ಬಳ್ಳಾರಿ:ಜುಲೈ-28
ಬಿಸಿಲೂರು ಪೋಸ್ಟ್ ದಿನಪತ್ರಿಕೆಯ ಮೂಲಕ ಸಂಪಾದಕರಾಗಿ ಮನೆಗಳಿಗೆ ಮುಟ್ಟಿಸುವ ಕಾರ್ಯ ನಿರ್ವಹಿಸುತ್ತಿರುವ ಅರುಣ್ ಭೂಪಾಲ್ ಅವರ ಮತ್ತೊಂದು ಕನಸು ‘ಹೆಜ್ಜೇನು ಪ್ರಕಾಶನ’
ಪ್ರಕಾಶಕರ ಮೊದಲ ಅರ್ಹತೆಯಾಗಿ ರಸ್ತೆಗಿಳಿದು ಗಣಿನಾಡು ಬಳ್ಳಾರಿ ಗಲ್ಲಿಯಲ್ಲಿ ಪುಸ್ತಕ ಮಾರಾಟದ ಸಾಹಸಕ್ಕೆ ಇಳಿದಿದ್ದು ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದಾರೆ.
ಬಳ್ಳಾರಿಯ ಮಯೂರ ಹೋಟೆಲ್ ಮುಂದೆ ಸಾಹಿತ್ಯಾಸಕ್ತರಾದ ನವೀನ್ ಮತ್ತು ಮಲ್ಲಿನಾನಿಯೊಂದಿಗೆ ಈ ಕಾರ್ಯವನ್ನು ಪ್ರಾರಂಭಿಸಿದ್ದು.
ನಮ್ಮ ಭಾಗದವರು ಬರೆದಂತಹ ಪುಸ್ತಕಗಳನ್ನು ಹೆಜ್ಜೇನು ಪ್ರಕಾಶನ, ಬಳ್ಳಾರಿ ಮನೆಮನೆಗೆ ಮುಟ್ಟಿಸುವ ಪ್ರಯತ್ನದಲ್ಲಿದ್ದಾರೆ.
ಈ ಸಂಧರ್ಭದಲ್ಲಿ ಹೆಜ್ಜೇನು ಪ್ರಕಾಶನದ ಪ್ರಕಾಶಕರಾದ ಅರುಣ್ ಭೂಪಾಲ್ ಅವರು ಮಾತನಾಡಿ ಟಿ.ಎಸ್ ಗೊರವರ್ ಅವರ ಹಸಿರುಟಾವೆಲ್, ಶಿವಲಿಂಗಪ್ಪ ಹಂದ್ಯಾಳ್ ರ ಟಿಫಿನ್ ಬಾಕ್ಸ್, ಅಬ್ದುಲ್ ಕಲಾಂ ಸೇರಿದಂತೆ ನಾಲ್ಕು ಪುಸ್ತಕಗಳನ್ನು ಓದುಗರು ಬಂದು ಕೊಂಡರು. ಜನರ ಉತ್ಸಾಹ ನಮಗೆ ಭರವಸೆಯನ್ನು ಮೂಡಿಸಿದೆ. ನಗರದ ವಿಶೇಷ ಸ್ಥಳಗಳಲ್ಲಿಪ್ರತಿವಾರ ಹೊಸ ಹೊಸ ಲೇಖರರೊಂದಿಗೆ ಈ ಕಾರ್ಯಕ್ರಮ ಜಾರಿಯಲ್ಲಿರುತ್ತದೆ ಎಂದು ಮಾಧ್ಯಮದವರಿಗೆ ತಿಳಿಸಿದರು.
ಸಾಹಿತಿಗಳಾದ
ಶಿವಲಿಂಗಪ್ಪ ಹಂದ್ಯಾಳು, ದಸ್ತಗಿರಿ ದಿನ್ನಿ, ರವೀಂದ್ರ ರಾವಿಹಾಳ್, ಬಿ.ವಿ.ಮಲ್ಲಪ್ಪ
ಹಾಗೂ ನಗರದ ಪ್ರಮುಖ ಸಾಹಿತಿಗಳು,ರಂಗಕರ್ಮಿಗಳು, ಮತ್ತು ಹೋರಾಟಗಾರರು ಬೆಂಬಲಿಸಿದರು.
ಪುಸ್ತಕದ ಪ್ರತಿಗಳಿಗಾಗಿ ಸಂಪರ್ಕಿಸಿ:ಅರುಣ್ ಭೂಪಾಲ್, ಪ್ರಕಾಶಕರು,
ಹೆಜ್ಜೇನು ಪ್ರಕಾಶನ, ಬಳ್ಳಾರಿ
ಮೊ. 8310175176