ದಾವಣಗೆರೆ ಮಾ.21 ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು ಇವರು ಅನುಷ್ಠಾನಗೊಳಿಸುತ್ತಿರುವ ದೇವದಾಸಿ ಪುನರ್ವಸತಿ ಯೋಜನೆ, ಜೆ.ಜೆ.ಎಂ ವೈದ್ಯಕೀಯ ಮಹಾವಿದ್ಯಾಲಯ, ಸಮುದಾಯ ಆರೋಗ್ಯ ವಿಭಾಗ, ಎಸ್ ಎಸ್ ಕೇರ್ ಟ್ರಸ್ಟ್ ಸಹಯೋಗದಲ್ಲಿ ಮಾರ್ಚ್ 18 ರಿಂದ 20 ರವರೆಗೆ ನಗರದಲ್ಲಿರುವ ಡಾ.ಶಾಮನೂರು ಶಿವಶಂಕರಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಜಿ ದೇವದಾಸಿ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ ಮಹಿಳೆಯರಿಗೆ ಸಾಮಾನ್ಯ ಆರೋಗ್ಯ ತಪಾಸಣೆಯ ಜೊತೆಗೆ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಗೆ ಸಂಬಂಧಿಸಿದ ತಪಾಸಣೆಯನ್ನು ಮಾಡಿಸಲಾಯಿತು. ಮಾ.19 ರಂದು ಎರಡು ಜನ ಮಾಜಿ ದೇವದಾಸಿ ಮಹಿಳೆಯರಿಗೆ ಜಿಡ್ಡುಗಟ್ಟಿದ ಜಡೆಯನ್ನು ಕತ್ತರಿಸಲಾಯಿತು. ಶಿಬಿರದಲ್ಲಿ 150 ಜನ ಜಿಲ್ಲೆಯ ಮಾಜಿ ದೇವದಾಸಿ ಮಹಿಳೆಯರನ್ನು ತಪಾಸಣೆ ಮಾಡಲಾಯಿತು.
ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಮಂಜುಳ, ಐಟಿ ಯೋಜನಾ ಅನುಷ್ಠಾನಾಧಿಕಾರಿ ಪ್ರಜ್ಞಾಜಯರಾಜ್, ಬಿ.ಸಿ.ಕುಸುಮ, ಸ್ವಯಂ ಸೇವಕಿ ಭಾಗ್ಯ ಹಾಗೂ ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ. ಅನುರೂಪ, ಪ್ರಾಧ್ಯಾಪಕ ರಾದ ಡಾ. ಶಾಲಿನಿ , ಡಾ.ದಿವ್ಯ, ಡಾ. ಪುನೀತ್, ಡಾ. ನೀಲಾಂಬಿಕಾ ಹಾಗೂ ಡಾ. ಶಾಮನೂರು ಶಿವಶಂಕರಪ್ಪ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.