ಸಿರುಗುಪ್ಪ.ಜು.12:- ಸಮಸ್ತ ಮನುಕುಲಕ್ಕೆ ಉಪದೇಶ ಮಾಡುವ ಗ್ರಂಥ ಸಿದ್ದಾಂತ ಶಿಖಾಮಣಿಯಾಗಿದ್ದು, ಈ ಪವಿತ್ರ ಗ್ರಂಥವನ್ನು ವೀರಶೈವ ಧರ್ಮಗ್ರಂಥವೆ0ದು ಬಣ್ಣಿಸಲಾಗಿದ್ದರೂ ಅದು ವೀರಶೈವರಿಗಷ್ಟೆ ಸೀಮಿತವಾಗಿಲ್ಲ, ಜಗತ್ತಿನ ಎಲ್ಲಾ ಧರ್ಮಿಯರು ಅಧ್ಯಯನ ಮಾಡುವುದರಿಂದ ಇದನ್ನು ಜಾಗತಿಕ ಧರ್ಮಗ್ರಂಥ ಎನ್ನಲಾಗಿದೆ ಎಂದು ಶ್ರೀಶೈಲ ಪೀಠದ ಶ್ರೀ 1008 ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.
ನಗರದ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ನಡೆದ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಶ್ರೀಗಳು ಸಿದ್ದಾಂತ ಶಿಖಾಮಣಿ ಒಂದು ವೀರಶೈವ ಧರ್ಮದ ಮಹಾನ್ ಗ್ರಂಥವಾಗಿದೆ. ಇದ್ನನು ಶ್ರೀ ವಯೋಗಿ ಶಿವಚಾರ್ಯರು ರಚಿಸಿದ್ದು, ಇದರಲ್ಲಿ ರೇಣುಕಾ ಮತ್ತು ಅಗಸ್ತö್ಯ ಮಹರ್ಷಿಗಳ ಸಂವಾದದ ರೂಪದಲ್ಲಿದೆ. ಈ ಗ್ರಂಥದಲ್ಲಿರುವ ಜೀವನಸಾರಂಶವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು.
ಸಿದ್ದಾಂತ ಶಿಖಾಮಣಿ ಗ್ರಂಥವು ವೀರಶೈವ ಸಮಾಜದ ಪ್ರಮುಖ ಗ್ರಂಥವಾಗಿದ್ದು, ಇದನ್ನು ರೇಣುಕಾಗಸ್ತö್ಯ ಸಂವಾದ ಮತ್ತು ವೀರಶೈವ ಮಹಾತಂತ್ರ ಎಂದು ಕರೆಯಲಾಗುತ್ತದೆ. ಈ ಗ್ರಂಥದಲ್ಲಿ ಜಗದ್ಗುರು ರೇಣುಕಾ ಮತ್ತು ಅಗಸ್ತö್ಯ ಮಹಾಋಷಿಗಳ ಸಂವಾದದ ಮೂಲಕ ವೀರಶೈವ ಧರ್ಮದ ಸಿದ್ದಾಂತಗಳನ್ನು ವಿವರಿಸಲಾಗಿದೆ. ಸಿದ್ದಾಂತ ಶಿಖಾಮಣಿ ಪ್ರವಚನವೆಂದರೆ ಈ ಗ್ರಂಥದಲ್ಲಿರುವ ವಿಷಯಗಳ ಬಗ್ಗೆ ಮಾತನಾಡುವುದು ವಿವರಿಸುವುದಾಗಿದೆ.
ಧರ್ಮ, ಕರ್ಮ, ಮೋಕ್ಷ ಮುಂತಾದ ವಿಷಯಗಳ ಬಗ್ಗೆ ಈ ಗ್ರಂಥದಲ್ಲಿ ಸವಿವರವಾಗಿ ವಿಶ್ಲೇಷಣೆ ಮಾಡಲಾಗಿದ್ದು, ಸಿದ್ದಾಂತ ಶಿಖಾಮಣಿ ಗ್ರಂಥದಲ್ಲಿರುವ ಅಧ್ವೆöÊತ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಗ್ರಂಥವನ್ನು ಎಲ್ಲರು ಓದಬೇಕು, ತಿಳಿಯಬೇಕು, ಹಾಗೇಯೇ ಅದರಂತೆ ಧರ್ಮದ ಹಾದಿಯಲ್ಲಿ ಮುನ್ನೆಡೆದು ತಮ್ಮ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ಹೇಳಿದರು.
ರೌಡಕುಂದಿ ಸಂಸ್ಥಾನ ಹಿರೇಮಠದ ಶಿವಯೋಗಿ ಶಿವಚಾರ್ಯ ಸ್ವಾಮೀಜಿ, ಬೆಂಗಳೂರು ಶಿವಗಂಗಾಕ್ಷೇತ್ರದ ಷ.ಬ್ರ ಡಾ|| ಮಲಯ ಶಾಂತಮುನಿ ಶಿವಾಚಾರ್ಯರು, ಗುರುಬಸವ ಮಠದ ಬಸವಭೂಷಣ ಸ್ವಾಮಿಜೀ, ಮಾಜಿ ಶಾಸಕ ಟಿ.ಎಂ.ಚ0ದ್ರಯ್ಯಸ್ವಾಮಿ, ಪಿ.ಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ, ಹಿರಿಯ ವಕೀಲ ಮಲ್ಲಿಕಾರ್ಜುನ ಸ್ವಾವಿಮುಖಂಡರಾದ ಎಂ.ಗೋಪಾಲರೆಡ್ಡಿ, ಚನ್ನಬಸವನಗೌಡ, ಎನ್.ಜಿ.ಬಸವರಾಜಪ್ಪ ಇನ್ನಿತರರು ಇದ್ದರು.