ಕಂಪ್ಲಿ: ಸ್ಥಳೀಯ ಲಾರಿ ಮಾಲೀಕರನ್ನು ಕಡೆಗಣಿಸಿ, ಬೇರೆಯವರಿಗೆ ಹೆಚ್ಚಿನ ಆಧ್ಯತೆ ನೀಡಿ, ಕಾರ್ಖಾನೆಯವರು ಸ್ಪಾಂಜ್ ಸಾಗಾಣಿಕೆಗೆ ಅವಕಾಶ ಮಾಡಿಕೊಡುವ ಮೂಲಕ ಸ್ಥಳೀಯರಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಶಾರದಾ ರೋಡ್ ಲೈನ್ಸ್ನ ಲಾರಿ ಮಾಲೀಕ ಮಹೇಶ ದೂರಿದರು.
ಸಮೀಪದ ಕುಡಿತಿನಿಯ ವೇಣಿವೀರಾಪುರ ಬಳಿಯಲ್ಲಿ ಶಾರದಾ ರೋಡ್ಲೈನ್ಸ್ ನೇತೃತ್ವದಲ್ಲಿ ಲಾರಿ ಮಾಲೀಕರು ಸೋಮವಾರ ಹಮ್ಮಿಕೊಂಡಿದ್ದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿ, ಸ್ಕಾö್ಯನ್ ಎರ್ಜಿ, ಅಗರ್ವಾಲ್, ಹೊತ್ತೂರ್, ರಯನಾ ಕಾರ್ಖಾನೆಗಳಿಂದ ಸ್ಪಾಂಜ್ ಸಾಗಾಣಿಕೆ ಮಾಡುತ್ತಾ ಬಂದಿದ್ದು, ಇತ್ತೀಚಿನ ದಿನಮಾನದಲ್ಲಿ ಸ್ಥಳೀಯ ಲಾರಿ ಮಾಲೀಕರನ್ನು ಬದಿಗೊತ್ತಿ, ಬೇರೆಯವರಿಗೆ ಅವಕಾಶ ಮಾಡಿಕೊಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸುವ ಜತೆಗೆ ಕಾರ್ಖಾನೆಗಳನ್ನೇ ನೆಚ್ಚಿಕೊಂಡು ೭೦-೧೦೦ ಲಾರಿಗಳು ಸ್ಪಾಂಜ್ ಹೊಡೆಯುತ್ತಿವೆ. ಸಾಲ ಸೂಲ ಮಾಡಿ ಲಾರಿ ತಂದು, ಸ್ಪಾಂಜ್ ಸಾಗಾಟ ಮಾಡುವ ಮೂಲಕ ಹೊಟ್ಟೆ ತುಂಬಿಸಿಕೊಳ್ಳಲಾಗುತ್ತಿದೆ. ಇಲ್ಲಿನ ಕೆಲವೊಂದು ಲಾರಿಗಳಿಗೆ ಮಾತ್ರ ಸ್ಪಾಂಜ್ ತುಂಬಿಕೊAಡು ಹೋಗಲು ಅವಕಾಶ ಮಾಡಿ, ಹೆಚ್ಚಿನ ಅಧ್ಯತೆಯ ಮೂಲಕ ಬೇರೆಯ ಲಾರಿಗಳಿಗೆ ಆನ್ಲೋಡ್ ಮಾಡಿ ಕಳುಹಿಸಿಕೊಡಲಾಗುತ್ತಿದೆ. ಇದರಿಂದ ಇದನ್ನೇ ನೆಚ್ಚಿಕೊಂಡ ಲಾರಿ ಮಾಲೀಕರ ಬದುಕು ಬೀದಿಗೆ ಬಂದಿದೆ. ಕೆಲವರು ಲಾರಿಗಳನ್ನು ಕಂತಿನ ರೂಪದಲ್ಲಿ ತಂದು ಕಾರ್ಖಾನೆಯಲ್ಲಿ ಸ್ಪಾಂಜ್ ಸಾಗಿಸುವ ಮೂಲಕ ಜೀವನ ಕಟ್ಟಿಕೊಂಡಿದ್ದು, ಈಗ ಕೆಲವೊಂದು ಲಾರಿಗೆ ಮಾತ್ರ ಅವಕಾಶ ಇರುವುದರಿಂದ ಇನ್ನೂ ಕೆಲ ಲಾರಿಗಳನ್ನು ಮನೆ ಮುಂದೆ ನಿಲ್ಲಿಸಿಕೊಂಡು, ಫೈನ್ಯಾನ್ಸ್ನವರು ಲಾರಿಗಳನ್ನು ಎಳೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಧೂಳಿನ ಮಧ್ಯ ಜೀವನ ನಡೆಸುವ ಸ್ಥಳೀಯರನ್ನು ಕಡೆಗಣಿಸಲಾಗುತ್ತಿದೆ. ರಕ್ಷಣೆ ಮತ್ತು ಭದ್ರತೆ ಇಲ್ಲ. ಸುರಕ್ಷಿತ ಸಾಮಾಗ್ರಿಗಳಿಲ್ಲ. ಇಂತರದಲ್ಲೇ ಜೀವದ ಅಂಗು ತೊರೆದು ಲಾರಿ ಹೋಡಿಸುತ್ತಿರುವ ಸ್ಥಳೀಯರು ಬೇಕಾಗಿಲ್ಲ. ಆದ್ದರಿಂದ ಕೂಡಲೇ ಕಾರ್ಖಾನೆಯವರು ಸ್ಪಾಂಜ್ ಹೊಡೆಯಲು ಸ್ಥಳೀಯರಿಗೆ ಶೇ.೫೦ಷ್ಟು ಅವಕಾಶ ಮಾಡಿಕೊಡುವ ಜತೆಗೆ ಮೊದಲ ಆಧ್ಯತೆ ನೀಡಬೇಕು. ಈ ಸಂಬAಧ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಮತ್ತು ಈ ಬೇಡಿಕೆ ಈಡೇರಿಸದಿದ್ದಲ್ಲಿ ಬೃಹತ್ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಲಾರಿ ಮಾಲೀಕರಾದ ಡಿ.ನಾಗೇಶ, ಎ.ಸ್ವಾಮಿ, ಕೆ.ಮಹೇಶ, ಡಿ.ದೇವಣ್ಣ, ಡಿ.ಆನಂದ, ಎ.ಶಿವಪ್ಪ, ಡಿ.ದೇವರಾಜ, ಜಗಪತಿಬಾಬು, ಟಿ.ಸಂಜೀವಪ್ಪ, ಜಿ.ತಿಪ್ಪಯ್ಯ, ಕೆ.ಕೃಷ್ಣಮೂರ್ತಿ, ಹೆಚ್.ದೇವೇಂದ್ರ, ಬಿ.ತಿಪ್ಪಯ್ಯ, ಪೋತ್ಲಿಂಗ ಇದ್ದರು.