರತ ಸರಕಾರ ಕೊಟ್ಟಿರುವ ವಿಶೇಷ ಸ್ಥಾನಮಾನ 371ಜೆ ಕಲo ಸಮರ್ಪಕ ಅನುಷ್ಠಾನಕ್ಕಾಗಿ ಅದರ ಉಳಿವಿಗಾಗಿ ಈ ಭಾಗದ ಸಚಿವರು, ಹಾಗೂ ಶಾಸಕರು ಪಕ್ಷಾತೀತವಾಗಿ ಒಗ್ಗಟ್ಟಾಗಿ ದ್ವನಿ ಎತ್ತಿ ಈ ಭಾಗದವರಿಗೆ ನ್ಯಾಯ ದೊರಕಿಸಿ ಕೊಡಬೇಕು ಅದು ಅವರ ಜವಾಬ್ದಾರಿಯಾಗಿದೆ ಎಂದು ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಒತ್ತಾಯಿಸಿದ್ದಾರೆ. ಈ ಸೌಲಭ್ಯ ನಮಗೆ ಕೊಟ್ಟಿರುವದು ಭಿಕ್ಷೆ ಅಲ್ಲಾ ಅದು ನಮ್ಮ ಹಕ್ಕು. ಈ ಭಾಗವು ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದ ಬಗ್ಗೆ ಅಧ್ಯಯನ ಮಾಡಿದ್ದಲ್ಲದೆ ಸರಕಾರಕ್ಕೆ ವರದಿ ಸಲ್ಲಿಸಿದರೂ ಜಾರಿಗೆಗಾಗಿ ನಮ್ಮ ನಾಯಕರುಗಳಾದ ವೈಜಾನಾಥ ಪಾಟೀಲ್ ರವರ ನೇತೃತ್ವದಲ್ಲಿ ಸುದೀರ್ಘ ಹೋರಾಟ ಹಾಗೂ ಆಗಿನ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಧರ್ಮಸಿಂಗ್ ರವರ,ಮತ್ತು ಇತರರ ಹೋರಾಟದ ಪರಿಶ್ರಮದಿಂದ ದೊರಕಿದೆ. ಇದು ಜಾರಿಗೆ ಬಂದು ಹತ್ತು ವರ್ಷ ಕಳೆದರು ಸಮರ್ಪಕವಾಗಿ ಜಾರಿಯಾಗಿಲ್ಲ.ಇದಕ್ಕೆ ಅಧಿಕಾರಿಗಳ ನಿರ್ಲಕ್ಷ ಮತ್ತು ಜನಪ್ರತಿನಿದಿಗಳ ಇಚ್ಛಾಶಕ್ತಿ ಕೊರತೆ ಮತ್ತಿತರ ಕಾರಣಗಳು ಎಂದು ಮ್ಯಾಗಳಮನಿ ಆರೋಪಿಸಿದ್ದಾರೆ. ಶಿಕ್ಷಕರ ಹಾಗೂ ಕೊಠಡಿಗಳ ಕೊರತೆ, ಸದ್ಭಳಕೆಯಾಗದ ಅನುದಾನ,ಹೊಸ ತಾಲೂಕುಗಳಿಗೆ ಕಚೇರಿ ಹಾಗೂ ಸ್ವಂತ ಕಟ್ಟಡಗಳು ಇರುವುದಿಲ್ಲ. ನಮ್ಮ ಬಾಗದಲ್ಲಿ ಒಂದು ಕೋಟಿಗೂ ಅಧಿಕ ಜನಸಂಖ್ಯೆ ಇದೆ.ನಮ್ಮ ಬಾಗಕ್ಕೆ ಹೊಸ ಕೈಗಾರಿಕೆಗಳ ನೀತಿ ಜಾರಿಯಿಲ್ಲ. ಕಿತ್ತು ತಿನ್ನುವ ಬಡತನ ಇರುವದರಿಂದ ದೂರದ ನಗರಗಳಿಗೆ ಗುಳೆ ಹೊಗುತ್ತಿದ್ದಾರೆ. ಈ ಭಾಗದಲ್ಲಿ ಸಚಿವಾಲಯ ಬೇಕಾಗಿದೆ.ಐತಿಹಾಸಿಕ ಮತ್ತು ಧಾರ್ಮಿಕ ಪ್ರದೇಶಗಳು ಈ ಭಾಗದಲ್ಲಿ ಇದ್ದರೂ ಪ್ರವಾಸೋದ್ಯಮಕ್ಕಿಲ್ಲ ಆದ್ಯತೆ. ಇನ್ನೂ ಅನೇಕ ಕಾರಣಗಳಿಂದ ಈ ಬಾಗಕ್ಕೆ ಅನ್ಯಾಯವಾಗುತ್ತಿದೆ. ಕಲಂ 371 ಜೆ ಸಮರ್ಪಕ ಅನುಸ್ಟಾನ ಆಗದೆ ಇರುವ ಇಂತಹ ಸಂದರ್ಭದಲ್ಲಿ ಯಾರೋ ದ್ರೋಹಿಗಳು ಈ ಸೌಲಭ್ಯವನ್ನು ರದ್ದು ಪಡಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ ಇದನ್ನು ನಮ್ಮ ಸಮಿತಿ ತೀರ್ವವಾಗಿ ಕಂಡಿಸುತ್ತದೆಂದು ಮ್ಯಾಗಳಮನಿ ಆಕ್ರೋಶ ವ್ಯಕ್ತಪಡಿಸಿದರು.  