ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು ಈ ಹಿನ್ನಲೆಯಲ್ಲಿ ತುಂಗಭದ್ರಾ ಅಣೆಕಟ್ಟು ಭರ್ತಿಯಾಗಿದೆ. ಅಣೆಕಟ್ಟಿಗೆ ಹೆಚ್ಚಿನ ಒಳಹರಿವು ಹರಿದು ಬರುತ್ತಿರುವ ಕಾರಣ ಆ ನೀರನ್ನು ನದಿಗಳ ಮೂಲಕ ಹೊರಕ್ಕೆ ಬಿಡಲಾಗುತ್ತಿದೆ ಇದರಿಂದಾಗಿ ನದಿ ಪಾತ್ರದ ಹೊಲಗದ್ದೆ ಗ್ರಾಮಗಳು ಜಲಾವೃತ ಆಗುತ್ತಿವೆ. ಅನೇಕ ಕಡೆ ಜನ ಜಾನುವಾರುಗಳಿಗೆ ತೊಂದರೆಯಾಗಿ ಪೈರು ನಷ್ಟ ಹೊಂದುತ್ತಿದೆ
ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ ತಂಡ ರೂಪಿಸಿಕೊಂಡು ಮಾಜಿ ಸಚಿವ ಶ್ರೀರಾಮುಲು ಮತ್ತು ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ತಾಲೂಕಿನ ಕೆಂಚನಗುಡ್ಡ ನಿಟ್ಟೂರು ಸೇರಿದಂತೆ ಪ್ರವಾಹ ಅಧ್ಯಯನವನ್ನು ಗುರುವಾರ ಮಧ್ಯಾಹ್ನ 12 ಗಂಟೆ ವೇಳೆಯಲ್ಲಿ ನಡೆಸಿ ಪರಿಶೀಲನೆ ಮಾಡಿದರು
ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ತುಂಗಭದ್ರ ನದಿ ಪ್ರವಾಹದಿಂದ ಮುಳುಗಡೆಯಾದ ಪ್ರದೇಶಕ್ಕೆ ಮಾಜಿ ಸಚಿವ ಶ್ರೀರಾಮುಲು ಹಾಗೂ ಮಾಜಿ ಶಾಸಕ ಸೋಮಲಿಂಗಪ್ಪ ಭೇಟಿ ನೀಡಿ ತುಂಗಭದ್ರಾ ನದಿಗೆ ಬಹಳಷ್ಟು ಪ್ರಮಾಣದ ನೀರು ಹರಿದು ಬಂದಿರುವುದರಿಂದ ನದಿಯ ಪಕ್ಕದಲ್ಲಿರುವ ರೈತರ ಬೆಳೆ ನಷ್ಟವನ್ನು ವೀಕ್ಷಣೆ ಮಾಡಿದರು ನಂತರ ಮಾತನಾಡಿದ ಅವರುರೈತರ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಅನಿಲ್ ಕುಮಾರ್ ಮೋಕಾ ಮತ್ತು ಸಿರುಗುಪ್ಪ ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪನವರು ಮತ್ತು ಊರಿನ ಮುಖಂಡರಾದ ವಿ ರಾಮರಾಜು ಹೊನ್ನಪ್ಪ ಬಸವರಾಜ ಮಾರೆಪ್ಪ ಅಂಬಣ್ಣ ಇನ್ನಿತರ ಮುಖಂಡರು ಉಪಸ್ಥಿತರಿದ್ದರು
ಈ ವೇಳೆ ಗ್ರಾಮದ ಅನೇಕ ರೈತರನ್ನು ಮಾತನಾಡಿಸಿ ಪ್ರವಾಹ ಪರಿಸ್ಥಿತಿಯ ಬಗ್ಗೆ ವಿವರಣೆ ಪಡೆದರುಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ತಾಲೂಕು ಪದಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.