Ad image

ರಾಜ್ಯಪಾಲರ ನಿರ್ಧಾರ ‘ಪ್ರಜಾಪ್ರಭುತ್ವ, ಸಂವಿಧಾನದ ಕಗ್ಗೋಲೆ’…ಶೋಕಾಸ್ ನೋಟಿಸ್ ಹಿಂಪಡೆಯಲು ಸಂಪುಟ ಆಗ್ರಹ

Vijayanagara Vani
ರಾಜ್ಯಪಾಲರ ನಿರ್ಧಾರ ‘ಪ್ರಜಾಪ್ರಭುತ್ವ, ಸಂವಿಧಾನದ ಕಗ್ಗೋಲೆ’…ಶೋಕಾಸ್ ನೋಟಿಸ್ ಹಿಂಪಡೆಯಲು ಸಂಪುಟ ಆಗ್ರಹ

ಬೆಂಗಳೂರು: ಮುಡಾದಲ್ಲಿನ ನಿವೇಶನ ಹಂಚಿಕೆ ಹಗರಣ ಕುರಿತು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿರುವ ಶೋ ಕಾಸ್ ನೋಟಿಸ್ ನ್ನು ಹಿಂಪಡೆಯುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲಟ್ ಅವರನ್ನು ಕರ್ನಾಟಕ ಸರ್ಕಾರ ಗುರುವಾರ ತೀವ್ರವಾಗಿ ಒತ್ತಾಯಿಸಿದೆ. ಇದು ಕಾಂಗ್ರೆಸ್ ಆಡಳಿತವನ್ನು ಅಸ್ಥಿರಗೊಳಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದೆ.

- Advertisement -
Ad imageAd image

ಮುಖ್ಯಮಂತ್ರಿ ಸಿದ್ದರಾಮಯ್ಯ ಅವ ರನ್ನು ಹೊರಗಿಟ್ಟು ನಗರದಲ್ಲಿಂದು ನಡೆದ ಸಂಪುಟ ಸಭೆಯಲ್ಲಿ ಶೋಕಾಸ್‌ ನೋಟಿಸ್‌ ಕುರಿತು ಸಚಿವರು ಚರ್ಚಿಸಿದರು. ರಾಜ್ಯಪಾ ಲರ ಸಂವಿಧಾನಿಕ ಕಚೇರಿಯನ್ನು ದುರುಪ ಯೋಗ ಮಾಡಿಕೊಳ್ಳಲಾಗುತ್ತಿದೆ. ರಾಜಕೀ ಯ ಕಾರಣಕ್ಕಾಗಿ ಕಾನೂನುಬದ್ಧವಾಗಿ ಚು ನಾಯಿತವಾದ ಬಹುಮತದ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಘಟಿತ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ವಕೀಲ, ಸಾಮಾಜಿಕ ಕಾರ್ಯಕರ್ತಟಿಜೆ ಅಬ್ರಹಾಂ ಸಲ್ಲಿಸಿದ ಅರ್ಜಿಯ ಆಧಾ ರದ ಮೇಲೆ ರಾಜ್ಯಪಾಲರು ಜುಲೈ 26 ರಂದು ನೋಟಿಸ್‌ ಜಾರಿ ಮಾಡಿದ್ದು, ಪ್ರಾಸಿ ಕ್ಯೂಷನ್‌ಗೆ ಏಕೆ ಅನುಮತಿ ನೀಡಬಾರದು ಎಂಬುದಕ್ಕೆ ಏಳು ದಿನಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಮುಖ್ಯ ಮಂತ್ರಿಗೆ ಸೂಚಿಸಿ ದ್ದಾರೆ. ಸಚಿವ ಸಂಪುಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅಬ್ರಹಾಂ ವಿರುದ್ಧ ಬ್ಲ್ಯಾಕ್ ಮೇಲ್ ಮತ್ತು ಸುಲಿಗೆಯ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂಬ ಅಂಶವನ್ನು ಗಮನಿಸುವಲ್ಲಿ ರಾಜ್ಯ ಪಾಲರು ವಿಫಲರಾಗಿದ್ದಾರೆ. ಮುಖ್ಯ ಮಂತ್ರಿಗೆ ನೀಡಿರುವ ನೋಟಿಸ್‌ ಹಿಂಪಡೆ ಯುವಂತೆ ಹಾಗೂ ಅಬ್ರಹಾಂ ಸಲ್ಲಿಸಿರುವ ಅರ್ಜಿಯನ್ನು ತಕ್ಷಣವೇ ತಿರಸ್ಕರಿಸುವಂತೆ ಸಚಿವ ಸಂಪುಟ ರಾಜ್ಯಪಾಲರನ್ನು ತೀವ್ರ ವಾಗಿ ಒತ್ತಾಯಿಸಿರುವುದಾಗಿ ತಿಳಿಸಿದರು.

