ಪಟ್ಟಣದ ತಾಲೂಕು ಕಛೇರಿಗೆ ತೆರಳಿ ಖಾಸಗಿ ಸಂಸ್ಥೆಗಳ ಡೋನೇಷನ್ ವಿರುದ್ದ ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟಿಸಿದರು.

Vijayanagara Vani
ಪಟ್ಟಣದ ತಾಲೂಕು ಕಛೇರಿಗೆ ತೆರಳಿ ಖಾಸಗಿ ಸಂಸ್ಥೆಗಳ ಡೋನೇಷನ್ ವಿರುದ್ದ ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟಿಸಿದರು.

ಹರಪನಹಳ್ಳಿ ;- ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ನಿಯಂತ್ರಿಸಲು ಆಗ್ರಹಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್.ಎಸ್.ಯು.ಐ) ತಾಲೂಕು ಸಮಿತಿ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ನಟರಾಜ್ ಅವರಿಗೆ ಮನವಿ ಸಲ್ಲಿಸಿದರು.

 ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಪಾಧ್ಯಕ್ಷ ಎಂ.ಡಿ.ಶ್ರೀಕಾAಯಾದವ್ ಮಾತನಾಡಿ, ತಾಲ್ಲೂಕಿನ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಯುಕೆಜಿ, ಎಲ್‌ಕೆಜಿ ಹಾಗೂ ಪಿಯುಸಿ ತರಗತಿ ವಿಧ್ಯಾರ್ಥಿಗಳಿಂದ ೧೦ ಸಾವಿರ ರೂ. ನಿಂದ ೩೫ಸಾವಿರ ರೂ. ವರೆಗೆ ಪಾಲಕರ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಕಾನೂನು ಉಲ್ಲಂಘಸಿ ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಡೋನೇಷನ್ ಅಕ್ರಮವಾಗಿ ವಸೂಲಿ ಮಾಡುತ್ತಿರುವುದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ನೋಡಿಯೂ ಕಣ್ಣು ಮುಚ್ಚಿ ಕುಳಿತ್ತಿದೆ ಎಂದು ಆಗ್ರಹಿಸಿದರು.

ತಾಲ್ಲೂಕು ಅಧ್ಯಕ್ಷ ಹೆಚ್.ಅಬುಸಾಲೇಹ ಮಾತನಾಡಿ, ಪ್ರತಿಯೊಂದು ಜಿಲ್ಲೆ ಮತ್ತು ತಾಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ನಿಯಂತ್ರಣಕ್ಕಾಗಿ ಡಿ.ಇ.ಆರ್.ಕಮಿಟಿ ಡೊನೇಷನ್ ನಿಯಂತ್ರಣ ಸಮಿತಿಗಳು ಅಸ್ತಿತ್ವದಲ್ಲಿರಬೇಕು. ಸಮಿತಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿ ಸಂಘಟಗಳು ಪೋಷಕರ ಸಂಘಟನೆಗಳು ಸದಸ್ಯರಾಗಿರಬೇಕು ಎಂದರು.

ವೆಂಕಟೇಶ್ ನಾಯಕ್ ಮಾತನಾಡಿ, ಎಲ್ಲಾ ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿಗಳನ್ನು ವಿದ್ಯಾರ್ಥಿ ಸಂಘಟನೆಗಳನ್ನು ಶಿಕ್ಷಣ ತಜ್ಞರನ್ನು ಕರೆದು ಡೊನೇಶನ್ ಹಾವಳಿ ನಿಯಂತ್ರಿಸಬೇಕು. ಮತ್ತು ಪ್ರತಿಯೊಂದು ಖಾಸಗಿ ಶಿಕ್ಷಣ ಸಂಸ್ಥೆಯು ತಾವು ಎಷ್ಟು ಶುಲ್ಕವನ್ನು ವಸೂಲಿ ಮಾಡಬೇಕೆಂದು ಸರಕಾರದಿಂದ ಅನುಮತಿ ಪಡೆಯಲಾದ ಶುಲ್ಕವನ್ನು ಪ್ರತಿಯೊಂದು ಶಿಕ್ಷಣ ಸಂಸ್ಥೆ ಮುಂದೆ ದೊಡ್ಡ ಅಕ್ಷರಗಳಲ್ಲಿ ಪ್ಲೆಕ್ಸ್ ಗಳಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ  ಫಲಕಗಳನ್ನು ಅಳವಡಿಸಬೇಕು. ಅದರೆ ತಾಲೂಕಿನಲ್ಲಿ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆ ಕಾನೂನನ್ನು ಜಾರಿಗೊಳಿಸುತ್ತಿಲ್ಲ ಎಂದು ದೂರಿದರು.

ನಾಮಫಲಕ ಅಳವಡಿಸಬೇಕು ;- ಖಾಸಗಿ ಶಾಲೆಗಳಲ್ಲಿ ಖಾಲಿ ಇರುವ ಸೀಟು ಹಾಗೂ ಪಡೆಯುತ್ತಿರುವ ಶುಲ್ಕದ ಮಾಹಿತಿಯನ್ನು ಸೂಚನಾ ಫಲಕದಲ್ಲಿ ಹಾಗೂ ಫ್ಲೆಕ್ಸ್ ಮೂಲಕ ಪ್ರಕಟಿಸಬೇಕು. ಶುಲ್ಕದ ಫಲಕವನ್ನ ಹಾಕದೆ ಇರುವಂತಹ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆಯನ್ನು ರದ್ದುಗೊಳಿಸಿ ತಾಲೂಕಿನಲ್ಲಿ ಡೊನೇಷನ್ ಹಾವಳಿಯನ್ನು ನಿಯಂತ್ರಿಸಬೇಕೆAದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್.ಎಸ್.ಯು.ಐ)ಆಗ್ರಹ ಮಾಡುತ್ತದೆ. ಒಂದು ಪಕ್ಷ ಡೊನೇಶನ್ ಹಾವಳಿಯನ್ನು ನಿಯಂತ್ರಿಸದಿದ್ದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವಿರುದ್ಧ ಹೋರಾಟವನ್ನ ಹಮ್ಮಿಕೊಳ್ಳಲಾಗುವುದು ಎಚ್ಚರಿಸಿದರು.

ಸಂದರ್ಭದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸಿಂ ಡೆಂಕಿ, ಅಜಾದ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಾಜಿ,  ತಾಲ್ಲೂಕು ಕಾರ್ಯದರ್ಶಿ ಒ.ಮುಶ್ರಫ್ ಅಲಿ, ರೇವಣ್ಣ ನಾಯ್ಕ್, ಮಂಜು, ಸಮೀರ್, ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article
error: Content is protected !!