Ad image

ಎಪಿಎಂಸಿ ಯಾರ್ಡ ರೈತಭವನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.

Vijayanagara Vani
ಎಪಿಎಂಸಿ ಯಾರ್ಡ ರೈತಭವನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.

ಎಪಿಎಂಸಿ ಯಾರ್ಡ ರೈತಭವನದ ಆವರಣದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ‘’ವಿಶ್ವ ಪರಿಸರ ದಿನಾಚರಣೆ-2024’’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

- Advertisement -
Ad imageAd image

ಈ ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಸಂದೀಪ್ ಕುಮಾರ ಸೂರ್ಯವಂಶಿ ಐಎಫ್‌ಎಸ್, ಡಿಎಫ್‌ಓ, ಅರಣ್ಯ ಇಲಾಖೆ, ಬಳ್ಳಾರಿ., ಮಹಮ್ಮದ್ ಫಯಾಜ್ ಉದ್ದೀನ್ ಎಸಿಎಫ್, ಅರಣ್ಯ ಇಲಾಖೆ,  ವಿನಯಕುಮಾರ ಕೆ.ಸಿ. ಆರ್‌ಎಫ್ ಅರಣ್ಯ ಇಲಾಖೆ,  ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಂದAತಹ ಮುಖ್ಯ ಅತಿಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಬಿ.ಮಹಾರುದ್ರ ಗೌಡ ಸ್ವಾಗತಿಸಿ ಮಾತನಾಡುತ್ತಾ, ಪರಿಸರ ಕಾಳಜಿಯ ಜೊತೆಗೆ ಜನರಿಗೆ ಪರಿಸರದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 1974 ರಿಂದ ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಸಂದೀಪ್ ಕುಮಾರ ಸೂರ್ಯವಂಶಿ ಐಎಫ್‌ಎಸ್, ಡಿಎಫ್‌ಓ, ಅರಣ್ಯ ಇಲಾಖೆ, ಸಂಸ್ಥೆಯ ಅಧ್ಯಕ್ಷರಾದ ಬಿ.ಮಹಾರುದ್ರಗೌಡ, ಹಿರಿಯ ಉಪಾಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ, ಕೆ.ಸಿ.ಸುರೇಶಬಾಬು, ಗೌರವಕಾರ್ಯದರ್ಶಿಗಳು, ವೇದಿಕೆ ಮೇಲಿರುವ ಗಣ್ಯಮಾನ್ಯರು ಸೇರಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಟಾಟಿಸಿದರು.

ಹಿರಿಯ ಉಪಾಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ ರವರು ಮಾತನಾಡುತ್ತಾ, ಪರಿಸರದ ಬಗ್ಗೆ ಕಾಳಜಿ ವಹಿಸದೆ ಹೋದರೆ ಈಗಿನ ಪರಿಸ್ಥಿತಿಯಲ್ಲಿ ನೀರನ್ನು ಹಣಕೊಟ್ಟು ಖರೀದಿ ಮಾಡುತ್ತೀದ್ದೇವೆ, ಮುಂದಿನ ದಿನಗಳಲ್ಲಿ ಗಾಳಿಯನ್ನು ಕೂಡ ಹಣ ಕೊಟ್ಟು ಖರೀದಿ ಮಾಡುವ ಪರಿಸ್ಥಿತಿ ಬರಬಹುದು ಆದಕಾರಣ ಎಲ್ಲಾ ನಾಗರೀಕರು ಇದರ ಬಗ್ಗೆ ಕಾಳಜಿ ವಹಿಸಿ ಪರಿಸರವನ್ನು ಕಾಪಾಡೋಣ ಮರಗಳನ್ನು ನೆಟ್ಟು ಉತ್ತಮ ಪರಿಸರವನ್ನು ಕಾಪಾಡೋಣ ಎಂದರು., ಹಾಗೆ ಇಲಾಖೆಯವರಿಗೆ ಮನವಿ ಮಾಡುವದು ಏನೆಂದರೆ,  ಎಲ್ಲಿ ಮರಗಳನ್ನು ನೆಡುವ ಅವಶ್ಯಕತೆ ಇದೆ ಅಲ್ಲಿ ತಾವುಗಳು ಮರಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಿ ಎಂದು ಮನವಿ ಮಾಡಿದರು.

ಸಂದೀಪ್ ಕುಮಾರ ಸೂರ್ಯವಂಶಿ ಐಎಫ್‌ಎಸ್, ಡಿಎಫ್‌ಓ, ಇವರು ಮಾತನಾಡುತ್ತಾ, ಪ್ರತಿ ವಿಶ್ವ ಪರಿಸರ ದಿನಾಚರಣೆಯೊಂದು ಸುಮಾರು 1000 ಮರಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಇಲಾಖೆಯಲ್ಲಿ ಬರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಲಹೆ ಮಾರ್ಗದರ್ಶನ ತೆಗೆದುಕೊಂಡು ಮರಗಳನ್ನು ನೆಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮಹಮ್ಮದ್ ಫಯಾಜ್ ಉದ್ದೀನ್, ಎ.ಸಿ.ಎಫ್, ವಿನಯಕುಮಾರ, ಆರ್ ಎಫ್, ಅರಣ್ಯ ಇಲಾಖೆ, ಬಳ್ಳಾರಿ., ವಿ.ರಾಮಚಂದ್ರ, ಅಧ್ಯಕ್ಷರು, ಬಳ್ಳಾರಿ ಜಿಲ್ಲಾ ಇಂಡಸ್ಟಿçÃಯಲ್ ಅಸೋಸಿಯೇ಼ಷನ್, ಬಳ್ಳಾರಿ, ಚಿದಾನಂದಪ್ಪ, ಅಧ್ಯಕ್ಷರು, ದಲ್ಲಾಲಿ ವರ್ತಕರ ಸಂಘ, ಬಳ್ಳಾರಿ, ಗುರುಸ್ವಾಮಿ ಕಾರ್ಯದರ್ಶಿ, ದಲ್ಲಾಲಿ ವರ್ತಕರ ಸಂಘ, ಬಳ್ಳಾರಿ, ಸಂಸ್ಥೆಯ ಉಪಾಧ್ಯಕ್ಷರಗಳಾದ ಅವ್ವಾರು ಮಂಜುನಾಥ, ಎಸ್.ದೊಡ್ಡನಗೌಡ, ಸೊಂತ್ ಗಿರಿಧರ, ಜಂಟಿಕಾರ್ಯದರ್ಶಿಗಳಾದ ಡಾ.ಮರ್ಚೇಡು ಮಲ್ಲಿಕಾರ್ಜುನಗೌಡ, ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ವಿಶೇ಼ಷ ಸಮನ್ವಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Share This Article
error: Content is protected !!
";