Ad image

ಆ.13 ರಿಂದ ಮೂರು ದಿನಗಳ ಕಾಲ ಧ್ವಜ ಹಾರಿಸಲು ಕರೆ ದೇಶಭಕ್ತಿಯ ಪ್ರತೀಕ ಹರ್‌ಘರ್ ತಿರಂಗಾ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ

Vijayanagara Vani
ಆ.13 ರಿಂದ ಮೂರು ದಿನಗಳ ಕಾಲ ಧ್ವಜ ಹಾರಿಸಲು ಕರೆ ದೇಶಭಕ್ತಿಯ ಪ್ರತೀಕ ಹರ್‌ಘರ್ ತಿರಂಗಾ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ
ಬಳ್ಳಾರಿ,ಆ.09
ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿ ಮನೆ-ಮನೆ ಮೇಲೂ ರಾಷ್ಟçಧ್ವಜವನ್ನು ಹಾರಿಸುವ ಮೂಲಕ ಹರ್‌ಘರ್ ತಿರಂಗಾ ಅಭಿಯಾನವನ್ನು ಯಶಶ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ.ಆಜಯ್ ನಾಗಭೂಷಣ್‌ರಾವ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದ ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿ ನಿರ್ದೇಶನ ನೀಡಿದರು.
ರಾಷ್ಟçಧ್ವಜ ನಮ್ಮ ದೇಶದ ಹೆಮ್ಮೆ. ಪ್ರತಿಯೊಬ್ಬ ನಾಗರೀಕನೂ ರಾಷ್ಟçಧ್ವಜಕ್ಕೆ ಗೌರವಿಸುವ ಕೆಲಸವಾಗಬೇಕು. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ಹರ್ ಘರ್ ತಿರಂಗಾ ಅಭಿಯಾನವನ್ನು ಆ.13 ರಿಂದ ಆ.15 ರ ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿಯೂ ಜಿಲ್ಲೆಯಾದ್ಯಂತ ಈ ಅಭಿಯಾನ ಯಶಸ್ವಿಯಾಗಿತ್ತು. ಈ ಬಾರಿಯೂ ಹರ್‌ಘರ್ ತಿರಂಗಾ ಅಭಿಯಾನ ಮುಂದುವರಿದಿದೆ. ಪ್ರತಿಯೊಬ್ಬರಲ್ಲೂ ದೇಶಭಕ್ತಿ, ದೇಶಾಭಿಮಾನವನ್ನು ಮೂಡಿಸುವ ಈ ಅಭಿಯಾನವನ್ನು ಎಲ್ಲರೂ ಸಮರ್ಥವಾಗಿ ನಿರ್ವಹಿಸಬೇಕು. ಇದರನ್ವಯ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ತಮ್ಮ ಮನೆಗಳ ಮೇಲೆ ರಾಷ್ಟçಧ್ವಜವನ್ನು ಸಂಜೆ ಸೂರ್ಯಾಸ್ತದವರೆಗೆ ನಿರಂತರವಾಗಿ ಧ್ವಜ ಹಾರಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಹೇಳಿದರು.
ಹರ್ ಘರ್ ತಿರಂಗಾ ಅಭಿಯಾನದ ನಿಮಿತ್ತ ಜಿಲ್ಲಾ ಕೇಂದ್ರದಲ್ಲಿ ವೈವಿಧ್ಯಮ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ಮೂಲಕ ರಾಷ್ಟçಧ್ವಜದ ಗೌರವ ಮತ್ತು ಅದರ ಮೌಲ್ಯಗಳನ್ನು ಗಟ್ಟಿಗೊಳಿಸಿ ದೇಶಭಕ್ತಿಯ ಭಾವವನ್ನು ಮೂಡಿಸಲು ಪ್ರೇರೆಪಿಸುತ್ತದೆ.
ಜಿಲ್ಲೆಯಲ್ಲಿ ಎಲ್ಲಾ ಸಾರ್ವಜನಿಕರು ಮತ್ತು ತಮ್ಮ ನೆರೆಹೊರೆಯವರು ಕೂಡ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸಬೇಕು. ಹಾಗಾಗಿ ಆ.13 ರಿಂದ 15 ರ ವರೆಗೆ ತಮ್ಮ ಮನೆಗಳ ಮೇಲೆ ಸ್ವಯಂ ಪ್ರೇರಿತರಾಗಿ ಧ್ವಜ ಹಾರಿಸಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.
*ಹರ್ ಘರ್ ತಿರಂಗ ಅಭಿಯಾನದ ಉದ್ದೇಶ:*
ನಾಗರಿಕರು ತಮ್ಮ ಮನೆಗಳ ಮೇಲೆ ರಾಷ್ಟçಧ್ವಜವನ್ನು ಹಾರಿಸುವಂತೆ ಉತ್ತೇಜಿಸಲು ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ, ಹರ್ ಘರ್ ತಿರಂಗ ಅಭಿಯಾನವನ್ನು ಆರಂಭಿಸಲಾಗಿದ್ದು, ಇದರ ಉದ್ದೇಶವು ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ತುಂಬುವುದು ಮತ್ತು ರಾಷ್ಟ ನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸಿದವರ ಕೊಡುಗೆಯನ್ನು ಸ್ಮರಿಸುವುದಾಗಿದೆ. ಹಾಗಾಗಿ ಆಗಸ್ಟ್ 13 ರಿಂದ 15 ರವರೆಗೆ ಪ್ರತಿಯೊಬ್ಬರ ಮನೆಗಳಲ್ಲಿ ತಿರಂಗವನ್ನು ಹಾರಿಸುವಂತೆ ಕೋರಲಾಗಿದೆ.
ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸಿದ ಸಾರ್ವಜನಿಕರು ತಮ್ಮ ಸೆಲ್ಫಿಗಳನ್ನು https://hargartiranga.com ನಲ್ಲಿ ಹಂಚಿಕೊಳ್ಳಬಹುದು.
*ಧ್ವಜಾರೋಹಣ ಮಾಡಲು ಪಾಲಿಸಬೇಕಾದ ನಿಯಮಗಳು:*
ಭಾರತದ ಧ್ವಜ ಸಂಹಿತೆಯು ರಾಷ್ಟಿಯ ಧ್ವಜವು ಆಯತಾಕಾರವಾಗಿರಬೇಕು, ಉದ್ದ ಮತ್ತು ಎತ್ತರದ ನಿಗದಿತ ಅನುಪಾತದಲ್ಲಿರಬೇಕು. ಧ್ವಜವನ್ನು ಯಾವುದೇ ರೀತಿಯ ಅಲಂಕಾರ ಉದ್ದೇಶಗಳಿಗಾಗಿ ಬಳಸಬಾರದು.
ತ್ರಿವರ್ಣ ಧ್ವಜಕ್ಕೆ ತನ್ನದೇ ಆದ ಗೌರವ, ಘನತೆ ಇರುತ್ತದೆ. ಮನೆಯಲ್ಲಿ ರಾಷ್ಟçಧ್ವಜವನ್ನು ಹಾರಿಸುವಾಗ ಮನೆಯ ಮೇಲಿನ ಅತೀ ಎತ್ತರದ ಜಾಗದಲ್ಲಿ ಮಾಡಬೇಕು. ಧ್ವಜ ಸ್ಥಂಭ ಮತ್ತು ಧ್ವಜ ನೆರವಾಗಿರಬೇಕು. ಅದು ಎಡಕ್ಕೆ, ಬಲಕ್ಕೆ, ಹಿಂದಕ್ಕೆ, ಮುಂದಕ್ಕೆ ವಾಲಿರಬಾರದು. ತ್ರಿವರ್ಣ ಧ್ವಜಕ್ಕಿಂತ ಎತ್ತರವಾಗಿ, ಸಮಾನವಾಗಿ ಹಾಗೂ ಧ್ವಜದ ಬಲಗಡೆ ಯಾವುದೇ ಧ್ವಜ ಇರಬಾರದು. ಗಲಿಜಾದ ಮತ್ತು ಹರಿದ ಧ್ವಜವನ್ನು ಬಳಸಬಾರದು. ಕೇಸರಿ ಬಣ್ಣ ಮೇಲೆ ಇರುವಂತೆ ಧ್ವಜಾರೋಹಣ ಮಾಡಬೇಕು.
ಸಂವಿಧಾನವನ್ನು ಪಾಲಿಸುವುದು ಮತ್ತು ಅದರ ಆದರ್ಶಗಳು ಮತ್ತು ಸಂಸ್ಥೆಗಳು, ರಾಷ್ಟçಧ್ವಜ ಮತ್ತು ರಾಷ್ಟçಗೀತೆಯನ್ನು ಗೌರವಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.
ಈ ಎಲ್ಲಾ ಅಂಶಗಳನ್ನು ಎಲ್ಲಾರೂ ಕಟ್ಟುನಿಟ್ಟಾಗಿ ಪಾಲನೆ ಮಾಡಿ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
*ಜಿಲ್ಲಾ ಮಟ್ಟದಲ್ಲಿ ವೈವಿಧ್ಯಮ ಕಾರ್ಯಕ್ರಮ ಆಯೋಜನೆ:*
ಹರ್ ಘರ್ ತಿರಂಗಾ ಅಭಿಯಾನ ನಿಮಿತ್ತ ಜಿಲ್ಲಾ ಕೇಂದ್ರದಲ್ಲಿ ಆ.12 ಮತ್ತು 13 ರಂದು ವೈವಿಧ್ಯಮ ಕಾರ್ಯಕ್ರಮ ಆಯೋಜಿಸಿದೆ. ಆ.12 ರಂದು ಸಂಜೆ 06.30 ಗಂಟೆಗೆ ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದ ನಾಡೋಜ ಸುಭದ್ರಮ್ಮ ಮನ್ಸೂರ್ ಬಯಲು ರಂಗಮ0ದಿರದಲ್ಲಿ ದೇಶಪ್ರೇಮ ಬಿಂಬಿಸುವ ತಿಂಗಳ ಸೊಬಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಆ.13 ರಂದು ಬೆಳಿಗ್ಗೆ 06.30 ಗಂಟೆಗೆ ಬಳ್ಳಾರಿ ನಗರದ ಐತಿಹಾಸಿಕ ಬೆಟ್ಟ (ಕೋಟೆ) ಮೇಲೆ ಧ್ವಜಾರೋಹಣಾ ನೆರವೇರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾರ್ವಜನಿಕರು ಭಾಗವಹಿಸಬಹುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
Share This Article
error: Content is protected !!
";