ಮಾನವೀಯ ಮೌಲ್ಯಗಳು ಮುಖ್ಯ: ಪ್ರೊ‌. ಎನ್. ಚಿನ್ನಸ್ವಾಮಿ ಸೋಸಲೆ

Vijayanagara Vani
ಮಾನವೀಯ ಮೌಲ್ಯಗಳು ಮುಖ್ಯ: ಪ್ರೊ‌. ಎನ್. ಚಿನ್ನಸ್ವಾಮಿ ಸೋಸಲೆ

ಜಾತಿ, ಧರ್ಮ, ಮೌಡ್ಯ ಇವೆಲ್ಲಾವನ್ನು ಮರೆತು ಮಾನವಿಯ ಮೌಲ್ಯಗಳನ್ನು ಪ್ರತಿಯೊಬ್ಬರು ಬೆಳೆಸಿಕೊಂಡು, ಸಮಾಜದಲ್ಲಿ ಜೀವನ ನಡೆಸುವುದು ಬಹಳ ಮುಖ್ಯ ಎಂದು ಕನ್ನಡ ವಿಶ್ವವಿದ್ಯಾಲಯದ ಹಂಪಿಯ ಚಿರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ‌. ಎನ್. ಚಿನ್ನಸ್ವಾಮಿ ಸೋಸಲೆ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.

ನಗರದ ಶ್ರೀ ಶಂಕರ್ ಆನಂದಸಿಂಗ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಎಂ.ಕಲ್ಲಹಳ್ಳಿ ಇವರ ಸಂಯುಕ್ತಾಶ್ರದಲ್ಲಿ ವಿಜಯ ನಗರ ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಹೆಚ್.ಎನ್.ಎಫ್ ಇಮಾಮ್ ನಿಯಾಹಿ ಅವರು ಉದ್ಘಾಟಿಸಿದರು .

ಪ್ರಾಸ್ತಾವಿಕವಾಗಿ ಸಂಸ್ಥೆಯ ಅಧ್ಯಕ್ಷ ಅಕ್ಕಿ ಮಲ್ಲಿಕಾರ್ಜುನ ಪ್ರಸ್ತಾವಿಕವಾಗಿ ಮಾತನಾಡಿದರು.
ನಂತರ ಕನ್ನಡ ವಿಶ್ವವಿದ್ಯಾಲಯದ ಹಂಪಿಯ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ‌. ಎನ್. ಚಿನ್ನಸ್ವಾಮಿ ಸೋಸಲೆ ಅವರು ಕರ್ನಾಟಕದಲ್ಲಿ ದಲಿತ ಚಳುವಳಿಗಳು ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಮುಖ್ಯವಾಗ ಜಾತಿ, ಧರ್ಮ, ಮೌಡ್ಯ ಇವೆಲ್ಲಾವನ್ನು ಮರೆತು ಮಾನವಿಯ ಮೌಲ್ಯಗಳನ್ನು ಪ್ರತಿಯೊಬ್ಬರು ಬೆಳೆದುಕೊಂಡು ಸಮಾಜದಲ್ಲಿ ಜೀವನ ನಡೆಸುವುದು ಬಹಳ ಮುಖ್ಯ ಎಂದರು.ಶೋಷಣೆ ಎನ್ನುವುದು ಎಲ್ಲಾ ವರ್ಗದಲ್ಲಿ ಇದೆ. ಅದು ಕೆಳವರ್ಗಕ್ಕೆ ಸೀಮಿತವಾಗಿಲ್ಲ ಇದನ್ನು ಪ್ರತಿಯೊಬ್ಬರು ಪ್ರಸ್ತುತವಾಗ ಅರಿತು ನಡೆಯಬೇಕಾಗಿದೆ ಹಾಗೂ ಪ್ರತಿಯೊಬ್ಬರು ಪ್ರಶ್ನೆ ಮಾಡಿವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ನಾಯಕರ ಭೀಮೇಶ್ ಪ್ರಥಮಸ್ಥಾನ, ಈ.ಉಮಾದೇವಿ ದ್ವಿತೀಯ ಸ್ಥಾನ ಹಾಗೂ ಆಯುಷಾ ಖಾನಂ ತೃತೀಯ ಸ್ಥಾನ ಪಡೆದುಕೊಂಡರು.

ಸಂಸ್ಥೆಯ ಸದಸ್ಯೆ ಸಂಗಮ್ಮ ಅಕ್ಕಿ ಮಲ್ಲಿಕಾರ್ಜುನ ಪ್ರಾರ್ಥನೆ ಮಾಡಿ, ಗುಜ್ಜಲ ಹುಲುಗಪ್ಪ ಸ್ವಾಗತ, ನಿರೂಪಣೆ ಅಮೃತ್ ನಾಯ್ಕ್, ಅತಿಥಿ ಪರಿಚಯ ಡಾ.ಎರಿಸ್ವಾಮಿ ಅವರು ನೆರವೇರಿಸಿದರು‌.

ಮೌನೇಶ್ ಬಡಿಗೇರ್ ಹಾಗೂ ನಾಗರಾಜ್ ಪತ್ತಾರ್ ಅವರು ಸಂಗೀತ ಕಾರ್ಯಕ್ರಮ ನೇರವೇರಿಸಿದರು.ಈ ಸಮಯದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಶಿವಪ್ಪ, ಉಪನ್ಯಾಸಕರಾದ ಡಾ.ಜಯಣ್ಣ, ಡಾ.ಕೆ ಪನ್ನಂಗಧರ, ಡಾ.ಹೆಬಸೂರ್,ಡಾ ಸುರೇಶ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಗಿರೀಶ್ ಕುಮಾರ್ ಗೌಡ, ಬಳ್ಳಾರಿ
ಉಪನ್ಯಾಸಕರು ಮತ್ತು ಹವ್ಯಾಸಿ ಬರಹಗಾರರು

WhatsApp Group Join Now
Telegram Group Join Now
Share This Article
error: Content is protected !!