ಬಳ್ಳಾರಿ,ಏ.26
ಕರ್ನಾಟಕ ಜಾನಪದ ಅಕಾಡೆಮಿಯು 2024 ನೇ ಸಾಲಿನಲ್ಲಿ ದಿನಾಂಕ:01.01.2024 ರಿಂದ 31.12.2024ರವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವ (ತಾಂತ್ರಿಕ ಹಾಗೂ ಪೂರ್ವಭಾವಿ ಪುಟಗಳನ್ನು ಹೊರತುಪಡಿಸಿ) ಕನಿಷ್ಟ 150 ಪುಟಗಳಿಗೂ ಮೇಲ್ಪಟ್ಟಿರುವಂತೆ, ವಿವಿಧ ನಾಲ್ಕುಪ್ರಕಾರಗಳ ಅತ್ಯುತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿ ಜಾನಪದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಿದೆ.
ಲೇಖಕರು, ಪ್ರಕಾಶಕರು, ಸಂಪಾದಕರು ತಮ್ಮ 1 ಕೃತಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002 ಇವರಿಗೆ ಮೇ 20 ರೊಳಗೆ ತಲುಪುವಂತೆ ಖುದ್ದಾಗಿ, ಕೊರಿಯರ್ ಅಥವಾ ಅಂಚೆ ಮೂಲಕ ಕಳುಹಿಸಿಕೊಡಲು ಕೋರಿದೆ.
ಈ ಪುಸ್ತಕವು ತಜ್ಞರಿಂದ ಪ್ರಕಾರವಾರು ಆಯ್ಕೆಯಾದಲ್ಲಿ, ನಂತರ ಪುಸ್ತಕ ಬಹುಮಾನಕ್ಕೆ ಲೇಖಕರಿಂದ ಉಳಿದಂತೆ 03 ಪ್ರತಿಗಳನ್ನು ಮೌಲ್ಯಮಾಪಕರ ಪರಿಶೀಲನೆಗೆ ತರಿಸಿಕೊಳ್ಳಲಾಗುವುದು.
*ಪ್ರಕಾರಗಳು:*
ಜನಪದ ಗದ್ಯ, ಜನಪದ ಪದ್ಯ, ಜನಪದ ವಿಚಾರ-ವಿಮರ್ಶೆ- ಸಂಶೋಧನೆ ಮತ್ತು ಜನಪದ ಸಂಕೀರ್ಣ.
ವಿ.ಸೂ: ಈಗಾಗಲೇ ಪುಸ್ತಕ ಬಹುಮಾನ ಪಡೆದ ಸಂಪಾದಕರು / ಲೇಖಕರು ಮತ್ತೆ ಪುಸ್ತಕ ಬಹುಮಾನ ಯೋಜನೆಗೆ ಕೃತಿಗಳನ್ನು ಕಳುಹಿಸಬಾರದು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಜಾನಪದ ಅಕಾಡೆಮಿ ಕನ್ನಡ ಭವನ, 2 ನೇ ಮಹಡಿ
ಜೆ.ಸಿ.ರಸ್ತೆ, ಬೆಂಗಳೂರು-560002 ಅಥವಾ ದೂ. 080 – 22215509 ಗೆ ಸಂಪರ್ಕಿಸಬಹುದು ಎಂದು ಕನ್ನಡ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಅವರು ತಿಳಿಸಿದ್ದಾರೆ.