ಗಂಗಾವತಿ: ನಗರದ ಹಿರೇಜಂತಕಲ್ ವಿರುಪಾಪುರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಪುಟ್ಟರಾಜ ಗವಾಯಿಗಳವರ ಹದಿನೈದನೆಯ ಪುಣ್ಯಸ್ಮರಣೆ ಹಾಗೂ ಗಂಗಾವತಿಯ ಹಿರಿಯ ತಬಲವಾದಕ ವೀರೇಶ್ ಕಲ್ಮಠ ಅವರ ಪ್ರಥಮ ಪುಣ್ಯಸ್ಮರಣೆಯ ಪ್ರಯುಕ್ತ ಆಯೋಜಿಸಿದ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಕಾರಿಗಳಾದ ಪರಮಪೂಜ್ಯ. ಶ್ರೀ ಕಲ್ಲಯ್ಯ ಅಜ್ಜ ಅವರು ವಹಿಸಿ ಆಶೀರ್ವಚನ ನೀಡಿದರು..ಗುರು ಪುಟ್ಟರಾಜರು ನುಡಿದಂತೆ ಗದಗ ಬಳಿಕ ಗಂಗಾವತಿ ಎರಡನೆಯ ಕೈಲಾಸ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಂತಹ ಶಿಷ್ಯ ಪರಂಪರೆ ಭಕ್ತರು ಈ ಪುಣ್ಯ ಭೂಮಿಯಲ್ಲಿ ವಾಸಿಸಿದ್ದಾರೆ. ಹೀಗಾಗಿ ವಿಪ್ರ ನಗರದಲ್ಲಿರುವ ಎರಡು ಎಕರೆ 40 ಗುಂಟೆ ಜಾಗವನ್ನು ಆಶ್ರಮಕ್ಕಾಗಿ ದಾನ ನೀಡಿದ ಪಾಮಪ್ಪ ಕುಟುಂಬದ ಕಾರ್ಯ ಮೆಚ್ಚುವಂತದ್ದು. ಈ ಆಶ್ರಮ ಸಮಾಜದಲ್ಲಿನ ಬಡ ಬಗ್ಗರಿಗೆ ದೀನ ದಲಿತರಿಗೆ ವಿಕಲಾಂಗರಿಗೆ. ಉಚಿತವಾಗಿ ಸಂಗೀತ ಶಿಕ್ಷಣವನ್ನು ಕಲ್ಪಿಸುವ ಕಾರ್ಯ ಹಾಗೂ ಆಶ್ರಮಕ್ಕೆ ಅಗತ್ಯ ಇರುವ ಸೌಲಭ್ಯಕ್ಕೆ ದಾನಿಗಳು ಮುಂದಾಗಬೇಕೆಂದು ತಿಳಿಸಿದರು.ಇದಕ್ಕೆ ಸಂಬಂಧಿಸಿದಂತೆ ಪುಟ್ಟರಾಜರ ಪರಮಶಿಷ್ಯರಾದ ಕಾಶಿಮ್ ಅಲಿ ಮುದ್ದ ಬಳ್ಳಿಯವರು ತಕ್ಷಣವೇ 1 ಲಕ್ಷ. ಒಂದು ರೂಪಾಯಿ ಆಶ್ರಮಕ್ಕೆ ಕಲ್ಪಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ . ಆರ್ಯವೈಶ್ಯ ಸಮಾಜದ ನವ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಠಿ. ಮಾಜಿನಗರ ಸಭೆ ಅಧ್ಯಕ್ಷರಾದ ಎಸ್ ರಾಘವೇಂದ್ರ ಶ್ರೇಷ್ಠಿ. ಹಿರಿಯ ಸಂಗೀತ ಕಲಾವಿದ. ಹೆಚ್ ಮಹಾಬಲೇಶ್ವರ ವಕೀಲರು. ವೆಂಕಟೇಶ ದಾಸನಾಳ. ಶ್ರೀಮತಿ ಹೂಗಾರ ಶಾಂತಮ್ಮ.ಸೇರಿದಂತೆ ವೇದಿಕೆಯಲ್ಲಿನ ಗಣ್ಯರುಜ್ಯೋತಿ ಬೆಳಗಿಸಿ. ಪುಟ್ಟರಾಜರ ಹಾಗೂ ವೀರೇಶ್ ಕಲ್ಮಠ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.