ದೇವರಲ್ಲಿ ನಂಬಿಕೆಯಿದ್ದರೆ ಎಲ್ಲರನ್ನೂ ರಕ್ಷಿಸುತ್ತಾನೆ : ಸರ್ಫ್ರಾಜ್ ಅಹ್ಮದ್

Vijayanagara Vani
ದೇವರಲ್ಲಿ ನಂಬಿಕೆಯಿದ್ದರೆ ಎಲ್ಲರನ್ನೂ ರಕ್ಷಿಸುತ್ತಾನೆ : ಸರ್ಫ್ರಾಜ್ ಅಹ್ಮದ್
ಸಮಾಜದ ಒಳಿತಿಗಾಗಿ ಬಕ್ರೀದ್‌ ಆಚರಿಲಾಗುತ್ತದ. ಒಮ್ಮೆ ಅಲ್ಲಾಹ್‌ ತನ್ನ ಭಕ್ತನಾದ ಪ್ರವಾದಿ ಮುಹಮ್ಮದ್ ಕನಸಿನಲ್ಲಿ ಬಂದು ನಿನಗೆ ಇಷ್ಟವಾಗಿದ್ದನ್ನು ನನಗೆ ನೀಡುವಂತೆ ಹೇಳುತ್ತಾರೆ. ಆಗ ಪ್ರವಾದಿ ಮಹಮ್ಮದ್‌, ತಾನು ಬಹಳ ಇಷ್ಟಪಡುತ್ತಿದ್ದ ಮಗ ಇಸ್ಮಾಯಿಲ್‌ನನ್ನು ಅಲ್ಲಾಹ್‌ಗಾಗಿ ತ್ಯಾಗ ಮಾಡಲು ಸಿದ್ಧರಾಗುತ್ತಾರೆ. ಮಗನನ್ನು ಬಲಿ ಕೊಡಲು ಮುಂದಾದಾಗ ಅಲ್ಲಿ ಅಲ್ಲಾಹ್‌ ಎದುರಾಗುತ್ತಾರೆ. ಬಲಿಪೀಠದಲ್ಲಿ ಇಸ್ಮಾಯಿಲ್‌ ಬದಲಿಗೆ ಒಂದು ಕುರಿ ಕಾಣಿಸಿಕೊಳ್ಳುತ್ತದೆ. ಆದರೆ ಅದು ಅಲ್ಲಾಹ್‌ ಕಳಿಸಿದ ದೈವಿಕ ಕುರಿಯಾಗಿರುತ್ತದೆ. ಅಂದಿನಿಂದ ಇದುವರೆಗೂ ಆ ದಿನವನ್ನು ಬಕ್ರೀದ್‌ ಎಂದು ಕರೆಯಲಾಗುತ್ತದೆ ಎಂದು ಉದ್ಯಮಿ ಹಾಗೂ ಮುಸ್ಲಿಂ ಸಮುದಾಯದ ಮುಖಂಡ ಕೆ.ಎಸ್ ಸಫ್ರಾಜ್ ಅಹ್ಮದ್ ತಿಳಿಸಿದರು.
ಅವರು ಸೋಮವಾರ ಪಟ್ಟಣದ ನಾಡಗೌಡರ ಮರಿಬಸವನಗೌಡರ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದ ಸಮೀಪದ ದರ್ಗಾ ದಲ್ಲಿ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು 
 ಅಲ್ಲಾಹ್‌ನಲ್ಲಿ ಭಕ್ತಿ ನಂಬಿಕೆ ಇದ್ದರೆ ಎಲ್ಲರನ್ನೂ ರಕ್ಷಿಸುತ್ತಾನೆ ಎನ್ನುವ ಸಂಕೇತವೇ ಬಕ್ರಿದ್ .
ಮುಸ್ಲಿಮರಿಗೆ ಪವಿತ್ರವಾದ ಹಬ್ಬಗಳು ಎರಡೇ ಅಂದರೆ ಈದ್ ಉಲ್ ಫಿತ್ರ್ ಅಥವಾ ರಂಜಾನ್ ಹಬ್ಬ ಹಾಗೂ ಈದ್ ಅಲ್ ಅಧಾ (ಈದ್ ಉಲ್ ಧುಹಾ) ಅಥವಾ ಬಕ್ರೀದ್ ಹಬ್ಬ. ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೆಯ ತಿಂಗಳಲ್ಲಿ ಒಂದು ತಿಂಗಳ ಉಪವಾಸ ಆಚರಣೆಯ ಬಳಿಕ ರಂಜಾನ್ ರಬ್ಬ ಆಚರಿಸಿದರೆ ಕಡೆಯ ತಿಂಗಳಾದ ದುಲ್ ಹಜ್ ನ ಹತ್ತನೆಯ ದಿನದಂದು ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ‌ಮುಸ್ಲಿಂ ಸಮುದಾಯದವರು ಹೊಸ ಬಟ್ಟೆಧರಿಸಿ,ಅಲ್ಲಾಹುಗೆ ಪ್ರಾರ್ಥನೆ ಸಲ್ಲಿಸಿ , ಸಿಹಿ ಹಂಚಿ,ಪರಸ್ಪರ ಆಲಂಗಿಸಿಕೊಂಡು ಶುಭಕೋರಿದರು.
ಈ ಸಂದರ್ಭದಲ್ಲಿಕೆ.ಎಸ್.ಖಾದರ್ ಭಾಷಾ,ಮುಲ್ಲಾ ಅನಿಫ್,ಟ್ರಾಕ್ಟರ್ ನಭಿ,ಸಾಧಿಕ್ ಅಲಿ,ಶಾಮಿಯಾನ ಮೌಲ ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!