ಅಖಂಡ ಭಾರತದ ಪರಿಕಲ್ಪನೆ, ಸಂಸ್ಕಾರಯುತ ಶಿಕ್ಷಣದ ಮೂಲಕ ಸಾಕಾರಗೊಳ್ಳಲಿ-ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್
ದಾವಣಗೆರೆ,ಜೂನ್.25ಸುಶಿಕ್ಷಿತ ಸಮಾಜ ನಿರ್ಮಾಣ ರಾಷ್ಟ್ರದ ಅಭ್ಯುದಯಕ್ಕೆ ನಾಂದಿಯಾಗುವುದು, ವೈವಿಧ್ಯಮಯ ಆಚಾರ ವಿಚಾರ, ಸಂಸ್ಕøತಿ ಪರಂಪರೆ ಇತಿಹಾಸದಿಂದ ಕೂಡಿದ ಭವ್ಯ ಭಾರತದ ಪ್ರಜಾಸತ್ತಾತ್ಮಕ ಧ್ಯೇಯೋದ್ದೇಶಗಳು ಸಂಸ್ಕಾರಯುತ ಶಿಕ್ಷಣದ ಮೂಲಕ ಸಾಕಾರಗೊಳ್ಳಲಿದೆ ಎಂದು ರಾಜ್ಯಪಾಲರಾದ ಥ್ಯಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಅವರು ಜೂನ್ 25 ರಂದು ಹರಿಹರ ತಾಲ್ಲೂಕಿನ ಅಮರಾವತಿಯಲ್ಲಿ ಸಂತ ಅಲೋಶಿಯಸ್ ಇಂಟರ್ ನ್ಯಾಷನÀಲ್ ಶಾಲೆ ಉದ್ಘಾಟನಾ ಸಮಾರಂಭ ಹಾಗೂ ಸಂಸ್ಥೆಯ ಪಾಲಕರಾದ ಸಂತ ಅಲೋಶಿಯಸ್ ಗೊಂಜಾಗರವರ 457 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮಾನವೀಯ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ನೀಡಿದ ಶಿಕ್ಷಣ ದೀರ್ಘಕಾಲಿಕ ಫಲದೊಂದಿಗೆ ಯುವ ಜನಾಂಗ ಸಂಸ್ಕಾರವಂತರಾಗಲು ಸಹಕಾರಿಯಾಗುವುದಲ್ಲದೆ, ಅಖಂಡ ಭಾರತದ ಪರಿಕಲ್ಪನೆ ಶಿಕ್ಷಣದ ಮೂಲಕ ಸಾಕಾರಗೊಳ್ಳಲಿದೆ.
ದೇಶದ ಪ್ರಾಚೀನ ವಿಶ್ವವಿದ್ಯಾನಿಲಯಗಳಾದ ನಳಂದ, ತಕ್ಷಶಿಲಾ ಹಾಗೂ ವಿಕ್ರಮಶಿಲಾ ಇವುಗಳಿಂದ ಭಾರತ ವಿಶ್ವಗುರುವಾಗಿತ್ತು. ಪ್ರಾಚೀನ ಶಿಕ್ಷಣದ ಜೊತೆಗೆ ಆಧುನಿಕ ಶಿಕ್ಷಣ ನೀಡಲಾಗುತ್ತಿದ್ದು ನಳಂದ ವಿಶ್ವವಿದ್ಯಾನಿಲಯವನ್ನು ಪುನಶ್ಚೇತನ ಮಾಡಲು ಪ್ರಧಾನಮಂತ್ರಿಗಳು ಮುಂದಾಗಿದ್ದು ಮೂರು ದಿನಗಳ ಹಿಂದಷ್ಟೆ ಪುನಶ್ಚೇತನಗೊಂಡ ವಿಶ್ವವಿದ್ಯಾನಿಲಯ ಉದ್ಘಾಟನೆಯಾಗಿದೆ. ಇದರಿಂದ ದೇಶದ ಸಾಂಸ್ಕøತಿಕ ವೈಭವ ಇನ್ನಷ್ಟು ಹೆಚ್ಚಲು ಸಹಕಾರಿಯಾಗಲಿದೆ ಎಂದರು.
ಜಾಗತಿಕ ಮಟ್ಟ ಹಾಗೂ ದೇಶದಲ್ಲಿ ಪರಿಸರ ಮತ್ತು ಹವಾಮಾನದ ವೈಪರೀತ್ಯದ ದೊಡ್ಡ ಸಮಸ್ಯೆ ತೆಲೆದೋರಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನೆಲ, ಜಲ, ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಶಿಕ್ಷಣವಂತರಾಗುವ ಮೂಲಕ ನೆಲ, ಜಲ ಸಂರಕ್ಷಣೆಗೆ ಮುಂದಾಗಬೇಕಾಗಿದೆ. ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕತೆಯೊಂದಿಗೆ ಜೋಡಣೆ ಮಾಡುವ ಮೂಲಕ ಶ್ರೇಷ್ಠ ದೇಶ ಕಟ್ಟುವ ನಿಟ್ಟಿನಲ್ಲಿ ಸಂಸ್ಥೆ ಕೊಡುಗೆ ನೀಡುವಂತಾಗಲಿ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಿವಮೊಗ್ಗ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂದನೀಯ ಫ್ರಾನ್ಸಿಸ್ ಸೆರಾವೋ ಎಸ್.ಜೆ, ಹರಿಹರ ಶಾಸಕರಾದ ಬಿ.ಪಿ ಹರೀಶ್, ಜೆಸ್ವಿಟ್ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳಾದ ವಂದನೀಯ ಫಾದರ್ ಡಯನೀಶಿಯಸ್ ವಾಸ್ ಎಸ್ ಜೆ, ಸಂತ ಅಲೋಶಿಯಸ್ ಮಾತೃ ಸಂಸ್ಥೆ ನಿರ್ದೇಶಕರಾದ ವಂದನೀಯ ಫಾದರ್ ಮೆಲ್ವಿನ್ ಪಿಂಟೋ ಎಸ್ ಜೆ, ಕಾಲೇಜಿನ ನಿರ್ದೇಶಕರಾದ ವಂದನೀಯ ಫಾದರ್ ಎರಿಕ್ ಮಥಾಯಸ್ ಎಸ್ ಜೆ, ಬೆಂಗಳೂರಿನ ಸಂತ ಜೋಸೆಫ್ ವಿಶ್ವ ವಿದ್ಯಾನಿಲಯ ಪಿ.ಆರ್ .ಓ ಚಂದ್ರಕಾಂತ್, ಶಾಲೆಯ ಪ್ರಾಂಶುಪಾಲರಾದ ಕುಮಾರಿ ರೀನಾ ಪಿಂಟೋ ಹಾಗೂ ಶಾಲಾ, ಕಾಲೇಜಿನ ಸಿಬ್ಬಂದಿಯವರು ಉಪಸ್ಥಿತರಿದ್ದರು.