ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಇನ್ನು ಮುಂದೆ ಜನನ – ಮರಣ ಉಪ ನೋಂದಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಈ ಕುರಿತು ಜನನ – ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಜನನ – ಮರಣಗಳಾದ 21 ದಿನಗಳ ಒಳಗೆ ನೋಂದಣಿ ಮಾಡಿಕೊಂಡು ಉಚಿತವಾಗಿ ಪ್ರಮಾಣ ಪತ್ರ ವಿತರಿಸಬೇಕು. 21 ದಿನಗಳ ನಂತರ ಮಾಹಿತಿ ನೀಡುವ ಪ್ರಕರಣಗಳಲ್ಲಿ ₹2 ಶುಲ್ಕ ಪಡೆದು ನೋಂದಣಿ ಮಾಡಬೇಕು. 30 ದಿನಗಳ ತರುವಾಯ ಕಾರ್ಯದರ್ಶಿಗಳು ನೋಂದಣಿ ಮಾಡಬಾರದು ಎಂದು ಸೂಚಿಸಿದೆ.
ಜನನ- ಮರಣಗಳು ನಡೆದು 30 ದಿನಗಳ ತರುವಾಯ ಮಾಹಿತಿ ನೀಡುವ ಜನನ-ಮರಣಗಳ ನೋಂದಣಿ ಅಧಿಕಾರವನ್ನು ಆಯಾ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿಗೆ ನೀಡಲಾಗಿದೆ. ಜನರು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಬೇಕು. ತಹಶೀಲ್ದಾರ್ ಅವರ ಲಿಖಿತ ಅನುಮತಿ ಪಡೆದು ನೋಂದಣಿ ಮಾಡಬೇಕು ಎಂದು ಸೂಚಿಸಲಾಗಿದೆ.