ಡಿವೈಎಸ್ಪಿ ಅವರಿಂದ ನದಿತಿರದ ಜನರಿಗೆ ಮುನ್ಸೂಚನೆ.

Vijayanagara Vani
ಡಿವೈಎಸ್ಪಿ ಅವರಿಂದ ನದಿತಿರದ ಜನರಿಗೆ ಮುನ್ಸೂಚನೆ.

ಸಿರುಗುಪ್ಪ:ತುಂಗಭದ್ರ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಈಗಾಗಲೆ ನದಿಗೆ ನೀರು ಬಿಡಲಾಗಿದ್ದು ನೀರಿನ ಪ್ರಮಾಣ ಯಾವಕ್ಷಣದಲ್ಲಾದರು ಹೆಚ್ಚಾಗ ಬಹದು ತಾಲೂಕಿನ ನದಿ ಪಾತ್ರದ ಗ್ರಾಮಗಳಾದ ನಡಿವೆ ನಿಟ್ಟೂರು, ಹೆರಕಲ್ಲು, ಕೆಂಚನಗುಡ್ಡ ತಾಂಡ, ವಿನಾಯಕ ನಗರ ಕ್ಯಾಂಪು, ಗಡ್ಡೆ ವಿರುಪಪುರ, ದೇಶನೂರು, ಬಾಗೇವಾಡಿ, ಕೆಸರುಕುಣಿ ಕ್ಯಾಂಪು ಚಳ್ಳೆ ಕೂಡ್ಲೂರು ಚಿಕ್ಕ ಬಳ್ಳಾರಿ ಹಚ್ಚೋಳ್ಳಿ ಹೀಗೆ ನದಿ ಪಾತ್ರದಲ್ಲಿರುವ ಎಲ್ಲಾ ಗ್ರಾಮಗಳ ಗ್ರಾಮಸ್ಥರು ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿದ್ದು ಗ್ರಾಮಸ್ಥರು ಮತ್ತು ರೈತರು ನದಿಗೆ ಇಳಿಯದಂತೆ ಎಚ್ಚರ ವಹಿಸಬೇಕು ಮತ್ತು ತಮ್ಮ ಜಾನುವಾರುಗಳನ್ನು ಸಹ ನದಿಯ ಬಳಿ ಬಿಡಬಾರದು ಅದೇ ರೀತಿಯಾಗಿ ನದಿ ದಡದಲ್ಲಿರುವ ಪಂಪ್ ಸೆಟ್ ಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ನದಿ ಪಾತ್ರದಲ್ಲಿ ಅನವಶ್ಯಕವಾಗಿ ಯಾರು ತಿರುಗಾಡಬಾರದು. ಹರಗೋಲು ಉಪಯೋಗಿಸದಂತೆ ಎಲ್ಲರೂ ಸುರಕ್ಷಿತಾಕಾಮವನ್ನು ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಏನಾದರೂ ಅನಾಹುತ ಅವಗಡ ಸಂಭವಿಸಿದಲ್ಲಿ ಯಾವುದೇ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಅಥವಾ 112 ಕರೆ ಮಾಡಿ ಎಂದು ಸಿರಗುಪ್ಪ ಉಪ ವಿಭಾಗದಡಿ ವೈಎಸ್ಪಿ ವೆಂಕಟೇಶ್ ಹೊಗಿಬಂಡಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!