ಚಿತ್ರದುರ್ಗಆ.28:
ಹೊಸದುರ್ಗ ಪಟ್ಟಣದಲ್ಲಿ ಬುಧವಾರ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ ನಿಷೇಧ ಕಾಯ್ದೆಯಡಿಯಲ್ಲಿ ವಿವಿಧ ವಾಣಿಜ್ಯ ಸಂಸ್ಥೆಗಳಾದ ಗ್ಯಾರೇಜ್, ಹೋಟೆಲ್, ಮರದ ಶಾಮಿಲ್‌ಗಳಲ್ಲಿ ತಪಾಸಣೆ ನಡೆಸಿ, ಮಾಲೀಕರಿಗೆ ಜಾಗೃತಿ ಮೂಡಿಸಲಾಯಿತು.
ತಪಾಸಣಾ ಸಂದರ್ಭದಲ್ಲಿ ಓರ್ವ ಬಾಲಕನು ಸುತ್ತಾಡುತ್ತಿರುವುದನ್ನು ಗಮನಿಸಿ ಆ ಮಗುವನ್ನು ತಂದೆಯ ಜೊತೆಯಲ್ಲಿ ಮೌಲಾನ ಆಜಾದ್ ಸರ್ಕಾರಿ ಶಾಲೆಗೆ ದಾಖಲು ಮಾಡಲಾಯಿತು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕಾಂತರಾಜು ಅವರು ಬಾಲಕನಿಗೆ ಸಮವಸ್ತç, ಪುಸ್ತಕ, ಬ್ಯಾಗ್, ಶೂಗಳನ್ನು ವಿತರಣೆ ಮಾಡಿದರು.
ತಂಡದಲ್ಲಿ ಹೊಸದುರ್ಗ ವೃತ್ತ ಕಾರ್ಮಿಕ ನಿರೀಕ್ಷಕ ಡಿ.ರಾಜಣ್ಣ, ಜಿಲ್ಲಾ ಬಾಲಕಾರ್ಮಿಕ ಯೋಜನೆ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನವೀನ್ ಕುಮಾರ್, ಇಸಿಒ ಸೋಮಶೇಖರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ, ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಇದ್ದರು. ಸದರಿ ಕಾಯ್ದೆಯಡಿಯಲ್ಲಿ ಸಂಸ್ಥೆಗಳ ಮಾಲೀಕರುಗಳಿಗೆ ಜಾಗೃತಿ ಮೂಡಿಸಲಾಯಿತು.