Ad image

ಜಿಲ್ಲಾ ಪುನರ್ವವಸತಿ ಕೇಂದ್ರದ ಮೂಲಕ ವಿಕಲಚೇತನರ ಮನೆ ಬಾಗಿಲಿಗೆ ವಿವಿಧ ಸೌಲಭ್ಯ ಒದಗಿಸಲು ಕ್ರಮ : ಜಗದೀಶ್.ಜಿ

Vijayanagara Vani
ಬೆಂಗಳೂರು ನಗರ ಜಿಲ್ಲೆ, ಮಾರ್ಚ್ 18: ವಿಕಲಚೇತನರನ್ನು ಗುರುತಿಸಿ ಅವರಿಗೆ ಶೈಕ್ಷಣಿಕ, ಉದ್ಯೋಗ ಮತ್ತು ತರಬೇತಿ, ಸಾಮಾಜಿಕ ಭದ್ರತೆ ಹಾಗೂ ಪುನರ್ವಸತಿ ಸೇವೆಗಳನ್ನು ಅವರ ಮನೆ ಬಾಗಿಲಿನಲ್ಲೇಯೇ ಕಲ್ಲಿಸಿ ಅವರ ಸರ್ವಾಂಗೀಣ ಅಭಿವೃದ್ಧಿಗಾಗಿ ಜಿಲ್ಲಾ ಪುನರ್ವವಸತಿ ಕೇಂದ್ರಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಜಿಲ್ಲಾ ಪುನರ್ವವಸತಿ ಕೇಂದ್ರದ ಮೂಲಕ ವಿಕಲಚೇತನರು ಸರ್ಕಾರದ ಸೌಲಭ್ಯಗಳನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್.ಜಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ, ಜಿಲ್ಲಾ ಪುನರ್ವವಸತಿ ಕೇಂದ್ರದ, ಜಿಲ್ಲಾ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಗಳೂರು ನಗರ ಜಿಲ್ಲಾ ಪುನರ್ವವಸತಿ ಯೋಜನೆಯನ್ನು ಕುಮಾರ ಪಾರ್ಕ್ ಟ್ರಸ್ಟ್(ರಿ), ಈ ಸ್ವಯಂ ಸೇವಾ ಸಂಸ್ಥೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕೇಂದ್ರದಲ್ಲಿ ತಪಾಸಣಾ ಶಿಬಿರಗಳ ಮೂಲಕ ವಿಕಲಚೇತನರ ಸಮೀಕ್ಷೆ ಹಾಗೂ ಗುರುತಿಸುವಿಕೆ, ವಿಕಲತೆಯನ್ನು ತಡೆಗಟ್ಟುವುದು. ವಿಶಿಷ್ಟ ಗುರುತಿನ ಚೀಟಿ (ಯು.ಡಿ.ಐ.ಡಿ ಕಾರ್ಡ್) ಮಾಡಿಸುವುದು. ಅಗತ್ಯ ಸಾಧನ ಸಲಕರಣೆಗಳನ್ನು ನೀಡುವುದು. ರಿಯಾಯಿತಿ ದರದ ಬಸ್ ಪಾಸ್, ಅಂಗವಿಕಲತೆಯ ನಿವಾರಣಾ ಶಸ್ತ್ರಚಿಕಿತ್ಸೆಗೆ ಮಾಹಿತಿ ನೀಡುವುದು ಹಾಗೂ ಇಲಾಖೆಯ ಎಲ್ಲಾ ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅಗತ್ಯ ಸೌಲಭ್ಯಗಳನ್ನು ಹಾಗೂ ಪುನರ್ವಸತಿಯನ್ನು ಸರ್ಕಾರದಿಂದ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸೌಲಭ್ಯಗಳನ್ನು ಪಡೆಯಲು, ಜಿಲ್ಲಾ ಪುನರ್ವವಸತಿ ಕೇಂದ್ರ, ಕುಮಾರ ಪಾರ್ಕ್ ಟ್ರಸ್ಟ್(ರಿ), ದೂರವಾಣಿ ಸಂಖ್ಯೆ-080-41179472 ಅನ್ನು ಸಂಪರ್ಕಿಸಿ, ವಿಕಲಚೇತನರು ಸರ್ಕಾರದ ಸೌಲಭ್ಯಗಳನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಬೇಕಾಗಿ ತಿಳಿಸಿದರು.
ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಅಪರ ಜಿಲ್ಲಾಧೀಕಾರಿಗಳಾದ ಡಾ.ಜಗದೀಶ್.ಕೆ, ಜಿಲ್ಲಾ ಅಂಗವಿಕಲಕರ ಕಲ್ಯಾಣಾಧಿಕಾರಿ ಕೃಷ್ಣಮೂರ್ತಿ ಕೆ, ಕುಮಾರ ಪಾರ್ಕ್ ಟ್ರಸ್ಟ್(ರಿ)ನ ಸದಸ್ಯ ಕಾರ್ಯದರ್ಶಿ ರಾಜು ಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share This Article
error: Content is protected !!
";