ಜನಮನ ಗೆದ್ದ ಭಾವೈಕ್ಯತೆಯ ಗಣೇಶ ಮೂರ್ತಿ
ವಿಜಯನಗರವಾಣಿ ಸುದ್ದಿ
ಕುರುಗೋಡು.
ವಿವಿಧತೆಯಲ್ಲಿ ಏಕತೆ ಸಾರುವ ದೇಶ ಭಾರತ. ಇಲ್ಲಿ ಎಲ್ಲಾ ಧರ್ಮೀಯರು ವಾಸಿಸುತ್ತಿದ್ದಾರೆ. ಪರಸ್ಪರ ಸಾಮರಸ್ಯ, ಬಾಂಧವ್ಯ, ಸಹೋದರತೆ ಇನ್ನು ಕೂಡ ಜೀವಂತವಾಗಿವೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.
ಪಟ್ಟಣದ ಶ್ರೀ ದೊಡ್ಡ ಬಸವೇಶ್ವರ ದೇವಾಲಯದ ಬಳಿಯ ರೈತ ಸಮುದಾಯ ಭವನದಲ್ಲಿ ಪಟ್ಟಣದ ಯುವಕರ ತಂಡ “ಸ್ನೇಹಿತರ ಬಳಗ ಕುರುಗೋಡು” ಎಂಬ ಯುವಕರ ತಂಡವೊಂದನ್ನು ರಚಿಸಿಕೊಂಡು ಪ್ರತಿಷ್ಠಾಪಿಸಿರುವ ಭಾವೈಕ್ಯತೆಯ ಗಣೇಶ ಮೂರ್ತಿ ಸದ್ಯ ಮನೆ ಮಾತಾಗಿದೆ.
ಈ ಮೂಲಕ ಯುವಕರು ಸಮಾಜಕ್ಕೆ ಸೌಹಾರ್ದತೆಯ ಸಂದೇಶ ಸಾರಿದ್ದಾರೆ.
ಇನ್ನೂ ಗಣೇಶ ಮೂರ್ತಿ ಹಿಂದೂ ,ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇಧಭಾವವಿಲ್ಲದೆ. ಮಾನವರು ನಾವೆಲ್ಲಾ ಒಂದೇ ಎಂಬ ತತ್ವದಲ್ಲಿ ಜೀವನ ಸಾಗಿಸಬೇಕೆಂಬ ಸಂದೇಶ ಸಾರುತ್ತಿದೆ.
ಈ ಯುವಕರ ತಂಡದಲ್ಲೂ ಹಿಂದೂ ಮತ್ತು ಮುಸ್ಲಿಂ ಯುವಕರಿದ್ದು ಯಾವುದೇ ಭೇಧ ಭಾವವಿಲ್ಲದೆ ಪರಸ್ಪರ ಸಹೋದರರಂತೆ ಜೀವನ ನಡೆಸುತ್ತಿರುವುದು ಮತ್ತೊಂದು ವಿಶೇಷ.
ಗಣೇಶ ಮೂರ್ತಿಯ ಮುಂಭಾಗದಲ್ಲಿ “ಏನಾದರೂ ಆಗು ಮೊದಲು ಮಾನವನಾಗು” ಎಂಬ ಸಂದೇಶದ ಜೊತೆಗೆ ಜಗಜ್ಯೋತಿ ಬಸವೇಶ್ವರ ವಚನಗಳು,ಮಿಸೈಲ್ ಮ್ಯಾನ್ (ಕ್ಷಿಪಣಿ ಮನುಷ್ಯ) ಅಬ್ದುಲ್ ಕಲಾಂ,ಮಾನವತಾವಾದಿ ಇಬ್ರಾಹಿಂ ಸುತಾರ, ಕುಷ್ಠರೋಗಿಗಳಿಗೆ ಸೇವೆ ಸಲ್ಲಿಸಿದ ಮಹಾ ತಾಯಿ ಮದರ್ ತೆರೇಸಾರವರ,ಭಾವಚಿತ್ರಗಳು ಹಾಗೂ ಅವರ ಪ್ರಸಿದ್ದ ಹೇಳಿಕೆಗಳು ಗಮನ ಸೆಳೆಯುತ್ತವೆ. ಈ ಸಂದರ್ಭದಲ್ಲಿ ಸ್ನೇಹಿತರ ಬಳಗದ ಅಧ್ಯಕ್ಷ ಬಾದನಹಟ್ಟಿಯ ಚಾನಾಳ್ ವಿಶ್ವನಾಥ ಮಾತನಾಡಿ ಜಾತಿ, ಧರ್ಮಕ್ಕಿಂತ ಸ್ನೇಹ ಮಿಗಿಲಾಗಿದ್ದು. ಗಣೇಶ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಎಂಬ ಭೇಧ ಭಾವವಿಲ್ಲದೆ ನಾವೆಲ್ಲಾ ಒಂದೇ ಎಂಬ ಏಕತೆಯ ಭಾವನೆಗಳನ್ನು ಮೂಡಿಸುವುದು. ಜಾತಿ, ಧರ್ಮ, ಪಂಥಗಳ ಮೀರಿ ಇಂದಿನ ಮಕ್ಕಳು , ಯುವಕರು ಬದುಕು ನಡೆಸುವಂತಾಗಬೇಕುಎಂಬ ಸಂದೇಶವನ್ನು ರವಾನಿಸುವುದು ನಮ್ಮ ತಂಡದ ಮುಖ್ಯ ಉದ್ದೇಶವಾಗಿದೆ. ಎಲ್ಲರಿಗೂ ದೇವರು ಒಬ್ಬನೇ… ಈ ಸಂದೇಶವನ್ನು ಯುವಕರಿಗೆ ಹಾಗೂ ಸಾರ್ವಜನಿಕರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.ಯುವಕರ ಈ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈಸಂದರ್ಭದಲ್ಲಿ ಸ್ನೇಹಿತರ ಬಳಗದ ಉಪಾಧ್ಯಕ್ಷ ಮೈನೂದ್ದೀನ್ , ಹರಿ, ಸಿದ್ದೇಶ,ವೀರೇಶ್,ಸಂತೋಷ, ಮನ್ಸುರ್,ಭರತ್,ಉಮೇಶ್, ಮೇಘ,ಮೌನೇಶ್ , ಅನಿಲ್,ದೇವರಾಜ,ಪಂಪಾ,ಮಹೇಶ್,ಮಲ್ಲಿ,ಕೃಷ್ಣ,ದೊಡ್ಡ ಬಸವ,ರಫಿಕ್,ಶೇಕ್ಷಾವಲಿಆಲ್ತಫ್,ರಾಜಾ,ರಘು,ತಿಪ್ಪೇಶ,ಅಲ್ಲಾಭಕ್ಷಿ,ಶ್ರೀಕಾಂತ್,ಸೇರಿದಂತೆ ಅನೇಕ ಸ್ನೇಹಿತರು ಉಪಸ್ಥಿತರಿದ್ದರು.