ಸಿರುಗುಪ್ಪ.ನ.25. ತಾಲ್ಲೂಕಿನ ಸಮೀಪದ ಭೈರಗಾಮದಿನ್ನೆ ಗ್ರಾಮದ ರಂಗಕಲಾವಿದ ಆರ್.ಪ್ರಕಾಶಗೌಡ ಮತ್ತು ಆರ್.ಅನ್ನಪೂರ್ಣ ದಂಪತಿಗಳ ಮಕ್ಕಳಾದ ಅತಿಥಿ ಶಿಕ್ಷಕ ಆರ್.ಪಿ.ಈಶಪ್ಪ ಮತ್ತು ರಂಗ ಸಂಶೋಧಕ ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆಯವರು ಬೆಂಗಳೂರಿನ ‘ಕರುನಾಡ ಕನ್ನಡ ಕಲಾ ಸಿರಿ ಬಳಗ (ರಿ)’ ವತಿಯಿಂದ ಕೊಡಮಾಡುವ ೨೦೨೪-೨೫ನೇ ಸಾಲಿನ ರಾಜ್ಯಮಟ್ಟದ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪ್ರಧಾನ ಮಾಡಲಾಗಿದೆ.
ಸ್ನಾತಕೋತ್ತರ ರಂಗ ಪದವೀಧರರಾದ ಈ ಸಹೋದರರು ಸರ್ಕಾರಿ ಕನ್ನಡ ಶಾಲೆ, ಕನ್ನಡ ಭಾಷೆ ಹಾಗೂ ಕನ್ನಡ ರಂಗಭೂಮಿ ಅಭಿವೃದ್ಧಿ ಕಾರ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿರುವುದಕ್ಕಾಗಿ ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಡಾ.ಅಂಬರೀಶ್. ಸಿ.ಎಂ ಪತ್ರಿಕೆಗೆ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಆರ್.ಪಿ ಸಹೋದರರು ಆಂಧ್ರದ ಅಂಟಿಕೊಂಡಿರುವ ಪುಟ್ಟ ಗ್ರಾಮದಲ್ಲಿ ಜನಿಸಿ ಈ ಮಟ್ಟಕ್ಕೆ ತಲುಪಲು ಕಾರಣಭೂತರಾದ ತಂದೆ ತಾಯಿಗೂ, ಗುರುಗಳಿಗೆ ಧನ್ಯವಾದಗಳು. ಅಲ್ಲದೆ ಸ್ಥಳೀಯ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಮಾಡಬೇಕಾದ ಕಾರ್ಯವನ್ನು ಬೆಂಗಳೂರಿನ ಈ ಸಂಸ್ಥೆ ಮಾಡಿರುವುದು ನಿಜಕ್ಕೂ ಅಚ್ಚರಿ. ಈ ಭಾಗದ ಅನೇಕ ಕಲಾ ಸಾಧಕರು ಎಲೆಮರೆಯ ಕಾಯಿಯಂತೆ ಬದುಕುಳಿದಿದ್ದಾರೆ. ಇನ್ನಾದರೂ ಇಲ್ಲಿನ ಸ್ಥಳೀಯ ಸಂಸ್ಥೆಗಳು ಅವರನ್ನು ಗುರುತಿಸಿ ಸೂಕ್ತ ಮನ್ನಣೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗಿ ಮನವಿಯನ್ನು ಮಾಡಿದರು.