ಅನಾಥ ಮಕ್ಕಳಿಗೆ, ಕೇವಲ ತಂದೆ ಅಥವಾ ಕೇವಲ ತಾಯಿ ಇರುವ ಮಕ್ಕಳಿಗೆ, ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಬಡ ಮಕ್ಕಳಿಗೆ, ಯಾವುದೇ ಜಾತಿ ಭೇದವಿಲ್ಲದೆ ಸೇರಿಸಿಕೊಳ್ಳುವ, ಸಂಪೂರ್ಣ ಉಚಿತವಾಗಿ ವಿದ್ಯಾಭ್ಯಾಸ ಮಾಡಲು ಅವಕಾಶ ಒದಗಿಸುವ, ಹಾಸ್ಟೆಲ್ ಇರುವ ಪ್ರೌಢಶಾಲೆಯೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿದೆ..! ಖಂಡಿತವಾಗಿಯೂ ತಮಗಿದೊಂದು ಸುವರ್ಣಾವಕಾಶ ಕಲ್ಪಿಸಿಕೊಡಲಿದೆ..!
ಸೇರ ಬಯಸುವ ಆಸಕ್ತ ಮಕ್ಕಳು ಹಾಗೂ ಸೇರಿಸ ಬಯಸುವ ತಂದೆ/ತಾಯಿ/ಪಾಲಕ/ಪೋಷಕರು ದಯಮಾಡಿ ಗಮನಿಸಿ:
8 ರಿಂದ 10 ನೇ ತರಗತಿಯ ವರೆಗೆ ಕನ್ನಡ ಮಾಧ್ಯಮದ ಪ್ರತಿಷ್ಠಿತ ಜೆಎಸ್ಎಸ್. ಪ್ರೌಢಶಾಲೆಯಲ್ಲಿ ಪ್ರವೇಶಾತಿಯೂ ಸೇರಿದಂತೆ, ಊಟ, ವಸತಿ, ಸಮವಸ್ತ್ರ, ನೋಟ್ಸ್, , ಶೂಸ್ ಹೀಗೇ ಎಲ್ಲವೂ ಇಲ್ಲಿ ಸೇರಲಿರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಉಚಿತವಾಗಿ ಸಿಗಲಿವೆ..!
ವಿವಿಧ ಸಂಕಷ್ಟಗಳ ಕಾರಣಗಳಿಂದ ಓದಲಾಗದೆ
ತೊಂದರೆಯಲ್ಲಿರುವ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ವಸತಿ/ಆಶ್ರಯ/ಶಿಕ್ಷಣ ನೀಡಲಿರುವ ಹಾಸ್ಟೆಲ್ ಹಾಗೂ ಈ ಪ್ರೌಢಶಾಲೆ, ನಿಜಕ್ಕೂ ಬಡ ಮಕ್ಕಳ ಪಾಲಿಗೆ ಆಶಾಕಿರಣವಷ್ಟೇ ಅಲ್ಲ, ನಾಳೆಯ ಬಾಳಿನ ಹೆಗ್ಗುರಿಗಾಗಿ ಸಾಗಲಿರುವ ನವ ಚೈತನ್ಯಗಳಿಗೆ ದಾರಿ ತೋರುವ ದೊಂದಿಗಳು; ಪ್ರೀತಿಯ ಪಂಜುಗಳು..!
ಬನ್ನಿ ವಿದ್ಯಾರ್ಥಿಗಳೆ ಈ ದೊಂದಿ/ಪಂಜುಗಳ ಮಮತೆಯ ಸಮತೆಯ ಮಧುರ ಮುಂಬೆಳಕಲ್ಲಿ ನಿಮ್ಮ ವಿದ್ಯಾಭ್ಯಾಸದ ಕನಸನ್ನು ನನಸಾಗಿಸಿಕೊಳ್ಳಿ..!
ಮೊದಲು ಸಂಪರ್ಕಿಸುವವರಿಗೆ ಅಥವಾ ಬಂದವರಿಗೆ ಪ್ರಥಮಾಧ್ಯತೆ..!
ಈಗಲೇ ಕರೆಮಾಡಿ ಸಂಪರ್ಕಿಸಿ ಅಥವಾ ಸ್ವತಃ ಬಂದು, ಮುಂದೆ ಹೆಸರಿಸಿದ ಶಿಕ್ಷಕ ಶಿಕ್ಷಕಿಯರ ಕಂಡು ತಮ್ಮ ಮಕ್ಕಳಿಗೆ ಅವಕಾಶ ಖಚಿತಪಡಿಸಿಕೊಳ್ಳಿ..!
ಪ್ರವೇಶಾತಿಗಾಗಿ ತಾವು ಸಂಪರ್ಕಿಸಬೇಕಾದ/ಅಥವಾ ಕಾಣಬೇಕಾದ ಶಿಕ್ಷಕ/ಶಿಕ್ಷಕಿಯರ ಹೆಸರು ಹಾಗೂ ಪೋನ್ ವಿವರ:
೧) ಶ್ರೀ ಕೆ.ಎನ್.ರವಿಶಂಕರ್
Mo: 9845112450
೨)ಶ್ರೀ ಮಂಜುನಾಥ
Mo: 9902034507
೩)ಶ್ರೀ ಸಿದ್ದಲಿಂಗಪ್ಪ
Mo:9980813822
೪)ಶ್ರೀ ವೀರಭದ್ರಸ್ವಾಮಿ
Mo : 9986915484
೫)ಶ್ರೀ ಆನಂದ್
Mo: 9731026205
“ತಮ್ಮ ಬರುವೆಮಗೆ ಪ್ರಾಣ ಜೀವಾಳ..!”
ತಮ್ಮ ನಿರೀಕ್ಷೆಯಲ್ಲಿ..!
ಶರಣಾರ್ಥಿಗಳೊಂದಿಗೆ…
ಇಂತೀ,
ತಮ್ಮ ವಿಶ್ವಾಸಿ…
ವಿ.ನಾಗೇಶ್
ಮುಖ್ಯಶಿಕ್ಷಕರು, ಜೆಎಸ್ಎಸ್ ಪ್ರೌಢಶಾಲೆ. ಮೈಸೂರು
ವಿಳಾಸ:
ಜೆಎಸ್ಎಸ್. ಪ್ರೌಢಶಾಲೆ
ಎರಡನೇ ಹಂತ, ವಿಜಯನಗರ
100 ಅಡಿ ರಸ್ತೆ,