Ad image

ಉತ್ತಮ ಚಟುವಟಿಕೆ ಮೂಲಕ ಮೆದುಳು ಆರೋಗ್ಯ ಸುಧಾರಿಸಿ -ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ

Vijayanagara Vani
ಉತ್ತಮ ಚಟುವಟಿಕೆ ಮೂಲಕ ಮೆದುಳು ಆರೋಗ್ಯ ಸುಧಾರಿಸಿ -ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ
ಚಿತ್ರದುರ್ಗಜುಲೈ.22:
ಉತ್ತಮ ಚಟುವಟಿಕೆಗಳ ಮೂಲಕ ಮೆದುಳು ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆಯ ಬಿ.ಸಿ.ರಾಯ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮೆದುಳು ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹೃದಯ, ಕಿಡ್ನಿ ಮತ್ತು ದೈಹಿಕ ಕಾಯಿಲೆಗಳ ಕಾರ್ಯಕ್ರಮಗಳಂತೆ ಈಚೆಗೆ ಮೆದುಳು ಆರೋಗ್ಯ ಕಾರ್ಯಕ್ರಮವು ಪ್ರಾರಂಭಿಸಿರುವುದು ಎಲ್ಲರೂ ಮಾನಸಿಕವಾಗಿ ಆರೋಗ್ಯವಾಗಿರಬೇಕು. ಒತ್ತಡದ ಜೀವನದಲ್ಲಿ ನಾವೆಲ್ಲರೂ ಆಧುನಿಕ ಸಾಧನ ಸಲಕರಣೆಗಳಾದ ಮೊಬೈಲ್ ಫೋನ್, ಇಂಟರ್ನೆಟ್, ಲ್ಯಾಪ್ಟ್ಯಾಪ್, ಯೂಟ್ಯೂಬ್ ಸೇರಿದಂತೆ ಮೊದಲಾದ ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್ ಆಗಿದ್ದೇವೆ. ಅವುಗಳಿಂದ ಹೊರಬಂದು ದೈಹಿಕ ವ್ಯಾಯಾಮ ಮನೋರಂಜನ ಕಾರ್ಯಕ್ರಮಗಳು ಮೊದಲಾದ ಉತ್ತಮ ಚಟುವಟಿಕೆಗಳ ಮೂಲಕ ಮೆದುಳು ಆರೋಗ್ಯ ಸುಧಾರಿಸಿಕೊಂಡು, ಮೆದುಳು ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಜಿ.ಓ.ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಜೊತೆಯಲ್ಲಿ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮ ಪ್ರಾರಂಭವಾಗಿದೆ. ಮನುಷ್ಯನಿಗೆ ದಿನನಿತ್ಯದ ಕಾರ್ಯ ಚಟುವಟಿಕೆಗಳಿಗೆ ಮೆದುಳು ಆರೋಗ್ಯವು ಬಹು ಮುಖ್ಯ. ವಿಶೇಷವಾಗಿ ಮೆದುಳು ಆರೋಗ್ಯದಲ್ಲಿ ಡಿಮೆನ್ಷಿಯ, ಪಾಶ್ರ್ವವಾಯು, ತಲೆನೋವು, ಅಪಸ್ಮಾರ ಮತ್ತು ಮೂರ್ಛೆರೋಗಗಳನ್ನು ಒಳಗೊಂಡಿದೆ ಎಂದರು.
ನಿತ್ಯವೂ ವ್ಯಾಯಾಮ ಯೋಗ ಮತ್ತು ಧ್ಯಾನ ಮನೋರಂಜನ ಕಾರ್ಯಕ್ರಮಗಳು ಮೊದಲಾದವುಗಳ ಮೂಲಕ ದೈಹಿಕವಾಗಿ ಶ್ರಮವಹಿಸುವುದರ ಮೂಲಕ ಮೆದುಳು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯ ನರರೋಗ ತಜ್ಞ ಡಾ.ಆರ್.ಕಿರಣ್ ಗೌಡ ಉಪನ್ಯಾಸ ನೀಡಿ, ಮೆದುಳು ಆರೋಗ್ಯ ಬಗ್ಗೆ ಜಾಗೃತಿ ವಹಿಸಬೇಕು. ಮೂರ್ಚಿ ರೋಗದಂತಹ ಕಾಯಿಲೆಗಳಲ್ಲಿ ಹಲವಾರು ಲಕ್ಷಣಗಳಿವೆ. ಬಾಯಲ್ಲಿ ನೊರೆ ಬರುವುದು, ಪ್ರಜ್ಞೆ ತಪ್ಪಿ ಬೀಳುವುದು ಸ್ವಲ್ಪ ಸಮಯ ಒಂದೇ ಬಂಗಿಯಲ್ಲಿರುವುದು, ಕಣ್ಣುಗಳು ಬಾಯಿ ಕೈಕರಗಳು ಚಲನೆ ಇಲ್ಲದಿರುವುದು ಮುಂತಾದ ಲಕ್ಷಣಗಳು ಇರುತ್ತವೆ. ಅದಕ್ಕೆ ನಾವು ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಾರದು ಆಂಟಿ ಎಪಿಲೆಫ್ಟಿಕ್ ಮಾತ್ರೆಗಳನ್ನು ವೈದ್ಯರಿಂದ ಪಡೆದು ಗುಣಮುಖರಾಗಬೇಕು. ಅದೇ ರೀತಿ ಪಾಶ್ರ್ವ ವಾಯು ಆದಾಗ ತಲೆನೋವು ಬಂದಂತಹ ಸಂದರ್ಭದಲ್ಲಿ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಪಿಜೆಷನ್ ಅಥವಾ ನರರೋಗ ತಜ್ಞರಿಂದ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬೇಕು. ದೈಹಿಕ ಚಟುವಟಿಕೆಗಳು ವ್ಯಾಯಾಮ, ವಾಕಿಂಗ್, ಯೋಗ ಮತ್ತು ದ್ಯಾನ, ಸರಿಯಾದ ನಿದ್ರೆ ಇವುಗಳ ಮೂಲಕ ಮೆದುಳು ಆರೋಗ್ಯಕರವಾಗಿ ಇರಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಶ್ವ ಮೆದುಳು ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾಕ್ಕೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಜಿ.ಓ.ನಾಗರಾಜ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ. ಗಿರೀಶ್ ಚಾಲನೆ ನೀಡಿದರು
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್, ಎಬಿಆರ್ಕೆ ಸಮಾಲೋಚಕ ಡಾ.ಚಂದ್ರಶೇಖರ್ ರಾಜು, ಪಿಜಿ ವೈದ್ಯರಾದ ಡಾ.ಪ್ರಮೋದ್ ಭಟ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ, ಕ್ಲಿನಿಕಲ್ ಸೈಕಲಾಜಿಸ್ಟ್ ಶ್ರೀಧರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವೈ.ತಿಪ್ಪೇಶ್, ಪ್ರವೀಣ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸುನೀತಾ ರಶ್ಮಿ., ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಜಾನಕಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Share This Article
error: Content is protected !!
";