ಮುದ್ದೇಬಿಹಾಳ:- ಸೋಲು ಮುಂದಿನ ಸಾಧನೆಯ ಹಾದಿಯನ್ನಾಗಿಸಿಕೊಂಡು ವಿದ್ಯಾರ್ಥಿಗಳು ಸೋಲು-ಗೆಲುವನ್ನು ಅನುಸರಿಸಿಕೊಂಡು ಆಟದಲ್ಲಿ ಮುನ್ನಡೆಯಬೇಕು.ಸೋತವರು ಕುಗ್ಗದೆ, ಗೆದ್ದವರು ಹಿಗ್ಗದೆ ಆಟವಾಡಬೇಕು ಎಂದು ದೈಹಿಕ ಪರಿವೀಕ್ಷಕ ಬಿ ವಾಯ್ ಕವಡಿ ಮಾತನಾಡಿದರು.
ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದ ಬಸವ ಬಾಲ ಭಾರತಿ ಶಾಲೆಯಲ್ಲಿ ಅಗಸ್ಟ 6 ಮಂಗಳವಾರದಂದು ಹಮ್ಮಿಕೊಂಡ ಢವಳಗಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿದರು.ಮುಖ್ಯ ಅತಿಥಿಯಾದ ಸುಭಾಷ ಗುಡಿಮನಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಅಭ್ಯಾಸದ ಜೊತೆಗೆ ಕ್ರೀಡೆಯು ಮುಖ್ಯವಾಗಿದೆ.ಆಟದಲ್ಲಿ ಸೋಲು-ಗೆಲುವನ್ನು ಸಮಾನ ರೀತಿಯಲ್ಲಿ ಸ್ವೀಕರಿಸಿದರೆ ಮಾತ್ರ ನಿಜವಾದ ಆಟಗಾರ ಎಂದು ಮಾತನಾಡಿದರು. ಢವಳಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ದ್ರಾಕ್ಷಾಯಿಣಿ ಮೇಲಿನಮನಿ ಕ್ರೀಡಾಕೂಟವನ್ನು ಗುಂಡು ಎಸೆಯುವುದರ ಮುಖಾಂತರ ಚಾಲನೆ ನೀಡಿದರು. ಬಸವ ಸಮಿತಿಯ ಉಪಾಧ್ಯಕ್ಷರಾದ ನಾನಾಗೌಡ ಕೊಣ್ಣುರ ಅವರು ಧ್ವಜಾರೋಹಣವನ್ನು ನೇರವೇರುಸಿದರು. ಶಿಕ್ಷಣ ಸಂಯೋಜಕರಾದ ಡಿ ವಾಯ್ ಗುರಿಕಾರ, ಎಮ್ ಎಸ್ ಗುರಿಕಾರ, ಎಮ್ ಎಸ್ ಮಾಕೋಂಡ, ಜಿ ಎಸ್ ಕೋರಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಆನಂದ ಹೀರೆಮಠ, ಉಪಾಧ್ಯಕ್ಷ ಸುರೇಶಗೌಡ ಪಾಟೀಲ, ನಿವೃತ್ತ ಸೈನಿಕರದ ಸಂಗಮೇಶ ಬಿರಾದಾರ,ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಎಮ್ ಕೆ ಗುಡಿಮನಿ, ಎಲ್ಲಾ ಶಾಲೆಯ ಮುಖ್ಯಗುರುಗಳಾದ ಬಿ ಎಸ್ ಶೇಕಣ್ಣವರ, ರಮೇಶ ಮೂಲಿಮನಿ, ಸಿ ಪಿ ಮುತ್ತಿನ, ಎಮ್ ಆರ್ ಜುಮನಾಳ, ಶ್ರೀಮತಿ ಎಸ್ ಸಿ ಸಜ್ಜನ, ಎಸ್ ಎಚ್ ಸಜ್ಜನ, ಎಸ್ ಎಮ್ ಸಜ್ಜನ, ಸೇರಿದಂತೆ ಬಸವ ಬಾಲ ಭಾರತಿ ಶಾಲೆಯ ಸಿಬ್ಬಂದಿಗಳು ಇದ್ದರು.