Ad image

ಪದ್ಮಶ್ರೇಣಿ ಪ್ರಶಸ್ತಿಗಳಿಗೆ ಪ್ರಸ್ತಾವನೆಗಳ ಆಹ್ವಾನ

Vijayanagara Vani
ಪದ್ಮಶ್ರೇಣಿ ಪ್ರಶಸ್ತಿಗಳಿಗೆ ಪ್ರಸ್ತಾವನೆಗಳ ಆಹ್ವಾನ
ಚಿತ್ರದುರ್ಗ
2025ನೇ ಸಾಲಿನ ಪದ್ಮಶ್ರೇಣಿಯ ಪ್ರಶಸ್ತಿಗಳಿಗೆ ಸಂಬಂಧಿಸಿದ ಶಿಫಾರಸ್ಸಿನ ಪ್ರಸ್ತಾವನೆ ಆಹ್ವಾನಿಸಲಾಗಿದೆ. 2024ರ ಆಗಸ್ಟ್ 31 ಪ್ರಸ್ತಾವನೆ ಸಲ್ಲಿಸಲು ಕೊನೆಯ ದಿನವಾಗಿದೆ.
ಕೇಂದ್ರ ಗೃಹ ಮಂತ್ರಾಲಯ ಅಧಿಸೂಚನೆಯಂತೆ ಸಮಾಜದ ಯಾವುದೇ ಕ್ಷೇತ್ರಗಳಲ್ಲಿ ಅಂದರೆ ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜಸೇವೆ, ವಿಜ್ಞಾನ ಮತ್ತು ಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳನ್ನು, ನಾಗರೀಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ ಇತ್ಯಾದಿ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2025ನೇ ಸಾಲಿನ ಪದ್ಮಶ್ರೇಣಿಯ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಗಣರಾಜ್ಯೊತ್ಸವ ದಿನದ ಹಿಂದಿನ ದಿನದಂದು ಕೇಂದ್ರ ಸರ್ಕಾರದಿಂದ ಪ್ರಕಟಿಸಲಾಗುತ್ತದೆ.
2025ನೇ ಸಾಲಿನ ಪದ್ಮ ಶ್ರೇಣಿಯ ಪ್ರಶಸ್ತಿಗಳಿಗೆ ಅನ್ವಯಿಸುವ ನಿಯಮಾವಳಿಗಳು https://padmaawards.gov.in ವೆಬ್ಸೈಟ್ನಲ್ಲಿ ಲಭ್ಯವಿರುತ್ತವೆ.
ಪದ್ಮಶ್ರೇಣಿ ಪ್ರಶಸ್ತಿಗಳಿಗೆ ಸಂಬಂಧಿಸಿದ ಶಿಫಾರಸ್ಸಿನ ಪ್ರಸ್ತಾವನೆಯನ್ನು ಸಲ್ಲಿಸುವ ಪ್ರಕ್ರಿಯೆಯು 2024ರ ಸೆಪ್ಟೆಂಬರ್ 15ರಂದು ಮುಕ್ತಾಯಗೊಳ್ಳಲಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದ್ದು, ರಾಜ್ಯ ಸರ್ಕಾರವು ಪ್ರಸ್ತಾವನೆಗಳನ್ನು ಪರಿಶೀಲಿಸಿ ಸೆಪ್ಟೆಂಬರ್ 15ರೊಳಗಾಗಿ ಕೇಂದ್ರ ಸರ್ಕಾರಕ್ಕೆ ಆನ್ಲೈನ್ ಮೂಲಕ ಕಳುಹಿಸಬೇಕಾಗಿರುವುದರಿಂದ, ತಮ್ಮ ಪ್ರಸ್ತಾವನೆಗಳನ್ನು ಆಗಸ್ಟ್ 31 ರೊಳಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯಲ್ಲಿ ಅರ್ಜಿ ಪಡೆದು ನಮೂನೆಯಲ್ಲಿ ಸಲ್ಲಿಸುವುದು ಹಾಗೂ ಸಾಫ್ಟ್ ಪ್ರತಿಗಳನ್ನು ಇ-ಮೇಲ್ ವಿಳಾಸ [email protected]ಗೆ ಕಳುಹಿಸಬೇಕು. ಆಗಸ್ಟ್ 31ರ ನಂತರ ಬರುವ ಯಾವುದೇ ಪ್ರಸ್ತಾವನೆಗಳನ್ನು, ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.
“ಕ್ರೀಡೆಗೆ” ಸಂಬಂಧಿಸಿದಂತೆ, ಪದ್ಮಶ್ರೇಣಿ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಸಲ್ಲಿಸುವವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯಿಂದ ನಿಗಧಿತ ನಮೂನೆಗಳನ್ನು ಪಡೆದು ಪ್ರಸ್ತಾವನೆಗಳನ್ನು ಆಗಸ್ಟ್ 20 ರೊಳಗಾಗಿ ಈ ಕಚೇರಿಗೆ ಕಳುಹಿಸಿಕೊಡಲು ಹಾಗೂ ಸಾಫ್ಟ್ ಪ್ರತಿಗಳನ್ನು ಇ-ಮೇಲ್ [email protected] ಗೆ ಕಳುಹಿಸಲು ಚಿತ್ರದುರ್ಗ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
=========
Share This Article
error: Content is protected !!
";