Ad image

ಲಿಂಗಸೂರನಲ್ಲಿ ಅಕ್ಕ ಕೆಫೆ ವೀಕ್ಷಣೆ ಮಾಡಿದ ಜಿಪಂ ಸಿಇಓ

Vijayanagara Vani
ಲಿಂಗಸೂರನಲ್ಲಿ ಅಕ್ಕ ಕೆಫೆ ವೀಕ್ಷಣೆ ಮಾಡಿದ ಜಿಪಂ ಸಿಇಓ

 

ರಾಯಚೂರು, ಜುಲೈ 21):ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕಾಂದೂ ಅವರು ಜುಲೈ 19ರಂದು ಲಿಂಗಸೂಗೂರು ತಾಲೂಕಿಗೆ ತೆರಳಿ ಅಲ್ಲಿನ ತಾಲೂಕು ಪಂಚಾಯತಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅಕ್ಕ ಕೆಫೆಯ ವೀಕ್ಷಣೆ ನಡೆಸಿದರು.
ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರೇ ಅಕ್ಕ ಕೆಫೆ ನಿರ್ವಹಣೆ ಮಾಡಬೇಕು. ತಾಲೂಕು ಪಂಚಾಯತ್ ಕಾರ್ಯನಿರ್ವಾಹ ಅಧಿಕಾರಿಗಳೊಂದಿಗೆ ಎನ್‌ಆರ್‌ಎಲ್‌ಎಂ ಸಿಬ್ಬಂದಿಯು ಸಭೆ ಮಾಡಿ ಊಟ ಮತ್ತು ಉಪಹಾರದ ದರಪಟ್ಟಿ ನಿಗದಿಮಾಡಿಕೊಳ್ಳಬೇಕು ಎಂದು ಸಿಇಓ ಅವರು ಸೂಚನೆ ನೀಡಿದರು. ಈ ಕೆಫೆಯಲ್ಲಿ ದೂಮಪಾನ, ಮಧ್ಯಪಾನ ಮಾಡದಂತೆ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಸಿ.ಸಿ ಟಿವಿ ಕ್ಯಾಮರಾ, ಬೆಂಕಿ ನಿಯಂತ್ರಣ ಯಂತ್ರ ಅಳವಡಿಸಬೇಕು. ಅಕ್ಕ ಕೆಫೆ ನಿರ್ವಹಣೆ ಮಾಡಲು ನೀಡಿರುವ ಕಟ್ಟಡಕ್ಕೆ ಬಾಡಿಗೆ ನಿಗದಿಪಡಿಸುವಂತೆ ಸೂಚಿಸಿದರು.
ಅಕ್ಕ ಕೆಫೆಯ ಮುಖ್ಯ ಬಾಗಿಲಿನ ಮುಂದೆ ಮೇಲ್ಚಾವಣೆಯ ನೀರು ಬೀಳುವುದನ್ನು ತಪ್ಪಿಸಿ ಹಿಂಭಾಗದಲ್ಲಿ ಪೈಪು ಅಳವಡಿಸಿ ನೀರು ಹರಿಬಿಡಬೇಕು ಎಂದು ಸಿಇಓ ಅವರು ಸಲಹೆ ಮಾಡಿದರು. ಈ ಕೆಫೆ ನಿರ್ವಹಣೆಯನ್ನು ಮಾಡಲು ಪುರುಷರಿಗೆ ಅವಕಾಶವಿರುವುದಿಲ್ಲ ಎಂಬುದರ ಬಗ್ಗೆ ತಿಳಿಯಬೇಕು ಎಂದು ಸಿಇಓ ಅವರು ತಿಳಿಸಿದರು.
ಅಕ್ಕ ಕೆಫೆಯ ಉದ್ಘಾಟನೆ ಮಾಡುವ ಮುಂಚಿತವಾಗಿ ಸ್ವ-ಸಹಾಯ ಗುಂಪಿನ ಸದಸ್ಯರಿಗೆ ತರಬೇತಿ ನೀಡಬೇಕು ಹಾಗೂ ಅಕ್ಕ ಕೆಫೆಯನ್ನು 15 ದಿನದೊಳಗೆ ಉದ್ಘಾಟನೆ ಮಾಡುವಂತೆ ಸಿಇಓ ಅವರು ನಿರ್ದೇಶನ ನೀಡಿದರು.
ವಿಶೇಷ ಮಹಿಳೆಯರಿಗೆ ಕೆಫೆ ನಿರ್ವಹಣೆ ಮಾಡುವ ವ್ಯವಸ್ಥೆ ಮಾಡಬೇಕು. ಸುಮಾರು 2 ರಿಂದ 3 ಎಸ್‌ಎಚ್‌ಜಿಯವರಿಂದ ಅಕ್ಕ ಕೆಫೆ ನಿರ್ವಹಣೆ ಮಾಡಬೇಕು. ಸ್ಥಳೀಯವಾಗಿ ತಯಾರಿಸುವ ವೆಜ್ ನಾನ್ ವೆಜ್ ಉಪಹಾರಗಳನ್ನು ಸಿದ್ಧಪಡಿಸುವಂತೆ ಸೂಚಿಸಿದರು.
ಅಕ್ಕ ಕೆಫೆ ನಿರ್ವಹಣೆ ಮಾಡುವ ಸದಸ್ಯರು ಸಮವಸ್ತ್ರದೊಂದಿಗೆ ಕೆಫೆಯಲ್ಲಿ ಕಾರ್ಯನಿರ್ವಹಿಸಬೇಕು. ಈ ಕೆಫೆ ನಿರ್ವಹಣೆ ಮಾಡುವ ಗುಂಪು ಹಾಗೂ ತಾಲೂಕು ಪಂಚಾಯತ್ ನಡುವೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಸಿಇಓ ಅವರು ತಿಳಿಸಿದರು.
ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ರ‍್ಡಿಪಿಆರ್ ಸಹಾಯಕ ನಿರ್ದೇಶಕರು, ತಾಲೂಕು ಯೋಜನಾಧಿಕಾರಿಗಳು, ತಾಲೂಕ ಪಂಚಾಯತ್ ಮತ್ತು ಎನ್‌ಆರ್‌ಎಲ್‌ಎಂ ಸಿಬ್ಬಂದಿ ಹಾಜರಿದ್ದರು.

Share This Article
error: Content is protected !!
";