Ad image

ವಿದ್ಯಾರ್ಥಿಗಳಿಗೆ ಉಚಿತ ರಿಯಾಯಿತಿ ಬಸ್ ಪಾಸ್ ವಿತರಣೆ ಆರಂಭ

Vijayanagara Vani
ವಿದ್ಯಾರ್ಥಿಗಳಿಗೆ ಉಚಿತ ರಿಯಾಯಿತಿ ಬಸ್ ಪಾಸ್ ವಿತರಣೆ ಆರಂಭ
ಹೊಸಪೇಟೆ (ವಿಜಯನಗರ) ಮೇ.29: ಹೊಸಪೇಟೆ ವಿಭಾಗದಿಂದ 2024-25ನೇ ಸಾಲಿನ ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್ ಪಾಸುಗಳನ್ನು ಇಡಿಸಿಎಸ್ ಇಲಾಖೆಯ ಸೇವಾಸಿಂಧು ತಂತ್ರಾAಶದ ಮುಖಾಂತರ ಸಂಪೂರ್ಣ ಗಣಕೀಕೃತವಾಗಿ ಪಾಸುಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗಿರುತ್ತದೆ. ವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹಡಗಲಿ, ಹಗರಿಬೊಮ್ಮನಹಳ್ಳಿ ಮತ್ತು ಹರಪ್ಪನಹಳ್ಳಿ ಘಟಕಗಳಿಂದ ಪಾಸು ವಿತರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿರುತ್ತದೆ.
2024-25ನೇ ಸಾಲಿನಲ್ಲಿ ವಿಭಾಗದಲ್ಲಿ ಪಾಸು ವಿತರಿಸಲು ಪಾಸು ಕೌಂಟರಗಳನ್ನು ಸ್ಥಾಪಿಸಲಾಗಿರುತ್ತದೆ.
ಹೊಸಪೇಟೆ ಘಟಕ: ಹೊಸಪೇಟೆ ಘಟಕಕ್ಕೆ ಸಂಬAಧಿಸಿದAತೆ 1) ಹೊಸಪೇಟೆಯ ಬಸ್ ನಿಲ್ದಾಣ 2) ಕರ್ನಾಟಕ ಒನ್, ತಾಲೂಕು ಕೋರ್ಟ್ನ ಹಿಂದುಗಡೆ, ಕೆಎಲ್‌ಎಸ್ ಕಾಂಪ್ಲೆಕ್ಸ್, ಮಹಿಳಾ ಸಮಾಜ ಶಾಲೆ ಹತ್ತಿರ ಹೊಸಪೇಟೆ.
ಕೂಡ್ಲಿಗಿ ಘಟಕ: ಕೂಡ್ಲಿಗಿ ಘಟಕದಲ್ಲಿ 1) ಕರ್ನಾಟಕ ಒನ್, 7ನೇ ವಾರ್ಡ್, ವೆಂಕಟೇಶ್ವರ ದೇವಸ್ಥಾನ ರಸ್ತೆ ಕೂಡ್ಲಿಗಿ ಹಾಗೂ 2) ಕರ್ನಾಟಕ ಒನ್, ತಾಲೂಕು ಕಚೇರಿ, 1ನೇ ಮುಖ್ಯ ರಸ್ತೆ, ಕೊಟ್ಟೂರು.
ಹಡಗಲಿ ಘಟಕ: ಹಡಗಲಿ ಘಟಕದಲ್ಲಿ ಕರ್ನಾಟಕ ಒನ್, ವಾರ್ಡ್ ನಂ-9, ಸೊಪ್ಪಿನ ಕಾಳಮ್ಮ ಬಡಾವಣೆ ಹತ್ತಿರ, ಓಂ ಶಾಂತಿ ನಿಲಯ, ಹಡಗಲಿ
ಹಗರಿಬೊಮ್ಮನಹಳ್ಳಿ ಘಟಕ: ಕರ್ನಾಟಕ ಒನ್, ವಿಠ್ಠಲ್ ಆಸ್ಪತ್ರೆ ಎದುರು, ಅಂಚೆ ಕಚೇರಿ ಮುಖ್ಯ ರಸ್ತೆ, ರಾಮನಗರ, ಹಗರಿಬೊಮ್ಮನಹಳ್ಳಿ.
ಹರಪನಹಳ್ಳಿ ಘಟಕ: ಹರಪನಹಳ್ಳಿ ಘಟಕದಲ್ಲಿ ಹರಪನಹಳ್ಳಿ ಬಸ್ ನಿಲ್ದಾಣದಲ್ಲಿ ಪಾಸು ಕೌಂಟರ್ ಸ್ಥಾಪಿಸಲಾಗಿರುತ್ತದೆ.
ಮೇ 27ರಿಂದ ವಿದ್ಯಾರ್ಥಿಗಳು ಬಸ್ ಪಾಸ್‌ಗಾಗಿ ಸೇವಾಸಿಂಧು ಪೋರ್ಟಲ್  URL-sevasindhu.karnataka.gov.in ತಂತ್ರಾAಶದಲ್ಲಿ ಗೋ ಲೈವ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 2024ರ ಜೂನ್ 1ನೇ ತಾರೀಖಿನಿಂದ ವಿದ್ಯಾರ್ಥಿ ಬಸ್ ಪಾಸ್ ವಿತರಿಸಲು ಕ್ರಮವಹಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

Share This Article
error: Content is protected !!
";