ಉಚಿತ ಹೃದಯರೋಗ, ನರರೋಗ, ಮೂತ್ರಪಿಂಡದ ಕಲ್ಲು ಕಾಯಿಲೆಗಳ ಹಾಗೂ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ.

Vijayanagara Vani
ಉಚಿತ ಹೃದಯರೋಗ, ನರರೋಗ, ಮೂತ್ರಪಿಂಡದ ಕಲ್ಲು ಕಾಯಿಲೆಗಳ ಹಾಗೂ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ.
ಗಂಗಾವತಿ:  ಶೇಷಾದ್ರಿ ಶಿಕ್ಷಣ ಸಂಸ್ಥೆ (ರಿ) ಗಂಗಾವತಿ  ಮಂಜುನಾಥ ಆಸ್ಪತ್ರೆ ಗಂಗಾವತಿ, ಸ್ವಾಮಿ ವಿವೇಕಾನಂದ ಸೇವಾ ಸಂಘ (ರಿ) ಶ್ರೀರಾಮನಗರ, ಎಸ್.ಎಸ್ ಸ್ಪರ್ಶ್ ಆಸ್ಪತ್ರೆ ಬೆಂಗಳೂರು ಹಾಗೂ ಐದೃಷ್ಟಿ ಕಣ್ಣಿನ ಆಸ್ಪತ್ರೆ ಹೊಸಪೇಟೆ ಇವರುಗಳ ಸಂಯುಕ್ತಾಶ್ರಯದಲ್ಲಿ ಗಂಗಾವತಿ ನಗರದ ಹೊಸಳ್ಳಿ ರಸ್ತೆಯ ಕನಕದಾಸ ವೃತ್ತದಲ್ಲಿರುವ  ಮಂಜುನಾಥ ಆಸ್ಪತ್ರೆಯಲ್ಲಿ ಜೂನ್-13 ಗುರುವಾರ ಬೃಹತ್ ಉಚಿತ ಹೃದಯರೋಗ ಹಾಗೂ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.ಈ ಶಿಬಿರಕ್ಕೆ ಗಂಗಾವತಿಯ ತಹಶೀಲ್ದಾರ ಗ್ರೇಡ್-2 ಆದ ಮಾಂತಗೌಡ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಾನಂದ ಸೇವಾ ಸಂಘದ ಅಧ್ಯಕ್ಷರಾದ ಜಿ. ರಾಮಕೃಷ್ಣ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಾಜಿ ನಗರಸಭೆ ಸದಸ್ಯರಾದ ಪರಮೇಶಪ್ಪ ಈಡಿಗರ, ಬಿಜೆಪಿ ಹಿರಿಯ ಮುಖಂಡ ಶ್ರವಣಕುಮಾರ ರಾಯಕರ ಆಗಮಿಸಿದ್ದರು.ಶಿಬಿರದಲ್ಲಿ ತಜ್ಞರ ಸಲಹೆ ಮೇರೆಗೆ ಉಚಿತವಾಗಿ ಸುಮಾರು 30 ಇ.ಸಿ.ಜಿ, 2ಡಿ ಎಕೋ ಸ್ಕ್ಯಾನಿಂಗ್, ಶುಗರ್ ಪರೀಕ್ಷೆ ಮಾಡಲಾಯಿತು. ಈ ವೇಳೆ ವಿವೇಕಾನಂದಸೇವಾ ಸಂಘದ ಅಧ್ಯಕ್ಷ ಜಿ. ರಾಮಕೃಷ್ಣ ಮಾತನಾಡಿ ಈ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 200ಕ್ಕೂ ಅಧಿಕ ರೋಗಿಗಳಿಗೆ ತಪಾಸಣೆ ಮಾಡಲಾಗಿದೆ. ಸುಮಾರು 150 ಜನರಿಗೆ ಕಣ್ಣಿನ ತಪಾಸಣೆ ಮಾಡಲಾಗಿದ್ದು, ಅದರಲ್ಲಿ 20 ಜನ ಕಣ್ಣಿನ ರೋಗಿಗಳಿಗೆ ಹೊಸಪೇಟೆಯ ಐದೃಷ್ಟಿ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಶಸ್ತçಚಿಕಿತ್ಸೆಗೆ ನೋಂದಾಯಿಸಲಾಗಿದೆ ಮತ್ತು ಈ ಶಿಬಿರ ಯಶಸ್ವಿಯಾಗಲು ಸಹಕರಿಸಿದ ಎಸ್.ಎಸ್ ಸ್ಪರ್ಶð ಆಸ್ಪತ್ರೆ ಬೆಂಗಳುರು ಹಾಗೂ ವಿವಿಧ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಗೆ, ಶಿಬಿರಕ್ಕೆ ಸ್ಥಳಾವಕಾಶ ನೀಡಿದ  ಮಂಜುನಾಥ ಆಸ್ಪತ್ರೆಯವರಿಗೆ ನಮ್ಮ ಸ್ವಾಮಿ ವಿವೇಕಾನಂದ ಸೇವಾ ಸಂಘದಿಂದ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.ಈ ವೇಳೆ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯ ವೈದ್ಯರುಗಳಾದ ಡಾ. ಮಧುಸೂದನ, ಡಾ. ಅಭಿಲಾಷ್ ಬನಶಾಳ, ಹೊಸಪೇಟೆಯ ಐದೃಷ್ಟಿ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾ. ಸಂದೀಪ,  ಮಂಜುನಾಥ ಆಸ್ಪತ್ರೆಯ ವೈದ್ಯರಾದ ಡಾ. ಕೃಷ್ಣಕುಮಾರ, ಡಾ. ಶರಣಕುಮಾರ ಹಾಗೂಇತರೆ ಸಿಬ್ಬಂಧಿಗಳು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article
error: Content is protected !!