ರಾಯಚೂರು,ಮೇ28- ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಯರಮರಸ್ ಕ್ಯಾಂಪಿನಲ್ಲಿ ಅತಿಥಿ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ಹುದ್ದೆಗಳು ಖಾಲಿಯಿದ್ದು, ತಾತ್ಕಾಲಿಕವಾಗಿ ಗೌರವ ಧನದ ಆಧಾರದ ಮೇಲೆ ನೇಮಕಮಾಡಿಕೊಳ್ಳುತ್ತಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ಸರ್ಕಾರಿ ಅಲ್ಪಸಂಖ್ಯಾತರ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕನ್ನಡ, ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ವಿಷಗಳಲ್ಲಿ ತಲಾ ಒಂದು ಹುದ್ದೆ ಖಾಲಿಯಿದ್ದು ಅರ್ಜಿ ಸಲ್ಲಿಸುವ ಅಭ್ಯರ್ತಿಗಳು ಅಯಾ ವಿಷಯಗಳಲ್ಲಿ ಪದವಿ ಮತ್ತು ಬಿ.ಎಡ್ ಹೊಂದಿರಬೇಕು. ಸ್ಟಾಫ್ ನರ್ಸ್ ಹುದ್ದೆಗೆ ಜಿಎನ್‌ಎಂ ನರ್ಸಿಂಗ್ ಪೂರ್ಣಗೊಂಡಿರಬೇಕು ಎಂದು ಯರಮರಸ್ ಸರ್ಕಾರಿ ಅಲ್ಪಸಂಖ್ಯಾತರ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಯರಮರಸ್ ಸರ್ಕಾರಿ ಅಲ್ಪಸಂಖ್ಯಾತರ ಮೂರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ಕನ್ನಡ, ಇಂಗ್ಲಿಷ್, ಎಕನಾಮಿಕ್ಸ್, ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಕಂಪ್ಯೂಟರ್, ಫಿಸಿಕ್ಸ್, ಕೆಮಿಸ್ಟಿ ಬಯಾಲಾಜಿ ಹಾಗೂ ಮೆತಮೆಟಿಕ್ಸ್ ವಿಷಯಗಳಿಗೆ ಅತಿಥಿ ಉಪನ್ಯಾಸಕರ ಹುದ್ದೆ ಖಾಲಿ ಇದ್ದು, ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಯಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ, ಬಿ.ಇಡಿ ಪೂರ್ಣಗೊಂಡಿರಬೇಕು. ಅರ್ಜಿಗಳನ್ನು ಯರಮರಸ್ ಸರ್ಕಾರಿ ಅಲ್ಪಸಂಖ್ಯಾತರ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಜೂ.೪ರೊಳಗಾಗಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಯೇಸಪ್ಪ: ,9035888432 ,9845682370 ಗಂಗಣ್ಣ: 9900494048 ಹಾಗೂ ಅಮರೇಶ: 9663428215ಗೆ ಸಂಪರ್ಕಿಸಬಹುದೆAದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.