ಸಚಿವ ಶಿವರಾಜ್ ತಂಗಡಗಿ ಯವರ ಹುಟ್ಟು ಹಬ್ಬಕ್ಕೆ ತಾಲೂಕ ಗಂಗಾಮತಸ್ಥರಿಂದ ಶುಭ ಹಾರೈಕೆ

Vijayanagara Vani
ಸಚಿವ ಶಿವರಾಜ್ ತಂಗಡಗಿ ಯವರ ಹುಟ್ಟು ಹಬ್ಬಕ್ಕೆ ತಾಲೂಕ ಗಂಗಾಮತಸ್ಥರಿಂದ ಶುಭ ಹಾರೈಕೆ
ಕಾರಟಗಿ:  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರ 53ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಕಾರಟಗಿ ತಾಲೂಕಿನ ಗಂಗಾಮತಸ್ಥರ ಸಮಾಜದ ಹಾವೇರಿ ಜಿಲ್ಲೆಯ (ಚೌಡಯ್ಯ ದಾನಾಪುರ) ನಿಜಶರಣ ಅಂಬಿಗರ ಚೌಡಯ್ಯನ  ಗುರು ಪೀಠದ ಪರಮ ಪೂಜ್ಯ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾ ಸ್ವಾಮಿಗಳ ಕೃಪಾ ಆಶೀರ್ವಾದದೊಂದಿಗೆ  ಸೋಮವಾರ ಸಮುದಾಯದ ಮುಖಂಡರು ಹಿರಿಯರು ಪದಾಧಿಕಾರಿಗಳು  ಪುಷ್ಪಮಾಲೆ ಹಾಕಿ ಶಾಲು ಹೊದಿಸಿ ಸನ್ಮಾನಿಸಿ ಶುಭ ಹಾರೈಸಿ ಮಾತನಾಡಿದರು.. ಕನಕಗಿರಿ ಕ್ಷೇತ್ರದ ಜನರ ಆಶೀರ್ವಾದದೊಂದಿಗೆ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಅವರಿಗೆ ಆ ಭಗವಂತ ಇನ್ನೂ ಹೆಚ್ಚಿನ ರೀತಿಯಲ್ಲಿ ಜನರ ಸೇವೆ ಮಾಡಲು ಆ ಶಕ್ತಿ ಆಯುರಾರೋಗ್ಯ ಐಶ್ವರ್ಯ ಸಂಪತ್ತು ನೀಡಲಿ ಎಂದು ಹಾರೈಸಿದರು,
 ಈ ಸಂದರ್ಭದಲ್ಲಿ ಹಿರಿಯರಾದ  ಗಂಗಾಮತಸ್ಥರ ಸಮುದಾಯದ ತಾಲೂಕ ಅಧ್ಯಕ್ಷ ಚಿಕ್ಕ ಅಯ್ಯಪ್ಪ ಸಂಗಟಿ, ಗುರುಪೀಠದ ನಿರ್ದೇಶಕ ತಾಯಪ್ಪ ಕೋಟ್ಯಾಳ, ಶರಣಪ್ಪ ಕಾಯಿಗಡ್ಡಿ ಗಂಗಾಮತ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಯಮನಪ್ಪ ಮೂಲಿಮನಿ  ಕಾಂಗ್ರೆಸ್ ಯುವ ಮುಖಂಡ,ನಮ್ಮ ನಾಡ ರಕ್ಷಣಾ ವೇದಿಕೆಯ ಯುವ ಘಟಕದ ರಾಜ್ಯ ಅಧ್ಯಕ್ಷ ಶರಣಪ್ಪ ಸಂಗಟಿ, ಪುರಸಭಾ ನಾಮನಿರ್ದೇಶಕ ಸಿದ್ದಪ್ಪ ಬೇವಿನಾಳ, ಪರಶುರಾಮ ರಾಮನಗರ, ಮತ್ತು ಮತ್ತಿತರರು ಭಾಗವಹಿಸಿದ್ದರು
WhatsApp Group Join Now
Telegram Group Join Now
Share This Article
error: Content is protected !!