ರಾಜ್ಯಪಾಲರು ನೋಟಿಸ್‌ ಹಿಂಪಡೆ ಯುವ, ಯಾವುದೇ ಒತ್ತಡಕ್ಕೆ ಬಗ್ಗದೆ ತಮ್ಮ ಕಚೇರಿಯ ಘನತೆಯನ್ನು ಎತ್ತಿಹಿಡಿಯುವ ವಿಶ್ವಾಸವಿದೆ ಎಂದು ಹೇಳಿದ ಶಿವಕುಮಾರ್‌, ಶೋಕಾಸ್‌ ನೋಟಿಸ್‌ ನೀಡುವಲ್ಲಿ ರಾಜ್ಯಪಾಲರು ಎಲ್ಲಾ ಕಾರ್ಯವಿಧಾನದ ನಿಯ ಮಗಳನ್ನು ಗಾಳಿಗೆ ತೂರಿ ಅನಗತ್ಯ ಆತು ರದಿಂದ ವರ್ತಿಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ರಾಜ್ಯಪಾಲರ ನಿರ್ಧಾರ ಪ್ರಜಾಪ್ರಭುತ್ವಮತ್ತು ಸಂವಿಧಾನದ ಕಗ್ಗೋಲೆ ಎಂದು ಬಣ್ಣಿಸಿದ ಡಿಕೆ ಶಿವಕುಮಾರ್, ಇಲ್ಲಿ ಪ್ರಾಸಿ ಕ್ಯೂಷನ್‌ಗೆ ಯಾವುದೇ ಪ್ರಕರಣವಿಲ್ಲ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಉತ್ತಮ ಮಾರುಕಟ್ಟೆ ಮೌಲ್ಯವಿರುವ ಪ್ರದೇಶದಲ್ಲಿ ಪರಿಹಾರವಾಗಿ ನಿವೇಶನ ನೀಡಲಾಗಿದೆ ಎಂಬ ಆರೋಪವಿದೆ. ಇದು ಮುಡಾ ಸ್ವಾಧೀನ ಪಡಿಸಿಕೊಂಡಿರುವ ಪಾರ್ವತಿ ಅವರ ಭೂಮಿಗೆ ಹೋಲಿಸಿದರೆ ಹೆಚ್ಚಿನ ಮೌಲ್ಯವನ್ನು ಹೊಂದಿದೆ.ಕಾಂಗ್ರೆಸ್ ಸರ್ಕಾರ ಜುಲೈ 14 ರಂದುಮುಡಾ ‘ಹಗರಣ’ದ ತನಿಖೆಗಾಗಿ ಮಾಜಿಹೈಕೋರ್ಟ್‌ ನ್ಯಾಯಾಧೀಶ ನ್ಯಾಯ ಮೂರ್ತಿ ಪಿ ಎನ್ ದೇಸಾಯಿ ಅವರನೇತೃತ್ವದಲ್ಲಿಏಕಸದಸ್ಯ ತನಿಖಾ ಆಯೋ ಗವನ್ನು ರಚಿಸಿದೆ. ಇಂದಿನ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಗೈರು ಹಾಜರಾ ಗಿದ್ದರು. ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು

Share This Article
error: Content is protected !!
";