Ad image

ಹಂಪಿ ಉತ್ಸವ ನಾಡ ಹಬ್ಬಕ್ಕೆ ಚಾಲನೆ ಉತ್ಸವಕ್ಕೆ ಮತ್ತಷ್ಟು ವಿಜೃಂಭಣೆ, ಬರುವ ವರ್ಷವು ಅದ್ಧೂರಿ ಹಂಪಿ ಉತ್ಸವ- ಸಚಿವ ಜಮೀರ್ ಅಹ್ಮದ್ ಖಾನ್

Vijayanagara Vani
ಹಂಪಿ ಉತ್ಸವ ನಾಡ ಹಬ್ಬಕ್ಕೆ ಚಾಲನೆ ಉತ್ಸವಕ್ಕೆ ಮತ್ತಷ್ಟು ವಿಜೃಂಭಣೆ, ಬರುವ ವರ್ಷವು ಅದ್ಧೂರಿ ಹಂಪಿ ಉತ್ಸವ- ಸಚಿವ ಜಮೀರ್ ಅಹ್ಮದ್ ಖಾನ್

ವಿಜಯನಗರ(ಹೊಸಪೇಟೆ) ಫೆಬ್ರವರಿ.28 ಹಂಪಿ ಉತ್ಸವ ವಿಜೃಂಭಣೆಯಿ0ದ ಆಚರಿಸಲಾಗುತ್ತಿದೆ. ಬರುವ ವರ್ಷವು ಈ ಉತ್ಸವ ಇನ್ನೂ ಹೆಚ್ಚಿನ ರೀತಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ವಸತಿ, ವಕ್ಪ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಹೇಳಿದರು.


ಅವರು ಶುಕ್ರವಾರ ಎಂ. ಪಿ. ಪ್ರಕಾಶ್ ವೇದಿಕೆಯಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ. ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ವಿಜಯನಗರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಹಂಪಿ ಉತ್ಸವ- 2025ಕ್ಕೆ ಡೊಳ್ಳು ಭಾರಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಹಂಪಿ ಉತ್ಸವ ನಾಡ ಹಬ್ಬ ಇದ್ದಂತೆ. ಇದನ್ನು ಅಚ್ಚು ಕಟ್ಟಾಗಿ ಮಾಡುವ ಸಂಬoಧ ಕಳೆದ 4 ರಿಂದ 5 ದಿನಗಳಿಂದ ಇಲ್ಲೆ ಇದ್ದೇನೆ. ಎಲ್ಲಾ ಕಡೆ ಮನೆ- ಮನೆಗಳಲ್ಲಿ ಹಂಪಿ ಉತ್ಸವವನ್ನು ಜನರು ವಿಜೃಂಭಣೆಯಿooದ ಆಚರಿಸುತ್ತಿದ್ದಾರೆ. 1987 ಇಸವಿಯಲ್ಲಿ ಎಂ. ಪಿ. ಪ್ರಕಾಶ ಅವರು ಇದಕ್ಕೆ ವಿಶೇಷ ರೀತಿಯಲ್ಲಿ ಚಾಲನೆ ನೀಡಿದರು. ಭಗವಂತನ ಆಶೀರ್ವಾದ ಇದ್ದರೆ ಮುಂದಿನ ವರ್ಷವೂ ಇದನ್ನು ಇನ್ನೂ ಉತ್ತಮವಾಗಿ ಆಚರಣೆ ಮಾಡಲಾಗುವುದು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್. ತಂಗಡಗಿ ಮಾತನಾಡಿ, ಹಂಪಿ ಉತ್ಸವದ ಮೆರಗು ಹೆಚ್ಚಿಸಿದ ಕೀರ್ತಿ ಎಂ.ಪಿ.ಪ್ರಕಾಶ್ ಅವರಿಗೆ ಸಲ್ಲುತ್ತದೆ. ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಹೆಚ್ಚು ಗೌರವ ನೀಡುತ್ತಿದ್ದ, ಅವರು ಹಂಪಿ ಉತ್ಸವ ಆಚರಣೆಯನ್ನು ನಿರಂತರವಾಗಿ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಈ ಹಿಂದೆ ವಾರ್ತಾ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಸಹಭಾಗಿತ್ವದಲ್ಲಿ ಮೊದಲ ಬಾರಿಗೆ ಕಮಲ್ ಮಹಲ್ ಬಳಿ ಕಾರ್ಯಕ್ರಮ ಆಯೋಜಿಸಿ ಮುನ್ನುಡಿ ಹಾಕಿತ್ತು. ಈ ಭಾಗದಲ್ಲಿ ಕಲೆ ಮತ್ತು ಸಾಂಸ್ಕೃತಿಕ ಉತ್ತೇಜನ ನೀಡಿದವರ ಸ್ಮರಣೆ ಇಂದಿಗೂ ಮರೆಯಲು ಸಾಧ್ಯವಿಲ್ಲ. ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ಹಂಪಿ ಉತ್ಸವದ ಮಾದರಿಯಿಂದ ಈ ಭಾಗದಲ್ಲಿ ಅನೆಗೊಂದಿ ಉತ್ಸವ ಮತ್ತು ಕನಕಗಿರಿ ಉತ್ಸವ ಅಯೋಜಿಸಿ ವಿಜಯನಗರ ಸಾಮ್ರಾಜ್ಯದ ವಿಶೇಷತೆ ಬಿಂಬಿಸಲಾಗಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಜಯನಗರ ಕ್ಷೇತ್ರದ ಶಾಸಕರಾದ ಹೆಚ್. ಆರ್. ಗವಿಯಪ್ಪ ಮಾತನಾಡಿ, ಹಂಪಿ ಉತ್ಸವ ವರ್ಷದಿಂದ ವರ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದಕ್ಕೆ ಜಿಲ್ಲೆಯ ಸಚಿವರು ಹೆಚ್ಚು ಅನುದಾನವನ್ನು ನೀಡಿ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿ ಈ ವರ್ಷ ಮಾಡಿದ್ದಾರೆ. ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅದರ ಜೊತೆಗೆ ಇದರ ಯಶಸ್ವಿಗಾಗಿ ಶ್ರಮಿಸುತ್ತಿರುವ ಎಲ್ಲಾ ಅಧಿಕಾರಿಗಳಿಗೂ ಶುಭ ಕೋರಿದರು.


