Ad image

ಪಂ. ಪುಟ್ಟರಾಜರ ಹುಟ್ಟುಹಬ್ಬವನ್ನು ಸರಕಾರದಿಂದ ಆಚರಿಸಲು ಒತ್ತಾಯ

Vijayanagara Vani
ಪಂ. ಪುಟ್ಟರಾಜರ ಹುಟ್ಟುಹಬ್ಬವನ್ನು ಸರಕಾರದಿಂದ ಆಚರಿಸಲು ಒತ್ತಾಯ

ಪಂ. ಪುಟ್ಟರಾಜರ ಹುಟ್ಟುಹಬ್ಬವನ್ನು ಸರಕಾರದಿಂದ ಆಚರಿಸಲು ಒತ್ತಾಯ

- Advertisement -
Ad imageAd image

 ಗುರು ಪುಟ್ಟರಾಜರ ಜನ್ಮದಿನ ಮಾರ್ಚ ೩ ರಂದು ಪೂಜ್ಯರ ಹುಟ್ಟುಹಬ್ಬವನ್ನು ಸರಕಾರಿಂದ ಆಚರಣೆಯಾಗಬೇಕು ಮತ್ತು ಪಂಡಿತ ಪುಟ್ಟರಾಜರ ಸಮಗ್ರ ಸಾಹಿತ್ಯ ಸರಕಾರವೇ ಪ್ರಕಟಿಸಬೇಕು ಎಂದು ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ, ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಇವರು ಸರಕಾರಕ್ಕೆ ಒತ್ತಾಯಿಸಿದರು. ಅವರು ದಿನಾಂಕ ೨೫ ಮೇ ೨೦೨೪ ಶನಿವಾರ ಬೆಳಿಗ್ಗೆ ನಗರದ ಶ್ರೀ ಹುಕ್ಕೇರಿಮಠದ ಅಕ್ಕನ ಬಳಗದ ಅಕ್ಕನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ, ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಹಾವೇರಿ ತಾಲೂಕಾ ಘಟಕ ಉಧ್ಘಾಟನೆ ಮತ್ತು ಸೇವಾ ಸಮಿತಿಯ ಪದಾಧಿಕಾರಿಗಳಿಗೆ ಗುರು ಸೇವಾಧೀಕ್ಷ

ಸಮಾರಂಭವನ್ನು ಜ್ಯೋತಿ ಬೆಳಗಿಸುವಮೂಲಕ ಉದ್ಘಾಟಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡುತ್ತ ಹಾವೇರಿಯಲ್ಲಿ ಸರ್ಕಾರದಿಂದಲೇ ಕುಮಾರ ಪಂಚಾಕ್ಷರಿ ಪುಟ್ಟರಾಜ ಟ್ರಷ್ಟ ಕೂಡಾ ಸ್ಥಾಪಿಸಬೇಕಾಗಿದೆ ಎಂದರು ಸಂಸ್ಕೃತ ಶಿಕ್ಷಕರಾದ ಪ್ರವಚನಕಾರ ಪ್ರಭುಲಿಂಗಯ್ಯ ಆರಾಧ್ಯಮಠ ಹತ್ತಿಮತ್ತೂರು ಇವರು ಮಾತನಾಡಿ, ಹಾನಗಲ್ಲಿನ ಕುಮಾರ ಶಿವಯೋಗಿ, ಕಾಡಶಟ್ಟಿಹಳ್ಳಿಯ ಗಾನಯೋಗಿ ಪಂಚಾಕ್ಷರಿ ಮತ್ತು ದೇವಗಿರಿಯ ಪಂ. ಪುಟ್ಟರಾಜರನ್ನು ಪಡೆದ ಹೆಮ್ಮೆ ಹಾವೇರಿ ಜಿಲ್ಲೆಗೆ ಇದೆ ಈ ಗುರು ತೃಯರ ಸೇವೆಗೆ ಸಲ್ಲಬೇಕಾದ ಗೌರವ ಸರಕಾರದಿಂದ ಸಲ್ಲಲಿ. ಈ ನಿಟ್ಟಿನಲ್ಲಿ ಸೇವಾ ಸಮಿತಿಯು ಕಾರ್ಯಪ್ರವೃತ್ತವಾಗಬೇಕು ಎಂದು ಹೇಳಿ, ಪಂಚಾಕ್ಷರಿ ಪುಟ್ಟರಾಜರ ಜೀವನ ಸಾಧನೆಯನ್ನು ಸುಂದರವಾಗಿ ಪರಿಚಯಿಸಿದರು. ಸೇವಾ ಸಮಿತಿಯ ತಾಲೂಕಾ ಅಧ್ಯಕ್ಷೆ ಚಂಪಾ ಮಲ್ಲಿಕಾರ್ಜುನ ಹುಣಸಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಹಾವೇರಿ ಜಿಲ್ಲಾ ಅಧ್ಯಕ್ಷೆ ಡಾ. ಗೀತಾ ಸುತ್ತಕೋಟೆ, ಸಮಿತಿಯ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ದ್ರಾಕ್ಷಾಯಿಣಿ ವಾಲ್ಮಿಕಿ ಮತ್ತು ಶ್ರೀ ಹುಕ್ಕೇರಿಮಠ ಅಕ್ಕನಬಳಗದ ಗೌರವಾಧ್ಯಕ್ಷೆ ಲಲಿತಾ ಗಂಗಾಧರ ಹೊರಡಿ ಇವರುಗಳು ಅತಿಥಿಗಳಾಗಿ ವೇದಿಕೆಯಲ್ಲಿ ಇದ್ದು ಮಾತನಾಡಿದರು. ಇದೇ ಸಂದರ್ಭದಲ್ಲಿ ಸೇವಾ ಸಮಿತಿಯ ಸಂಸ್ಥಾಪಕರು, ಕಾರ್ಯಕಾರಿ ಮಂಡಳಿ ಸದಸ್ಯರಿಗೆ ಗುರುಸೇವಾ ಧೀಕ್ಷೆ ನೀಡಿ ಸತ್ಕರಿಸಿದರು. ಅಂಧ ಕಲಾವಿದರುಗಳಾದ ಮಂಜುನಾಥ ಕಮ್ಮಾರ, ಸುರೇಶ ಅಂಗಡಿ, ಇವರಿಗೆ ಸತ್ಕರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಶ್ರೀ ಹುಕ್ಕೇರಿಮಠ ಅಕ್ಕನ ಬಳಗದ ಅಕ್ಕಂದಿರಿಂದ , ಮಮತಾ ಮಾಗಳ ಮತ್ತು ಸನ್ಮಾನಿತರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿದವು.
ಸಹ ಕಾರ್ಯದರ್ಶಿ ಮಮತಾ ಮಾಗಳ ಪ್ರಾರ್ಥನೆ ನಡೆಸಿಕೊಟ್ಟರು. ಸಮಿತಿಯ ಕೊಷ್ಯಾಧ್ಯಕ್ಷ ಫಕ್ಕೀರಶಟ್ರು ಎಸ್. ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಖಾ ಬ. ನೆರಳೆಕರ್ ಸರ್ವರಿಗೂ ಸ್ವಾಗತಿಸಿದರು. ರಶ್ಮಿ ಎನ್. ತುಪ್ಪದ ವಂದನಾರ್ಪಣೆ ಮಾಡಿದರು. ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿಕಲಾ ಪಿ. ಅಕ್ಕಿ. ಕಾರ್ಯಕ್ರಮದ ನೀರೂಪಣೆ ಮಾಡಿದರು.

Share This Article
error: Content is protected !!
";