ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿನ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ತಹಸೀಲ್ದಾರ್ ಹಾಗೂ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಗದೀಶ್ ಚೌರ್ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ ಭಕ್ತರು ಬಿಟ್ಟಿರುವ ಹತ್ತಕ್ಕೂ ಹೆಚ್ಚು ದನ,ಹೋರಿ,ಎತ್ತುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿರುವುದಾಗಿ ಅನೇಕ ದೂರುಗಳು ಬಂದಿದ್ದು ಭಕ್ತರು ಹರಕೆ ರೂಪದಲ್ಲಿ ದೇವಸ್ಥಾನಕ್ಕೆ ನೀಡು ದನ,ಕರು,ಹೋರಿಗಳನ್ನು ದಾಖಲಿಸಿಕೊಂಡು ಅವುಗಳನ್ನು ಸಂರಕ್ಷಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಈ ಸಮಾಸ್ಯೆಯನ್ನು ಪರಿಹಾರಿಸಲು ಗೋಶಾಲೆ ವ್ಯವಸ್ಥೆಯನ್ನು ಮಾಡಲಾಗುವುದು ರಾಜ್ಯದಲ್ಲಿ ಅತ್ಯಂತ ಪ್ರಸಿದ್ದ ಪುಣ್ಯ ಕ್ಷೇತ್ರವಾಗಿದ್ದು ದೇವಸ್ಥಾನದ ಆಡಳಿತ ಮಡಳಿಯ ಅಧ್ಯಕ್ಷರ ಗಮನಕ್ಕೆ ಬರದಂತೆ ಯಾವುದೆ ವ್ಯವಹಾರಗಳನ್ನು ಮಾಡಬಾರದು ದೇವಸ್ಥಾನದ ಅಭಿವೃದ್ದಿಗೆ ದೇವಸ್ಥಾನದ ಅರ್ಚಕರು, ಗ್ರಾಮಸ್ಥಾರು, ಸಹಕಾರ ನೀಡಬೇಕು ಎಂದು ತಿಳಿಸಿದರು.
ಗ್ರಾಮದ ಮುಖಂಡರಾದ ಜೆಲ್ಲಿ ನಾಗರಾಜನಾಯಕ್ ಮಾತನಾಡಿ ಪ್ರತಿ ವರ್ಷ ಜಾತ್ರೆ ಸಮಯದಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ವಿವಿಧ ರಾಜ್ಯಗಳಿಂದ ಬರುವ ಭಕ್ತರು ದೇವಿಗೆ ಹರಕೆ ಹೊತ್ತು ದೇವಸ್ಥಾನಕ್ಕೆ ಹೋರಿ,ದನಕರುಗಳನ್ನು ಬಿಡುತ್ತಿದ್ದಾರೆ. ಕೇಲವರು ಇಂತಹ ದನಗಳನ್ನು ಹೋರಿಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುತ್ತಿದ್ದಾರೆ. ಕಸಾಯಿಖಾನೆಯವರು ಹೋರಿಗಳನ್ನು ಸಾಯಿಸಿ ಮಾಂಸವನ್ನು ಮಾರಾಟಮಾಡುತ್ತಿರುವುದರಿಂದ ಭಕ್ತರ ಭಾವನೆಗಳಿಗೆ ದಕ್ಕೆಯುಂಟಾಗುತ್ತಿದೆ ಎಂದು ಅರೋಪಿಸಿದರು.
ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥಾರು ಇದ್ದರು.
ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿನ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರು ಹರಕೆ ರೂಪದಲ್ಲಿ ಬಿಟ್ಟಿರುವ ಹೋರಿಯನ್ನು ತಹಸೀಲ್ದಾರ್ ಜಗದೀಶ್ ಚೌರ್ ಪರಿಶೀಲಿಸುತ್ತಿರುವುದು.