ಮಸ್ಕಿ : ಸೆ.25ರಂದು ಮಸ್ಕಿ ಪಟ್ಟಣದಲ್ಲಿ ರಾಷ್ಟ್ರಮಟ್ಟದ ಓಟದ ಸರ್ಧೆ ಏರ್ಪ-ಡಿಸಲಾಗಿದೆ. ಆಸಕ್ತ ಕ್ರೀಡಾಪಟುಗಳು ಪ್ರವೇಶ ಶುಲ್ಕ ₹5,000 ಅನ್ನು ಮೊಬೈಲ್
9359435107 ಸಂಖ್ಯೆಗೆ ಫೋನ್ ಪೇ ಮಾಡಬೇಕು ವಂಚಕರು ತಿಳಿಸಿದ್ದಾರೆ.
ಡಾ.ಅಬ್ದುಲ್ ಕಲಾಂ ಫೌಂಡೇಷನ್ ಹೆಸರಿನ ಭಿತ್ತಿಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ
ರಾಜ್ಯದ ವಿವಿಧ ಜಿಲ್ಲೆಯ ಕ್ರೀಡಾ ಪಟ್ಟುಗಳ
ಎರಡು ದಿನಗಳ ಹಿಂದೆ ಭಿತ್ತಿಪತ್ರದಲ್ಲಿ ಹಾಕಿದ ಮೊಬೈಲ್ 9620515140/ 8383691009ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಫೋನ್ ಪೇ ಮಾಡಿ ಸೆ.24ರಂದು ರಾಯಚೂರಿನ ರಂಗಮಂದಿರದಲ್ಲಿ ಭೇಟಿಯಾಗಿ ಎಂದು
ಸೂಚಿಸಿದ್ದಾರೆ.
ಅದರಂತೆ ಬೆಂಗಳೂರು, ವಿಜಯನಗರ, ಹಾಸನ ದಿಂದ
ಸೆ.24ರಂದು ರಾಯಚೂರಿಗೆ ಬಂದ ಓಟಗಾರ್ತಿ, ಫೋನ್ ಪೇ ಮಾಡದೆ ನೆರವಾಗಿ ರಂಗಮಂದಿರಕ್ಕೆ ಬಂದು ವಿಚಾರಿಸಿದಾಗ ಯಾವುದೇ ಓಟದ ಸ್ಪರ್ಧೆ ಆಯೋಜಿಸಿಲ್ಲ ಎಂಬುದು ಗೊತ್ತಾಗಿದೆ. ಭಿತ್ತಿಪತ್ರದಲ್ಲಿ ಕೊಟ್ಟ ಮೂರು ಮೊಬೈಲ್ ನಂಬರ್‌ಗಳು ಸ್ವಿಚ್ ಆಫ್ ಆಗಿವೆ.
ಮಸ್ಕಿಯಲ್ಲಿ ಡಾ.ಅಬ್ದಲ್ ಕಲಾಂ
ಫೌಂಡೇಷನ್ ಹೆಸರಿನಲ್ಲಿ ಯಾವುದೇ ಸಂಸ್ಥೆ ಇಲ್ಲ. ಆದರೂ ಈ ಫೌಂಡೇಷನ್‌ನ ಹೆಸರಿನಲ್ಲಿ ಭಿತ್ತಿಪತ್ರ ಹಾಕಿ ಮೊಬೈಲ್ ನಂಬರ್ ಹಾಕಿ ಸಂಪರ್ಕಿಸುವಂತೆ ಹೇಳಲಾಗಿದೆ.
‘ಡಾ.ಅಬ್ದುಲ್ ಕಲಾಂ ಫೌಂಡೇಷನ್ ಸಂಸ್ಥೆಯಿಂದ ರಾಷ್ಟ್ರಮಟ್ಟದ ಓಟದ ಸ್ಪರ್ಧೆ ನಡೆಸುವ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ಇಲ್ಲ’
ಇದರಿಂದ ಕ್ರೀಡಾಪಟುಗಳು ಮಸ್ಕಿ ಹಾಗೂ ರಾಯಚೂರು ಗೆ ಬಂದು
ಮರಳಿದರು.