ಚಿತ್ರನಟ ರಮೇಶ್ ಅರವಿಂದ್ ಮಾತನಾಡಿ, ಅಂದು ಇಂದು ಎಂದೆoದಿಗೂ ಕನ್ನಡಿಗರು ಶ್ರೇಷ್ಠರು. ಹಂಪಿಯAತಹ ಸುಂದರ ತಾಣ ಮತ್ತೊಂದಿಲ್ಲ. ಇದನ್ನು ನೋಡಲು ಸಾವಿರ ಕಣ್ಣು ಬೇಕು. ಇದೇ ಜಾಗದ ರಸ್ತೆಯಲ್ಲಿ ಚಿನ್ನ, ವಜ್ರ, ವೈಡೋರ್ಯಗಳನ್ನು ಮಾರುತ್ತಿದ್ದರು. ಕಲ್ಲಿನ ಸ್ತಂಭಗಳಲ್ಲಿ ಸಂಗೀತ ಕೇಳುತ್ತಿದೆ. 500 ವರ್ಷಗಳಿಂದ ಇರುವ ವಾಹನ ಹಂಪಿಯ ಕಲ್ಲಿನ ರಥ ಅದ್ಭುತ ಎಂದರು.
ಚಿತ್ರನಟಿಯರಾದ ಪ್ರೇಮ ಹಾಗೂ ಪೂಜಾ ಗಾಂಧಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದರಾದ ಈ ತುಕಾರಾಮ್, ಹಗರಿ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಕೆ. ನೇಮಿರಾಜ ನಾಯ್ಕ, ಹಡಗಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೃಷ್ಣನಾಯಕ, ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಎನ್.ಟಿ. ಶ್ರೀನಿವಾಸ, ಹರಪನಹಳ್ಳಿ ಕ್ಷೇತ್ರದ ಶಾಸಕಿ ಲತಾ ಮಲ್ಲಿಕಾರ್ಜುನ, ಕೊಪ್ಪಳ ಸಂಸದರಾದ ರಾಜಶೇಖರ ಹಿಟ್ನಾಳ, ರಾಜವಂಶಸ್ಥರಾದ ಕೃಷ್ಣದೇವರಾಯ ಆನೆಗೊಂದಿ. ದಯಾನಂದಪೂರಿ ಮಹಾಸ್ವಾಮಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೆಶಕರಾದ ಡಾ. ಕೆ. ಧರಣಿದೇವಿ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್. ಸಿಇಓ ನೋಗ್ಜಾಯ್ ಮೋಹ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್ ಜಿಲ್ಲೆಯ ನಾಗರಿಕರು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.

Share This Article
error: Content is protected !!
";