ಬಳ್ಳಾರಿ,ಡಿ.02
ಟರ್ಕಿ ದೇಶದ ರಾಯಭಾರಿ ಹೆ.ಇ ಫಿರಟ್ ಸುನೆಲ್ ಅವರು, ನಗರದ ಕೊಳಗಲ್ ರಸ್ತೆಯ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಟರ್ಕಿಯ ಹುತಾತ್ಮರ ಸ್ಮಶಾನಕ್ಕೆ ಭಾನುವಾರ ಭೇಟಿ ನೀಡಿದರು.
ಇದೇ ವೇಳೆ ಟರ್ಕಿ ದೇಶದ ಮಹಾನೀಯರ ಸಮಾಧಿಗಳಿಗೆ ಗೌರವ ಸಲ್ಲಿಸಿ, ಸಸಿ ನೆಟ್ಟರು. ಸಮಾಧಿ ಸ್ಥಳದಲ್ಲಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಕುರಿತು ಮಾಹಿತಿ ಪಡೆದ ನಂತರ ವಿಮ್ಸ್ ಸ್ಮಾರಕ ಸಮರ ನೌಕೆಗೆ ಭೇಟಿ ಕೊಟ್ಟರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ಎಸ್ ತಳಕೇರಿ, ಸಿಬ್ಬಂದಿಗಳಾದ ಶ್ರೀಹರಿ ಮಾಸನೂರು, ಪ್ರವಾಸಿ ಮಾರ್ಗದರ್ಶಿಯಾದ ವಿರೂಪಾಕ್ಷಿ.ವಿ ಹಂಪಿ ಹಾಗೂ ಟರ್ಕೀಶ್ ಮಾಟ್ರೆöಸ್ ಸಿಮೆಟೆರಿ ಉಸ್ತುವಾರಿ ಇಬ್ರಾಹಿಂ ಸೇರಿದಂತೆ ಇತರರು ಇದ್ದರು.