Ad image

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ: ಒಂದು ದಿನದ ತಾಂತ್ರಿಕ ತರಬೇತಿ ಕಾರ್ಯಕ್ರಮ .

Vijayanagara Vani
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ: ಒಂದು ದಿನದ ತಾಂತ್ರಿಕ ತರಬೇತಿ ಕಾರ್ಯಕ್ರಮ .
ಬಳ್ಳಾರಿ,ಜೂ.26
ಇಂಧನ ವಸ್ತುಗಳ ಬಳಕೆಯಲ್ಲಿ ಅವುಗಳ ಕಾರ್ಯ ಮತ್ತು ತಂತ್ರಜ್ಞಾನವು ಅರಿತುಕೊಳ್ಳಬೇಕು ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ವಿಭಾಗೀಯ ಕಚೇರಿಯ ಜಂಟಿ ನಿರ್ದೇಶಕ ರವೀಂದ್ರನಾಥ್ ಎಸ್.ಬಳ್ಳಿ ಅವರು ಹೇಳಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬ್ಯೂರೋ ಆಫ್ ಎನರ್ಜಿ ಎಫಿಶಿಎನ್ಸಿ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಇವರ ಸಂಯುಕ್ತಾಶ್ರಯದಲ್ಲಿ ಪಂಪ್, ಉಪಕರಣ ತಂತ್ರಜ್ಞರಿಗೆ ಇಂಧನ ದಕ್ಷತಾ ಕಾರ್ಯಗಾರ ಕುರಿತು ಸೋಮವಾರ ಏರ್ಪಡಿಸಿದ್ದ ಒಂದು ದಿನದ ತಾಂತ್ರಿಕ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಾಗಾರದ ಉಪಯೋಗ ಪಡೆದು, ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬೇಕು ಎಂದರು.
ಇದೇ ವೇಳೆ ತರಬೇತುದಾರರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ಕೈಗಾರಿಕಾ ಸಂಸ್ಥೆಯ ಪ್ರಾಚಾರ್ಯ ಕೆ.ಹೆಚ್.ಎಂ.ಪಂಡಿತಾರಾಧ್ಯ, ತರಬೇತಿ ಅಧಿಕಾರಿಗಳಾದ ಎಸ್.ಎ.ಬಿರಾದರ್, ಮಹಮ್ಮದ್ ಜುನೇದ್, ಕಿರಿಯ ತರಬೇತಿ ಅಧಿಕಾರಿಗಳಾದ ವೆಂಕಟೇಶ.ಟಿ, ಚಂದ್ರಶೇಖರ ರೆಡ್ಡಿ, ಗೊಂವಿದಪ್ಪ, ಟಿ.ಚೆನ್ನಬಸವ, ಶ್ರೀನಿವಾಸುಲು, ಹೆಚ್.ಎಂ.ಇಂದಿರ, ಹೆಚ್.ಚಂದ್ರಿಕ ಸೇರಿದಂತೆ 120 ತರಬೇತಿದಾರರು ಹಾಗೂ ಹಾಜರಿದ್ದರು.
Share This Article
error: Content is protected !!
";