ಸಿರುಗುಪ್ಪ : ಜೂ 23 ತಾಲೂಕಿನ ತೆಕ್ಕಲಕೋಟೆ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಉಚಿತ ಅರೋಗ್ಯ ಶಿಬಿರ ಕಾರ್ಯಕ್ರಮವನ್ನು ನಡೆಸಲಾಯಿತು.
ಕರ್ನಾಟಕ ಸರ್ಕಾರದ 5%ಅನುದಾನ ಯೋಜನೆ ಅಡಿಯಲ್ಲಿ ಪಟ್ಟಣಪಂಚಾಯತಿ ಕಾರ್ಯಾಲಯ ಮತ್ತು ಸಮುದಾಯ ಅರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ವಿಕಲ ಚೇತನರಿಗೆ ಉಚಿತ ಅರೋಗ್ಯ ತಪಾಸಣೆ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಪ್ರಾರಂಬಿಸಲಾಯಿತು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ, ಸುನಿಲ್ ಕುಮಾರ್ (ಆಡಳಿತ ಅಧಿಕಾರಿಗಳು ತೆಕ್ಕಲಕೋಟೆ ) ರವರು ಸರಕಾರದಲ್ಲಿ ಲಭ್ಯವಿರುವ ಉಚಿತ ಚಿಕಿತ್ಸೆಗಳ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಅರೋಗ್ಯ ಸ್ಕೀಮ್ ಗಳ ಬಗ್ಗೆ ಹೆಚ್ಚಾಗಿ ಹರಾಡುತ್ತಿರುವ ಡೆಂಗ್ಯೂ ಜ್ವರದ ಬಗ್ಗೆ ತೆಕ್ಕಲಕೋಟೆಯ ಸಾರ್ವಜನಿಕರಲ್ಲಿ ಅರೋಗ್ಯ ದ ಅರಿವು ಹಾಗೂ ಜಾಗರುಕರಾಗಿರಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ,ರಾಮಕೃಷ್ಣ ಮಕ್ಕಳ ತಜ್ಞರು, ಡಾ, ಶ್ರೀ ಹರಿ ಅರವಳಿಕೆ ತಜ್ಞರು, ಡಾ, ಮೇಘಾ ವಿಮ್ಸ್ ಬಳ್ಳಾರಿ, ಡಾ, ವೈ ಸಿ ಕ್ವತ್ವಾವಲ್ ದಂತ ತಜ್ಞರು, ಹಾಗೂ ಪಟ್ಟಣ ಪಂಚಾಯತಿಯ ಶ್ರೀಮತಿ ಶೋಭಾ (ಪ್ರ,ದ,ಸ ),ಟಿ ಸುಬ್ರಮಣ್ಯಯಂ ಕಂದಾಯ ನಿರೀಕ್ಷಿಕರು, ಹಸನ್ ಸಾಬ್ ವಿಷಯ ನಿರ್ವಾಹಕರು, ಅಂಬಯ್ಯ ಅಂಗವಿಕಲ ಸಹಾಯಕ, ಹಾಗೂ ಇತರೆ ಸಿಬ್ಬಂದಿ ವರ್ಗದವರೂ ಹಾಗೂ ಸಾರ್ವಜನಿಕರು ಇದ್ದರು