ಹಾವೇರಿ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನ

Vijayanagara Vani
ಹಾವೇರಿ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನ

ಇದೇ ತಿಂಗಳು ೧೦ ಜನವರಿ ೨೦೨೫ರಂದು. ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕ ಹಿರೇಕೆರೂರು ಹಾಗೂ ರಟ್ಟೀಹಳ್ಳಿ ಸಹಯೋಗದಲ್ಲಿ ನಡೆಯುತ್ತಿರುವ ೧೪ನೇ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಸಂಸ್ಕೃತಿಗಳ ಅನಾವರಣ. ಜೊತೆಗೆ ನನ್ನ ೪ನೇ ಕೃತಿ “ಕರುಳ ಬಳ್ಳಿ” ಕವನ ಸಂಕಲನ, ಮಾನ್ಯ ಸಲೀಂ ಅಹಮದ್. “ಮುಖ್ಯ ಸಚೇತಕರು” ವಿಧಾನ ಪರಿಷತ್. ಬೆಂಗಳೂರು. ಇವರ ಅಮೃತಹಸ್ತದಿಂದ ಲೋಕಾರ್ಪಣೆಗೊಳ್ಳುತ್ತಿದ್ದು, ಎಲ್ಲ ಬಂಧು-ಬಾಂಧವರು. ಸಮಾಜ ಭಾಂದವರು. ಸ್ನೇಹಿತರು. ಕಾರ್ಯಕ್ರಮಕ್ಕೆ ಕುಟುಂಬ ಪರಿವಾರ ಸಮೇತ ಬಂದು ಹಾರೈಸಿ.

- Advertisement -
Ad imageAd image

ಕನ್ನಡ ವೈಭೋಗದ ಕಾರ್ಯಕ್ರಮವನ್ನ ವೀಕ್ಷಿಸಿ. ರುಚಿ-ರುಚಿಯಾದ ಉತ್ತರ ಕರ್ನಾಟಕ ಶೈಲಿಯ ಊಟವನ್ನ ಸವಿದು, ೧೧/೦೧/೨೦೨೫ರ, ಮಾರನೇ ದಿನ ಕವಿಗೋಷ್ಠಿಯಲ್ಲಿ ನನ್ನ ಸ್ವ-ರಚಿತ ಕವನವನ್ನ ಆಲಿಸಿ ಸಾಹಿತಿಗಳನ್ನ ಪ್ರೋತ್ಸಾಹಿಸಿ. ಎರಡೂ ದಿನ ಸಾಯಂಕಾಲ ನಡೆಯುವ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ವಿನಂತಿಸಿಕೊಳ್ಳುತ್ತೇನೆ.. 

ಸುರೇಶ ಮಲ್ಲಾಡದ..
ಪ್ರ. ತಾಂತ್ರಿಕ ಅಧಿಕಾರಿಗಳು..
ಸ. ಆ. ಕೇಂದ್ರ. ಮಾಸೂರು.
ಸಾಹಿತಿಗಳು. ವಚನಕಾರರು.
ರಟ್ಟೀಹಳ್ಳಿ.. ಹಾವೇರಿ..
ಜಂ. ವಾಣಿ. ೯೪೪೮೭೪೬೬೬೦.

Share This Article
error: Content is protected !!
";