ಬೆಂಗಳೂರು, ಮೇ 30:ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಬಿ ದಯಾನಂದ ಅವರು ನೇಮಕವಾಗಿದ್ದು, ಈ ಮೊದಲು ಇದೆ ಸ್ಥಾನದಲ್ಲಿದ್ದ ಸಿ.ಎಚ್. ಪ್ರತಾಪ್ ರೆಡ್ಡಿ ಅವರನ್ನು ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಹಿನ್ನೆಲೆ ಯಲ್ಲಿ ಜಾತ್ಯತೀತ ಜನತಾದಳದ ಯುವ ಮುಖಂಡ ಸದಾ ಜೆಡಿಎಸ್ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಹಸನ್ಮುಖಿಯರಾಗಿರುವ ಸಂಘ ಜೀವಿ ಡಿ,ಸಿ ನಾಯಕ್ ರವರು ಬೆಂಗಳೂರಿನ ನೂತನ ಪೊಲೀಸ್ (ಕಮಿಷನರ್) ಆಯುಕ್ತರಾಗಿ ನೇಮಕಗೊಂಡ ಅವರನ್ನು ಭೇಟಿ ಮಾಡಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು
ನೂತನ ಪೊಲೀಸ್ ಕಮಿಷನರ್
ದಯಾನಂದ ಅವರು 1994ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದರು, 2005 ರಲ್ಲಿ ದಕ್ಷಿಣ ಕನ್ನಡದ ಪೊಲೀಸ್ ಅಧೀಕ್ಷಕರಾಗಿದ್ದ ಅವಧಿಯಲ್ಲಿ ಪೊಲೀಸ್ ಬ್ಲಾಗ್ ಅನ್ನು
ಪ್ರಾರಂಭಿಸಿದರು. ಬ್ಲಾಗ್‌ಗಾಗಿ, ನ್ಯೂ ನಲ್ಲಿ ನಡೆದ ಇ-ಆಡಳಿತದ
ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರಿಗೆ ‘ಇ-ಗೌವ್
ಅವಾರ್ಡ್ ಫಾರ್ ಇನ್ನೋವೇಶನ್-2006′ ನೀಡಲಾಯಿತು.2006ರಲ್ಲಿ ದೆಹಲಿ. 2003-04ರಲ್ಲಿ ದಯಾನಂದ ಅವರು ಕೊಸೊವೊದಲ್ಲಿ ವಿಶ್ವಸಂಸ್ಥೆಯ ಮಿಷನ್‌ನಲ್ಲಿ ನಾಗರಿಕ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.. ಈಗ ಅಧಿಕಾರ ಸ್ವೀಕರಿಸಿದ ನಂತರ ಸಂಚಾರ ನಿರ್ವಹಣೆ ಮತ್ತು ಸೈಬರ್ ಕ್ರೈಂ ಆದ್ಯತೆ ನೀಡಲಿದ್ದಾರೆ ಎಂದು ತಿಳಿಸಿದರು