Ad image

ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನ ಉದ್ಘಾಟನೆ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹಗಳು

Vijayanagara Vani
ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನ ಉದ್ಘಾಟನೆ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹಗಳು

ಸಿರುಗುಪ್ಪ : ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನ ಉದ್ಘಾಟನಾ ಸಮಾರಂಭ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹಗಳು ಅಕ್ಟೋಬರ್ 24ರಂದು ನಡೆಯಲಿವೆ ಎಂದು ತೆಕ್ಕಲಕೋಟೆ ಕಂಬಾಳಿ ಮಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಜೀ ಹೇಳಿದರು.
ನಗರದ ಎಪಿಎಂಸಿ ಹತ್ತಿರ ಇರುವ ಪಿನಾಕಿ ಆಶ್ರಮದ ಶ್ರೀಶೈಲ ಪೀಠದ ಶಿವ ಶಕ್ತಿ ಸಾಂಸ್ಕೃತಿಕ ಭವನದಲ್ಲಿ ಬಿತ್ತಿಪತ್ರಗಳನ್ನು ಆನವರಣಗೋಳಿಸಿ ಮಾತನಾಡಿದರು.
ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ
ಕಾರ್ಯವನ್ನು ಶ್ರೀಮದ್ ಉಜ್ಜಯಿನಿ, ಶ್ರೀಮದ್ ಶ್ರೀಶೈಲ, ಶ್ರೀಮದ್ ಕಾಶಿ ಜಗದ್ಗುರುಗಳವರ ದಿವ್ಯ ಸಾನಿಧ್ಯದಲ್ಲಿ ವಹಿಸಲಿದ್ದಾರೆ.

- Advertisement -
Ad imageAd image

ಸ್ವಸ್ತಿ ಶ್ರೀ ವಿಜಯಾಭ್ಯದಯ ಶ್ರೀ ಮನೃಪ ಶಾಲಿವಾಹನ ಶಕೆ 1946 ನೇ ಶ್ರೀ ಕ್ರೋಧಿನಾಮ ಸಂವತ್ಸರ ಅಶ್ವಿನ ಬಹುಳ ಅಷ್ಟಮಿ ಅಕ್ಟೋಬರ್ 24ರಂದು ಗುರುವಾರ ಬೆಳಗ್ಗೆ 11:45 ರಿಂದ 12 :15 ನಿಮಿಷದವರೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಮಂಗಳ ಧಾರಣೆಯನ್ನು ನೆರವೇರಿಸಲಾಗುವುದು ಎಂದು ವಿವರಿಸಿದರು.
ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವಂತಹ ವಧು-ವರರು ದಿನಾಂಕ 15-10-2024ರ ಒಳಗೆ ಸಮಿತಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಕುಮಾರ ಪಂಡಿತಾರಾಧ್ಯ ಸ್ವಾಮಿಜೀ 911 36 82703, ಚನ್ನಬಸವನಗೌಡ 9 4 49610513, ಟಿಎಂ ಶಿವಪ್ಪ 9448120256, ಜಿ ಶಂಭುಲಿಂಗಯ್ಯ ಗಾಣದಾಳ ಮಠ 9448801644, ಮಹಾಂತೇಶ್ 9902857157 ಬಿ ದೊಡ್ಡನಗೌಡ 9901155155 ಸಂಪರ್ಕಿಸಬಹುದು.
ಸಾಮೂಹಿಕ ವಿವಾಹಗಳು ನಗರದ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ನಡೆಯಲಿವೆ.

ಗುರು ಬಸವ ಮಠದ ಪೀಠಾಧಿಪತಿ ಬಸವಭೂಷಣ ಸ್ವಾಮೀಜಿ, ಮಾಜಿ ಶಾಸಕ ಟಿಎಂ ಚಂದ್ರಶೇಖರಯ್ಯ ಸ್ವಾಮಿ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ, ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್ ಜಿ ಬಸವರಾಜಪ್ಪ, ಮುಖಂಡರಾದ ಜಡೇಸ್ವಾಮಿ, ಎಂಆರ್ ಬಸವನಗೌಡ, ಎಚ್ ವೀರನಗೌಡ, ಬಿ ಎಂ ಜಡೆ ಸ್ವಾಮಿ, ಸಿಂಧು ಬಸವರಾಜ, ನಾಗರಾಜ ಸ್ವಾಮಿ, ವೀರಭದ್ರಗೌಡ, ಶಂಭುಲಿಂಗಪ್ಪ ಹಾಗೂ ಅರ್ಚಕ ಶಿವರುದ್ರಯ್ಯ ಸ್ವಾಮಿ ಇದ್ದರು.

ಚಿತ್ರ : ಸಿರುಗುಪ್ಪ ನಗರದ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ನೂತನ ಕಟ್ಟಡ ಉದ್ಘಾಟನೆ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹಗಳ ಬಿತ್ತಿ ಪತ್ರಗಳನ್ನು ಸ್ವಾಮೀಜಿಗಳು ಹಾಗೂ ಗಣ್ಯರು ಅನಾವರಣಗೊಳಿಸಿದರು.

Share This Article
error: Content is protected !!
";