371ಜೆ ಸೌಲಭ್ಯ ನಮಗೆ ಮಾತ್ರ ಅಲ್ಲಾ ಹತ್ತು ರಾಜ್ಯಗಳು ಈ ಸೌಲಭ್ಯಗಳನ್ನು ಪಡೆದಿರುತ್ತವೆ.ಸಮರ್ಪಕ ಅನುಸ್ಟಾನ ಮತ್ತು ಉಳಿವಿಕೆಗಾಗಿ ಪಾಣ ಕೊಟ್ಟರೂ ಚಿಂತೆಯಿಲ್ಲ ಎಂದು ಈಗಾಗಲೇ ಈ ಭಾಗದಲ್ಲಿ ಅನೇಕ ಹೋರಾಟಗಳನ್ನು ವಿವಿಧ ಸಂಘಟನೆಗಳು ಮಾಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕ್ ನಲ್ಲಿ ಹೋರಾಟ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕೊಪ್ಪಳ, ಗಂಗಾವತಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ವಿವಿಧ ಸಂಘಟನೆಗಳು ಹೋರಾಟ ಹಮ್ಮಿಕೊಂಡಿದ್ದಾರೆ.ಅವರು ಹೋರಾಟದ ದಿನಾಂಕ ತಿಳಿಸುತ್ತಾರೆ.ಈ ಹೋರಾಟಗಳಲ್ಲಿ, ಪಕ್ಷ ಭೇದ ಮರೆತು ಈ ಭಾಗದ ಹಾಲಿ ಮತ್ತು ಮಾಜಿ ಮಂತ್ರಿಗಳು, ಸಂಸದರು, ಶಾಸಕರು, ಪರಿಷತ್ತಿನ ಸದಸ್ಯರು ಬಾಗವಹಿಸಿ ಯಶಸ್ವಿಗೊಳಿಸಬೇಕು ಇದು ಅವರ ಜವಾಬ್ದಾರಿಯೂ ಹೌದು. ಯಾರೂ ಭಾಗವಹಿಸುವದಿಲ್ಲವೋ ಅಂತಹವರ ವಿರುದ್ದ ನಮ್ಮ ಸಮಿತಿಯು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ ಹೋರಾಟಗಳಲ್ಲಿ ಹಾಲಿ ಮತ್ತು ಮಾಜಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್, ವಿವಿಧ ಸಂಘಟನೆಗಳು ಹಾಗೂ ಈ ಬಾಗದ ಎಲ್ಲಾ ಹಿರಿಯರು, ಪ್ರಗತಿಪರರು, ಪತ್ರಿಕೆ -ಟಿವಿ ಮಾಧ್ಯಮದವರು, ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಪ್ರತಿಯೊಬ್ಬ ನಾಗರಿಕರು ಸ್ವಯಂ ಪ್ರೇರಿತ ರಾಗಿ ಬಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮ್ಯಾಗಳಮನಿ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳು ನ್ಯಾಯ ಒದಗಿಸಬೇಕು. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಅವಕಾಶ ನೀಡಬಾರದೆಂದು ಇದೆ ಸಂದರ್ಭದಲ್ಲಿ ಬಸವರಾಜ ಮ್ಯಾಗಳಮನಿ ಸರಕಾರಕ್ಕೆ ಎಚ್ಚರಿಸಿದ್ದಾರೆ.

Share This Article
error: Content is protected !!
";